ರಾಜ್ಯದಲ್ಲೇ ಪುತ್ತೂರಿಗೆ ಮೊದಲ ಗಾಯತ್ರಿ ಭವನ ಕಟ್ಟಡಕ್ಕೆ ಅನುದಾನ ಬಿಜೆಪಿ ಕಚೇರಿಯಲ್ಲಿ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಚ್ಚಿನಾಂದ ಮೂರ್ತಿ

Puttur_Advt_NewsUnder_1
Puttur_Advt_NewsUnder_1

ಅತಿ ಶೀಘ್ರದಲ್ಲಿ ಭವನ ನಿರ್ಮಾಣ – ಸಂಜೀವ ಮಠಂದೂರು

ಪುತ್ತೂರು: ಸರಕಾರದ ಸೌಲಭ್ಯ ಎಲ್ಲರಿಗೂ ಸಿಗಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯಕ್ಕೂ ನ್ಯಾಯ ಕೊಡುವ ಕೆಲಸ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ರಾಜ್ಯದ ಮೊದಲ ಗಾಯತ್ರಿ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದು, ಗಾಯತ್ರಿ ದೇವರ ಪೂಜೆ ಪುತ್ತೂರಿನಿಂದಲೇ ಆರಂಭಗೊಳ್ಳಲಿ ಎಂದು ಅವರು ಹೇಳಿದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ರಾಜ್ಯಪ್ರವಾಸ ಕೈಗೊಂಡ ಅವರು ಅ.೯ರಂದು ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ಈ ಸಂದರ್ಭ ಶಾಸಕ ಸಂಜೀವ ಮಠಂದೂರು ಅವರು ಸಚ್ಚಿದಾನಂದಮೂರ್ತಿ ಅವರಿಗೆ ಶಾಲು ಹೊದಿಸಿ ಗೌರವಿಸಿದರು. ಬ್ರಾಹ್ಮಣ ಸಮುದಾಯದಲ್ಲೂ ಅತೀ ಕಡು ಬಡವರಿದ್ದಾರೆ. ಅವರ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯಬೇಕು. ಈ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬಹುಮಾನ ಘೋಷಣೆ ಮಾಡಿದ್ದೆ. ಸುಮಾರು ೧೫೦ ಮಂದಿಗೆ ಉಚಿತ ವಿದ್ಯಾಭ್ಯಾಸ ಹೀಗೆ ಉನ್ನತ ಶಿಕ್ಷಣಕ್ಕೂ ಸರಕಾರ ಸಹಕಾರ ನೀಡಲಿದೆ ಎಂದರು.

ಅತಿ ಶೀಘ್ರದಲ್ಲಿ ಭವನ ನಿರ್ಮಾಣ:
ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಬಡ ಬ್ರಾಹ್ಮಣರಿಗೆ ನ್ಯಾಯಕೊಡುವ ದೃಷ್ಟಿಯಿಂದ ಬ್ರಾಹ್ಮಣ ನಿಗಮ ಮಾಡುವ ಮೂಲಕ, ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯಕ್ಕೆ ನ್ಯಾಯ ಕೊಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೆಲಸ ಮಾಡುತ್ತಿದೆ. ನೂತನ ನಿಗಮದ ಅಧ್ಯಕ್ಷರು ಪುತ್ತೂರಿನಲ್ಲಿ ಬ್ರಾಹ್ಮಣ ಸಮಾಜದ ಕಟ್ಟಡ ನಿರ್ಮಾಣಕ್ಕೆ ರೂ. ೧ ಕೋಟಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಹಾಗಾಗಿ ಒಂದು ವಾರದಲ್ಲಿ ನಾನು ಕೂಡಾ ನಿವೇಶನದ ಅಂತಿಮ ಘಟಕ್ಕೆ ಬಂದಿದ್ದೇವೆ. ಮುಂದೆ ಪುತ್ತೂರಿನಲ್ಲಿ ದೊಡ್ಡ ಭವನ ನಿರ್ಮಾಣ ಆಗಲಿದೆ ಎಂದರು. ಜಿಲ್ಲಾ ವಿಭಾಗ ಸಹ ಪ್ರಭಾರಿ ಗೋಪಾಲಕ್ರಷ್ಣ ಹೇರಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕ್ರಷ್ಣ ಆಳ್ವ ಸ್ವಾಗತಿಸಿ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ವಂದಿಸಿದರು.

ಸಂತಾಪ:
ಅ.8ರಂದು ನಿಧನರಾದ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್‌ರವರಿಗೆ ಸಂತಾಪ ಸೂಚನೆ ಕಾರ್ಯಕ್ರಮ ಇದೇ ಸಂದರ್ಭದಲ್ಲಿ ನಡೆಯಿತು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಯಂತಿ ನಾಯಕ್, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್ ಪೆರಿಯತ್ತೋಡಿ, ಶ್ರೀಮತಿ ಜಯಶ್ರೀ ಎಸ್ ಶೆಟ್ಟಿ, ರಾಜೇಶ್ ಬನ್ನೂರು, ಬನ್ನೂರು ಬೂತ್ ೫೫ರ ಅಧ್ಯಕ್ಷ ಗೋಪಾಲಕೃಷ್ಣ ಪಡೀಲು, ಕಾರ್ಯದರ್ಶಿ ಆನಂದ ಕುಲಾಲ್, ನಗರ ಮಂಡಲ ಕಾರ್ಯದರ್ಶಿ ಅಶೋಕ್ ಹಾರಾಡಿ, ನಗರ ಮಂಡಲ ಸದಸ್ಯರಾದ ಹರೀಶ್ ಮಾಲ್ತೋಟ್ಟು, ವಿಶ್ವನಾಥ ಕುಲಾಲ್, ಗ್ರಾಮಾಂತರ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ಉಪಾಧ್ಯಕ್ಷರಾದ ದಿನೇಶ್ ಕೈಪಂಗಳ ದೋಳ, ರಾಘವೇಂದ್ರ ಪ್ರಭು, ತಾಲೂಕು ಪಂಚಾಯತ್ ಸದಸ್ಯೆ ಮೀನಾಕ್ಷಿ ಮಂಜುನಾಥ್, ನಗರಸಭಾ ಸದಸ್ಯರಾದ ಶೀನಪ್ಪ ನಾಯ್ಕ, ಪುತ್ತೂರು ಕೆಡಿಪಿ ಸದಸ್ಯರಾದ ಅಬ್ದುಲ್ ಕುಂಞ್ಞ ಮುಂಡೂರು, ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾದ ಉಷಾಚಂದ್ರ ಮುಳಿಯ, ಕಾರ್ಯದರ್ಶಿ ಚಿತ್ರಲೇಖ ರೈ ಮಾಡ್ನೂರು, ಮನೋಹರ್ ರೈ ಬನ್ನೂರು, ಶಿವರಾಮ ಭಟ್ ಕೊಳ್ತಿಗೆ, ನೆಟ್ಟಣಿಗೆಮುಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವಿಜಯಕುಮಾರ್ ರೈ ಕೋರಂಗ, ನಗರ ಮಾಜಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಹಾರಾಡಿ, ಮಹಾಭಲೇಶ್ವರ ಭಟ್ ವಿಟ್ಲಮುಡ್ನೂರು, ನಗರ ಮಂಡಲ ಕಾರ್ಯದರ್ಶಿ ಗೋವರ್ಧನ್ ಕುಮೆರಡ್ಕ, ಸುಧಾಕರ ರಾವ್ ಆರ್ಯಾಪು, ಸಂದೀಪ್ ಲೋಬೋ, ರಾಜ್ಯ ಯುವ ಮೋರ್ಚಾದ ಸದಸ್ಯರಾದ ಅಕ್ಷಯ ರೈ ದಂಬೆಕ್ಕಾನ, ಬಿಜೆಪಿ ಕಾರ್ಯಾಲಯ ಕಾ ರುಕ್ಮಯ್ಯ ಇದ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.