ಪುತ್ತೂರು ಅಂಚೆ ವಿಭಾಗದ ವತಿಯಿಂದ ರಾಷ್ಟ್ರೀಯ ಅಂಚೆ ಸಪ್ತಾಹ ಆರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪ್ರತೀ ವರ್ಷದಂತೆ ಈ ವರ್ಷವೂ ಕೂಡಾ ಪುತ್ತೂರು ಅಂಚೆ ವಿಭಾಗದ ವತಿಯಿಂದ ಅ.9ರಿಂದ ಒಂದು ವಾರ ಪರ್ಯಂತ ಜಾಗತಿಕ ಅಂಚೆ ದಿನ ಹಾಗೂ ರಾಷ್ಟ್ರೀಯ ಅಂಚೆ ಸಪ್ತಾಹವನ್ನು ಆಚರಿಸಲಾಗುತ್ತಿದ್ದು, ಸಪ್ತಾಹದಲ್ಲಿ ಪ್ರತೀ ದಿವಸವನ್ನೂ ಅಂಚೆ ವಿಭಾಗದಿಂದ ಜನರಿಗೆ ನೀಡುವ ವಿವಿಧ ಸೇವೆಗಳಿಗೆ ಮೀಸಲಿಡಲಾಗುವುದು.

ಅ.10ರಂದು, ಹಣಕಾಸು ದಿನವನ್ನಾಚರಿಸುತ್ತಾ ಜನರಲ್ಲಿ ಸೇವಾ ಮನೋಭಾವವನ್ನು ಅಭಿವೃದ್ಧಿ ಪಡಿಸಲು ಪ್ರತ್ನಿಸುವುದು, ಅ.೧೨ರಂದು ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಜೀವ ವಿಮಾ ದಿನವನ್ನಾಚರಣೆಯ ಮೂಲಕ ನಾಗರಿಕರ ಭವಿಷ್ಯದ ರಕ್ಷಣೆಯನ್ನು ಮಾಡುವುದು, ಅ. ೧೩ರಂದು ಅಂಚೆ ಚೀಟಿ ಸಂಗ್ರಹಣಾ ದಿನವನ್ನಾಚರಿಸುವ ಮೂಲಕ ಭಾರತೀಯರ ವಿಶಾಲ ಇತಿಹಾಸ, ಭೌಗೋಳಿಕ ಸಮೃದ್ಧತೆ, ಸಂಸ್ಕೃತಿ, ಮತ್ತು ವೈಜ್ನಾನಿಕ ಸಾಧನೆಯನ್ನು ಸ್ಮರಿಸಲಾಗುವುದು, ಅ.೧೪ ಮತ್ತು ೧೫ ರಂದು ಅಂಚೆ ದಿನ ಮತ್ತು ವ್ಯವಹಾರಾಭಿವೃದ್ಧಿ ದಿನವನ್ನು ಆಚರಿಸುತ್ತಾ ಸಾರ್ವಜನಿಕರಿಗೆ ಪತ್ರದ ಪ್ರಾಮುಖ್ಯತೆಯನ್ನು ತಿಳಿಸುತ್ತಾ, ಭಾರತೀಯ ಅಂಚೆ ವಿಭಾಗದ ಅಂಚೆ ವೈಶಿಷ್ಟ್ಯಗಳಾಗಿರುವ ತ್ವರಿತ ಅಂಚೆ ಸೇವೆ, ಭಾಂಗಿಗಳ (ಪಾರ್ಸೆಲ್) ರವಾನೆ, ಹಾಗೂ ಇತರೇ ಸೇವೆಗಳಗಿರುವ ಆಧಾರ್ ಸೇವೆ, ಸಾಮಾನ್ಯ ಸೇವಾ ಕೇಂದ್ರಗಳ ಬಗ್ಗೆ ತಿಳಿಸಲಾಗುವುದು. ಸಪ್ತಾಹದಲ್ಲಿ ಪಿ.ಎಲ್.ಐ, ಆರ್.ಪಿ.ಎಲ್.ಐ, ೧೦ ವರ್ಷದ ಒಳಗಡೆಯಿರುವ ಹೆಣ್ಣು ಮಕ್ಕಳಿಗೆ ಮೀಸಲಿಟ್ಟಿರುವ ಸುಕನ್ಯಾ ಸಮೃದ್ಧಿ ಖಾತೆ, ಗೋಲ್ಡ್ ಬಾಂಡ್‌ಗಳ ವಿತರಣೆ, ಮತ್ತು ಗರಿಷ್ಠ ಬಡ್ಡಿ ಜಮೆಯಾಗುವ ವಿಚಾರಗಳಿಗೆ ಒತ್ತು ಕೊಡುತ್ತಾ ವಿತ್ತೀಯ ವ್ಯವಹಾರಗಳನ್ನೊಳಗೊಂಡ ನಮ್ಮ ವಿಭಾಗದ ಜನಸೇವೆಯನ್ನು ಗ್ರಾಮೀಣ ಪ್ರದೇಶದ ಎಲ್ಲಾ ಜನರಿಗೂ ತಿಳಿಯ ಪಡಿಸುವುದು ಹಾಗೂ ಸೇವೆಯ ಸದುಪಯೋಗವನ್ನು ಪಡೆಯುವಂತೆ ಅಂಚೆ ಇಲಾಖೆ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.