HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಇಂದು ವಿಶ್ವ ಮಾನಸಿಕ ಆರೋಗ್ಯ ದಿನ

Puttur_Advt_NewsUnder_1
Puttur_Advt_NewsUnder_1

ಕ್ಟೋಬರ್ 10 ನೇ ತಾರೀಕನ್ನು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಪರಿಗಣಿಸಲಾಗುತ್ತಿದೆ. ಮಾನಸಿಕ ಆರೋಗ್ಯ ಪ್ರಕರಣಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಮಾನಸಿಕ ಆರೋಗ್ಯರಕ್ಷಣಾ ಕಾರ್ಯಕ್ರಮಗಳಿಗೆ ಜನರ ಬೆಂಬಲ ಕ್ರೋಢೀಕರಿಸುವುದು ಇದರ ಉದ್ದೇಶ. 1992 ಅಕ್ಟೋಬರ್ 10 ತಾರೀಕಿನಂದು ಅಂದಿನ ಜಾಗತಿಕ ಮಾನಸಿಕ ಆರೋಗ್ಯ ಒಕ್ಕೂಟದ ಉಪಮಹಾಕಾರ್ಯದರ್ಶಿಯಾಗಿದ್ದ ರಿಚರ್ಡ್ ಹಂಟರ್ ಅವರ ಮುತುವರ್ಜಿಯಲ್ಲಿ ಮಾನಸಿಕ ಆರೋಗ್ಯ ವರ್ಷ ಎಂಬ ಹೆಸರಿನಲ್ಲಿ ವಾರ್ಷಿಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಅದರ ನೆನಪಲ್ಲಿ ನಂತರ ಪ್ರತಿವರ್ಷ ಈ ದಿನವನ್ನು ವಿಶ್ವ ಮಾನಸಿಕ ಆರೋಗ್ಯ ದಿನ ಎಂದು ಪರಿಗಣಿಸಲಾಗುತ್ತಿದೆ.

ಜಾಗತಿಕ ಮಾನಸಿಕ ಆರೋಗ್ಯ, ಮನೋರೋಗದ ಬಗೆಗಿನ ಸಾಮಾಜಿಕ ಮೂಢನಂಬಿಕೆ ಅಥವಾ ತಪ್ಪುತಿಳಿವಳಿಕೆಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶ ಈ ಅಂತಾರಾಷ್ಟ್ರೀಯ ದಿನದ್ದಾಗಿದೆ. ೧೫೦ ರಾಷ್ಟ್ರಗಳು ಸದಸ್ಯರಾಗಿರುವ ಜಾಗತಿಕ ಮಾನಸಿಕ ಆರೋಗ್ಯ ಸಂಸ್ಥೆಯು ಈ ದಿನವನ್ನು ವಿಶೇಷ ಕಾರ್ಯಕ್ರಮಗಳೊಂದಿಗೆ ಜನಸಾಮಾನ್ಯರಿಗೆ ಮಾನಸಿಕ ಆರೋಗ್ಯದ ವಿಷಯದಲ್ಲಿ ಎಚ್ಚರ ಮೂಡಿಸುವ ಕೆಲಸ ಮಾಡುತ್ತದೆ.

ವಿಶ್ವ ಮಾನಸಿಕ ಆರೋಗ್ಯ ದಿನದ ಬಣ್ಣ: ನೇರಳೆ ಬಣ್ಣ ತೊಲಗಲಿ (go purple)) ಎಂಬುದನ್ನು ಸಾಂಕೇತಿಕ ಬಣ್ಣವನ್ನಾಗಿ ಆರಿಸಲಾಗಿದೆ. ಕೋಪ ಏರಿದಾಗ ಮುಖವು ನೇರಳೆ ಬಣ್ಣಕ್ಕೆ ತಿರುಗುವುದರಿಂದ ಕೋಪ ಮಾಯವಾಗಲಿ ಅಂದರೆ ಮಾನಸಿಕ ಆರೋಗ್ಯ ನೆಲೆಸಲಿ ಎಂಬುದು ಇದರ ಅರ್ಥ.

ಪ್ರಪಂಚದಲ್ಲಿ ಮಾನಸಿಕ ಆರೋಗ್ಯದ ಸ್ಥಿತಿಗತಿ: ಅಮೇರಿಕಾ ಸಂಯುಕ್ತ ಸಂಸ್ಥಾನ, ಕೊಲಂಬಿಯಾ, ನೆದರ್‌ಲ್ಯಾಂಡ್ಸ್ (ಹಾಲೆಂಡ್) ಮತ್ತು ಉಕ್ರೇನ್‌ಗಳಲ್ಲಿ ಅತ್ಯಧಿಕ ಮನೋರೋಗ ಪ್ರಕರಣಗಳು ದಾಖಲಾಗುತ್ತಿದ್ದರೆ

ನೈಜೀರಿಯಾ, ಶಾಂಘೈ ಮತ್ತು ಇಟೆಲಿಗಳಲ್ಲಿ ಅತ್ಯಂತ ಕಡಿಮೆ. ಏಶಿಯಾ ಖಂಡದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜನರು ಹೆಚ್ಚಿನ ಗಮನ ಕೊಡುತ್ತಿಲ್ಲವಾದುದರಿಂದ ಗಣತಿಗೆ ಪರಿಗಣಿಸಲಾಗಿಲ್ಲ…!

ಭಾರತದ ಪರಿಸ್ಥಿತಿಯನ್ನು ಗಮನಿಸುವುದಾದರೆ ಇಲ್ಲಿನ ಜನಸಂಖ್ಯೆಗೆ ಹೋಲಿಸಿದಾಗ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ತುಂಬಾ ಕಡಿಮೆ ಮತ್ತು ಮೂಢನಂಬಿಕೆ ಅಥವಾ ತಪ್ಪು ತಿಳಿವಳಿಕೆಗಳೇ ಜಾಸ್ತಿ. ಇಂದಿನ ಇಂಟರ್ನೆಟ್ ಯುಗದಲ್ಲೂ ಜನರು ಔಷಧೋಪಚಾರ ಅಥವಾ ತಜ್ಞರ ಜತೆ ಸಮಾಲೋಚನೆಯ ಬದಲು ಜೋತಿಷಿಗಳ ಮೂಲಕ ಪೂಜೆಪುನಸ್ಕಾರ ಅಥವಾ ಮಾಟಮಂತ್ರಗಳನ್ನು ಮಾಡುತ್ತೇವೆ ಎಂದು ಜನರನ್ನು ವಂಚಿಸುವ ಮಂತ್ರವಾದಿಗಳ ಮೊರೆಹೋಗುವುದು ಮುಂದುವರಿಯುತ್ತಲೇ ಇದೆ. ಮನೋರೋಗ ಮತ್ತು ಮಾನಸಿಕ ಸಂಘರ್ಷ ಇವುಗಳ ಬಗೆಗಿನ ವ್ಯತ್ಯಾಸದ ಬಗ್ಗೆಯೂ ಜನರಿಗೆ ಅರಿವಿಲ್ಲ. ಮಾನಸಿಕ ಅಸ್ವಸ್ಥರನ್ನು ಅಪಹಾಸ್ಯ ಮಾಡುವುದು, ಕಡೆಗಣಿಸುವುದು, ಮನೆಯಿಂದ ಹೊರಹಾಕುವುದು ಇತ್ಯಾದಿ ಇಂದಿಗೂ ನಡೆಯುತ್ತಲೇ ಇದೆ. ಆಸ್ತಿಗೋಸ್ಕರ ಅವರು ಗುಣವಾಗುವುದೇ ಬೇಡ ಎಂಬ ಮನೋಭಾವ ಇರುವ ಕುಟುಂಬದವರೂ ಇದಕ್ಕೆ ಕಾರಣ.

ಕೆಲವು ಸರಕಾರೇತರ ಸಂಸ್ಥೆಗಳು ಮನೋರೋಗ ಪೀಡಿತರ ಶುಶ್ರೂಷಾ ಮತ್ತು ಪುನರ್ವಸತಿ ಕೇಂದ್ರಗಳ ಮೂಲಕ ಅಂತಹವರಿಗೆ ಆಶ್ರಯ ನೀಡುತ್ತಿರುವುದು ಸಂತೋಷದ ವಿಷಯ. ಮುಂದಿನ ದಿನಗಳಲ್ಲಾದರೂ ಮಾನಸಿಕ ಆರೋಗ್ಯದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಲಿ ಎಂದು ಹಾರೈಸೋಣ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.