HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ನೆಕ್ಕಿಲಾಡಿ ಗ್ರಾ.ಪಂ. ಮಾಜಿ ಸದಸ್ಯ ಪ್ರಶಾಂತ್ ಮಾನವೀಯತೆ | ಅಸ್ವಸ್ಥನಾಗಿ ಬಿದ್ದಿದ್ದ ಅಪರಿಚಿತ ಆಸ್ಪತ್ರೆಗೆ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ : ಅಸ್ವಸ್ಥನಾಗಿ ಪ್ರಯಾಣಿಕರ ತಂಗುದಾಣದಲ್ಲಿ ನರಳಾಡುತ್ತಿದ್ದ ಅಪರಿಚಿತ ವ್ಯಕ್ತಿಯನ್ನು 34 ನೇ ನೆಕ್ಕಿಲಾಡಿಯ ಮಾಜಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರ ಪ್ರಯತ್ನದ ಫಲವಾಗಿ ಆಸ್ಪತ್ರೆಗೆ ದಾಖಲಿಸುವಂತಾದ ಘಟನೆ ವರದಿಯಾಗಿದೆ.

ನೆಕ್ಕಿಲಾಡಿಯ ಪ್ರಯಾಣಿಕರ ತಂಗುದಾಣದಲ್ಲಿ ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಯುವಕನೋರ್ವ ಅಸ್ವಸ್ಥತೆಯಿಂದ ನರಳಾಟ ಮಾಡುತ್ತಿದ್ದ ದೃಶ್ಯ ಕಂಡು ಬಂದಿತ್ತಾದರೂ ಕೊರೋನಾ ಭೀತಿಯಿಂದ ಯಾರೂ ಹತ್ತಿರಕ್ಕೆ ಹೋಗಲು ಸಿದ್ದರಿರಲಿಲ್ಲ. ಸಾಯಂಕಾಲದ ವೇಳೆ ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಗ್ರಾಮ ಪಂಚಾಯತ್ ಮಾಜಿಸದಸ್ಯ ಪ್ರಶಾಂತ್ ಶಿವಾಜಿನಗರ ರವರು 108 ಆರೋಗ್ಯ ಕವಚವನ್ನು ಸಂಪರ್ಕಿಸಿ ಆಸ್ಪತ್ರೆಗೆ ದಾಖಲಿಸಲು ವಿನಂತಿಸಿದರು. ಅಲ್ಲಿಯೂ ಕೊರೋನಾ ಭೀತಿಯ ದ್ವನಿಗಳು ಕೇಳಿಸಿಕೊಂಡ ಹಿನ್ನೆಲೆಯಲ್ಲಿ ವೈರಸ್ ನಿರೋಧಕ ಕಿಟ್ ವ್ಯವಸ್ಥೆಯನ್ನು ಕಲ್ಪಿಸಿ ಆತನನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲು ಸಹಕಾರಿಯಾದರು.

ಗಂಭೀರ ಆರೋಗ್ಯ ಸ್ಥಿತಿಯಲ್ಲಿದ್ದ ಅಂದಾಜು 40 ವಯೋಮಾನದೊಳಗಿನ ಈ ವ್ಯಕ್ತಿ ಚಿಕಿತ್ಸೆ ನಡೆಯುತ್ತಿದ್ದು, ಚಿಕಿತ್ಸೆಗೆ ದೇಹ ಸ್ಪಂದಿಸುತ್ತಿದೆ ಎಂದು ತಿಳಿದುಬಂದಿದೆ.

ಕಣ್ಣ ಮುಂದೆ ಮಾನವ ಜೀವಿಯೊಂದು ನರಳಾಡುತ್ತಿದ್ದರೂ ಕೊರೋನಾ ಭೀತಿಯಿಂದ ಸನಿಹಕ್ಕೆ ಹೋಗಲಾರದ ಸಮಾಜದ ಮಧ್ಯೆ ಮಾನವೀಯತೆಯ ಕರ್ತವ್ಯ ಭಾವವನ್ನು ತೋರಿದ ಪ್ರಶಾಂತ್ ಶಿವಾಜಿನಗರ ರವರ ನಡೆ ಪ್ರಶಂಸನೀಯವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.