HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಮದುವೆ ನಿರಾಕರಣೆ: ಪೊಲೀಸ್ ದೂರು

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಮನೆಯ ವಿರೋಧವನ್ನು ಲೆಕ್ಕಿಸದೆ ಪ್ರೀತಿಸುತ್ತಿದ್ದಾಕೆ ಅಂತಿಮವಾಗಿ ಮನೆಯವರ ಒಪ್ಪಿಗೆ ಪಡೆದು ವಿವಾಹಕ್ಕೆ ದಿನ ನಿಗದಿ ಪಡಿಸುವ ಹಂತದಲ್ಲಿ ಮದುವೆ ಬೇಡವೆಂದು ನಿರಾಕರಣೆ ಮಾಡಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಆಕೆ ಮದುವೆ ಬೇಡವೆಂದು ನಿರಾಕರಿಸಲು ಆಕೆಯ ಮನೆ ಮಂದಿಯ ಒತ್ತಡ ತಂತ್ರವೇ ಕಾರಣವಾಗಿರಬಹುದೆಂದು ಆಪಾದಿಸಿ ಯುವಕನೋರ್ವ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾನೆ.

ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ನಿವಾಸಿ ಯುವಕ ಪೊಲೀಸರಿಗೆ ದೂರು ನೀಡಿದ್ದು, ಹಿರೆಬಂಡಾಡಿ ಗ್ರಾಮದ ನಿವಾಸಿಯಾಗಿರುವ ಯುವತಿಯು ಕಳೆದ ೫ವರ್ಷದಿಂದ ತನ್ನನ್ನು ಪ್ರೀತಿಸುತ್ತಿದ್ದು, ತನ್ನನಲ್ಲದೆ ಬೇರಾರನ್ನೂ ವಿವಾಹವಾಗುವುದಿಲ್ಲವೆಂದು ಪ್ರತಿಪಾದಿಸುತ್ತಿದ್ದಳು. ಅಂತಿಮವಾಗಿ ಆಕೆಯ ಮನೆಮಂದಿಯ ಸಮ್ಮತಿ ದೊರೆತು ಉಭಯ ಕುಟುಂಬಗಳು ಮಾತುಕತೆಯಾಡಿ ವಿವಾಹಕ್ಕೆ ದಿನ ನಿಗಡಿಪಡಿಸುವ ಹಂತದಲ್ಲಿ ಆಕೆ ವಿವಾಹಕ್ಕೆ ನಿರಾಕರಣೆ ಮಾಡಿ, ಸಂಪರ್ಕರಹಿತವಾಗಿದ್ದಾಳೆ. ಇದಕ್ಕೆ ಆಕೆಯ ಮನೆಯವರ ಒತ್ತಡ ಅಥವಾ ಬೆದರಿಕೆಯು ಕಾರಣವಾಗಿರಬಹುದೆಂದು ಆರೋಪಿಸಿರುವ ಯುವಕನು ತನಗೆ ನ್ಯಾಯ ಒದಗಿಸಬೇಕೆಂದು ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾನೆ. ಉಪ್ಪಿನಂಗಡಿ ಪೊಲೀಸರು ದೂರು ಸ್ವೀಕರಿಸಿ ವಿಚಾರಣೆ ನಡೆಸುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.