ನೆಟ್ಟಣಿಗೆ ಮುಡ್ನೂರು ಜಿಪಂ ಕ್ಷೇತ್ರ: ಅರಿಯಡ್ಕ , ಮಾಡ್ನೂರು ಗ್ರಾಮದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
  • ಜನಪ್ರತಿನಿಧಿಗಳು ಗ್ರಾಮಸ್ಥರ ಮನವಿಗೆ ಕಾಯದೆ ಅಭಿವೃದ್ದಿ ಕೆಲಸ ಮಾಡಬೇಕಿದೆ; ಅನಿತಾ ಹೇಮನಾಥ ಶೆಟ್ಟಿ

ಪುತ್ತೂರು; ಯಾವುದೇ ಜನಪ್ರತಿನಿಧಿ ಗ್ರಾಮದ ಅಭಿವೃದ್ದಿಗೆ ಹೆಚ್ಚಿನ ಒತ್ತನ್ನು ನೀಡಬೇಕು, ಗ್ರಾಮದ ಜನರ ಬೇಡಿಕೆಯ ಮನವಿಗೆ ಕಾಯದೆ ತಾವೇ ಸಮಸ್ಯೆಯನ್ನು ಅರಿತುಕೊಂಡು ಅವರ ಸಮಸ್ಯೆಗೆ ಪರಿಹಾರವನ್ನು ಕಲ್ಪಿಸುವಲ್ಲಿ ಮುತುವರ್ಜಿವಹಿಸಬೇಕು ಎಂದು ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಹೇಳಿದರು. ಅವರು ಅ. 9ರಂದು ನೆಟ್ಟಣಿಗೆ ಮುಡ್ನೂರು ಜಿಪಂ ಕ್ಷೇತ್ರದ ಅರಿಯಡ್ಕ ಮತ್ತು ಮಾಡ್ನೂರು ಗ್ರಾಮದಲ್ಲಿ ಜಿಪಂ ಅನಿದಾನದಿಂದ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.


ಮಾಡ್ನೂರು ಗ್ರಾಮದ ಅಶ್ವತ್ತಡಿ ಅಂಗನವಾಡಿಯ ಹೊರಾಂಗಣ ಚಾವಡಿ ನಿರ್ಮಾಣಕ್ಕೆ ಜಿಪಂನಿಂದ ಒಂದು ಲಕ್ಷ ರೂ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಚಾವಡಿ ನಿರ್ಮಾಣವಾಗಬೇಕು ಎಂಬುದು ಇಲ್ಲಿನ ಪೋಷಕರ ಬೇಡಿಕೆಯಾಗಿತ್ತು. ಇಲ್ಲಿನ ಅಂಗನವಾಡಿಯ ಸಮಸ್ಯೆ ಅರಿವಿಗೆ ಬಂದ ತಕ್ಷಣ ಅನುದಾನವನ್ನು ಬಿಡುಗಡೆ ಮಾಡಿದ್ದೇನೆ. ಅದೇ ರೀತಿ ಮಾಡ್ನೂರು ಗ್ರಾಮದ ಪಳನೀರು ಸಸ್ಪೆಟ್ಟಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಸುಮಾರು ೧೫ ವರ್ಷಗಳಿಂದ ಇಲ್ಲಿನ ನಿವಾಸಿಗಳು ಬೇಸಿಗೆಯಲ್ಲಿ ಸೇರಿದಂತೆ ಎಲ್ಲಾ ಸಮಸಯದಲ್ಲೂ ಕುಡಿಯುವ ನೀರಿಗಾಗಿ ಅಲೆದಾಡುವ ಸ್ಥಿತಿ ಉಂಟಾಗಿತ್ತು. ಜನರ ಬೇಡಿಕೆಯನ್ನು ಪರಿಗಣಿಸಿ ಸಸ್ಪೆಟ್ಟಿಯಲ್ಲಿ ೮ ಲಕ್ಷ ರೂ ವೆಚ್ಚದಲ್ಲಿ ಕುಡಿಯುವ ನೀರಿನ ಟ್ಯಾಂಕ್, ಪಂಪ್, ಪೈಪ್ ಲೈನ್ ಮತ್ತು ವಿದ್ಯುತ್ ಸಂಪರ್ಕವನ್ನು ಒದಗಿಸುವ ಮೂಲಕ ಆ ಭಾಗದ ಜನರ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ನನಗಿದೆ. ಟ್ಯಾಂಕ್ ನಿರ್ಮಾಣ ಮಾಡಿಕೊಡಿ ಎಂದು ಗ್ರಾಮಸ್ಥರು ಮನವಿ ನೀಡಿರಲಿಲ್ಲ, ಗ್ರಾಮಸ್ಥರ ಬೇಡಿಕೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದು ಅಲ್ಲಿಗೆ ಅನುದಾನವನ್ನು ನೀಡಲಾಗಿದೆ ಎಂದು ಹೇಳಿದರು.

ರಸ್ತೆ ಕಾಮಗಾರಿ ಉದ್ಘಾಟನೆ
ಅಶ್ವತ್ತಡಿ ಬಳಿ ಎರಡು ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ರಸ್ತೆ ಕಾಮಗಾರಿಯನ್ನು ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹಂತಹಂತವಾಗಿ ಅಶ್ವತ್ತಡಿ ಸಂಪರ್ಕ ರಸ್ತೆಗೆ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಜಿಪಂ ನಿಂದ ಬರುವ ಅನುದಾನವನ್ನು ಬಳಕೆ ಮಾಡಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಜಿಪಂ ನಿಂದ ಕನಿಷ್ಟ ಅನುದಾನ ದೊರೆಯುವ ಕಾರಣ ಲಭ್ಯತೆಗೆ ಅನುಗುಣವಾಗಿ ರಸ್ತೆ ಕಾಮಗಾರಿ ನಡೆಸಲಾಗಿದೆ. ಕುಡಿಯುವ ನೀರು, ಮತ್ತು ರಸ್ತೆ ನಿರ್ಮಾಣಕ್ಕೆ ಈ ಬಾರಿ ಹೆಚ್ಚು ಒತ್ತು ನೀಡಲಾಗಿದೆ ಎಂದು ಹೇಳಿದರು.

ಮಾಣಿಯಡ್ಕದಲ್ಲಿ ನೀರಿನ ಟ್ಯಾಂಕ್ ಉದ್ಘಾಟನೆ
ಮಾಡ್ನೂರು ಗ್ರಾಮದ ಮಾಣಿಯಡ್ಕದಲ್ಲಿ ಸ್ಥಳೀಯ ಗ್ರಾಮಸ್ಥರ ಬೇಡಿಕೆಯಂತೆ ಎರಡು ಲಕ್ಷ ರೂ ಅನುದಾನದಿಂದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಮಾಡಲಾಗಿದ್ದು ಅದನ್ನು ರಿಬ್ಬನ್ ಕತ್ತರಿಸುವ ಮೂಲಕ ಸದಸ್ಯರು ಉದ್ಘಾಟಿಸಿದರು. ಇಲ್ಲಿ ಟ್ಯಾಂಕ್ ನಿರ್ಮಾಣ ಮಾಡಬೇಕು ಎಂಬುದು ಗ್ರಾಮಸ್ಥರ ಬಹುವರ್ಷಗಳ ಬೇಡಿಕಯೂ ಆಗಿತ್ತು ಎಂದು ಅನಿತಾ ಹೇಮನಾಥ ಶೆಟ್ಟಿ ಹೇಳಿದರು.

ಎಲ್ಲರೂ ಮನಸು ಮಾಡಿದರೆ ಗ್ರಾಮಗಳ ಅಭಿವೃದ್ದಿ: ಹೇಮನಾಥ ಶೆಟ್ಟಿ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲಯನ್ಸ್ ವಲಯಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಎಲ್ಲಾ ಜನಪ್ರತಿನಿಧಿಗಳು ಗ್ರಾಮದ ಸಮಸ್ಯೆ ಕಡೆ ಹೆಚ್ಚಿನ ಒತ್ತು ನೀಡಿ ಅವರ ಬೇಡಿಕೆಯನ್ನು ಈಡೇರಿಸುವಂತಾಗಬೇಕು. ಗ್ರಾಪಂನಿಂದ ಹಿಡಿದು ಸಂಸದರು, ಪ್ರಧಾನಿ ಹೀಗೇ ಎಲ್ಲಾ ಜನಪ್ರತಿನಿಧಿಗಳ ಅನುದಾನವನ್ನು ಗ್ರಮಗಳಿಗೆ ನೀಡಬೇಕಿದೆ. ಗ್ರಾಮಗಳು ಅಭಿವೃದ್ದಿಯಾದೆ ದೇಶ ಅಭಿವೃದ್ದಿಯಾಗುತ್ತದೆ. ನೆಟ್ಟಣಿಗೆ ಮುಡ್ನೂರು ಜಿಪಂ ಕ್ಷೇತ್ರದಲ್ಲಿ ೫ ವರ್ಷದಲ್ಲಿ ಕೋಟಿಗಟ್ಟಲೆ ಅನುದಾನದ ಕಾಮಗಾರಿ ನಡೆದಿದೆ ಇದು ಸಂತಸದ ವಿಚಾರವಾಗಿದೆ. ಅಭಿವೃದ್ದಿಯಾಗಬೇಕು ಎಂಬ ಇಚ್ಚಾಶಕ್ತಿ ಇದ್ದರೆ ಮಾತ್ರ ಯಾವುದೇ ಇಲಾಕೆಯಿಂದ ಅನುದಾನ ತರಲು ಸಾಧ್ಯ ಆ ಇಚ್ಚಾಶಕ್ತಿ ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿಯವರಿಗೆ ಇದೆ ಎಂದು ಹೇಳಿದರು. ಜನಪ್ರತಿನಿಧಿಗಳು ಮಾಡುವ ಯಾವುದೇ ಅಭಿವೃದ್ದಿ ಕೆಲಸಗಳಿಗೂ ಸ್ಥಳೀಯ ಗ್ರಾಮೀಣ ಸಾಮಾಜಿಕ ಸಂಘಟನೆಗಳು ಕೈ ಜೋಡಿಸಬೇಕು. ಕಾವಿನಲ್ಲಿ ಸೇರಿದಂತೆ ಅರಿಯಡ್ಕ ಗ್ರಾಮದಲ್ಲಿ ನಡೆಯುವ ಪ್ರತೀಯೊಂದು ಅಭಿವೃದ್ದಿ ಕಾರ್ಯದ ಜೊತೆ ಕಾವು -ಪುತ್ತೂರು ಲಯನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘಟನೆಗಳು ಸಾಥ್ ನೀಡುತ್ತಿರುವುದು ಅಭಿನಂಧನಾರ್ಹ ಎಂದು ಹೇಳಿದರು.

ಲಯನ್ಸ್ ಕ್ಲಬ್‌ನಿಂದಲೂ ಸಹಕಾರ
ಪುತ್ತೂರು- ಕಾವು ಲಯನ್ಸ್ ಕ್ಲಬ್ ಕಳೆದ ಎರಡು ವರ್ಷಗಳಿಂದ ಕೆಲವೊಂದು ಸಮಾಜಮುಕಿ ಕಾರ್ಯಗಳನ್ನು ಮಾಡುತ್ತಿದೆ. ಗ್ರಾಮದಲ್ಲಿ ಯಾವುದೇ ಜನಪ್ರತಿನಿಧಿ ಅಭಿವೃದ್ದಿ ಕೆಲಸ ಮಾಡಿದರೆ ಅವರ ಜೊತೆ ನಾವು ಗ್ರಾಮಸ್ಥರ ಪರವಾಗಿ ಕೆಲಸ ಮಾಡಲಿದ್ದೇವೆ. ಗ್ರಾಮದ ಅಭಿವೃದ್ದಿಯಾಗಬೇಕೆಂಬುದೇ ನಮ್ಮ ಕನಸು ಆ ಲನಸನ್ನು ನನಸು ಮಾಡುವಲ್ಲಿ ಜಿಪಂ ಸದಸ್ಯೆ ಹೇಮನಾಥ ಶೆಟ್ಟಿಯವರು ಅನೇಕ ಅನುದಾನವನ್ನು ತಂದಿದ್ದಾರೆ ಇದಕ್ಕಾಗಿ ನಾವು ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ. ತಾಪಂ ನಿಂದಲೂ ಅನುದಾನ ಬರುತ್ತಿದೆ , ಶಾಸಕರಿಂದಲೂ ಬರುತ್ತಿದೆ ಅಭಿವೃದ್ದಿ ಯಾರೇ ಮಾಡಿದರೂ ಅದಕ್ಕೆ ನಮ್ಮ ಕ್ಲಬ್‌ನ ಸಹಕಾರ ಇದೆ. ಜನಪ್ರತಿನಿಧಿಯಾದವರಿಗೆ ಅಭಿವೃದ್ದಿ ಮಾಡುವ ಇಚ್ಚಾಶಕ್ತಿ ಬೇಕು ಅದು ಜಿಪಂ ಸದಸ್ಯೆ ಅವರಿಗೆ ಇದೆ ಎಂಬುದು ಸಾಭೀತು ಮಾಡಿದ್ದಾರೆ ಎಂದು ಪುತ್ತೂರು ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ರಮೇಶ್ ರೈ ಸಾಂತ್ಯ ಹೇಳಿದರು.

ಕಾರ್ಯಕ್ರಮದಲ್ಲಿ ಅರಿಯಡ್ಕ ಪಿಡಿಒ ಪದ್ಮಕುಮಾರಿ. ಅಂಗನವಾಡಿ ಮೇಲ್ವಿಚಾರಕಿ ಸರೋಜಿನಿ, ಗ್ರಾಪಂ ಸದಸ್ಯರಾದ ದಿವ್ಯನಾಥ ಶೆಟ್ಟಿ,ರವೀಂದ್ರ ಪೂಜಾರಿ,ಮಹಾಲಿಂಗ ನಾಯ್ಕ, ಮೋನಪ್ಪ ಪುಜಾರಿ, ಕಾವು ಪುತ್ತೂರು ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಪವನ್‌ರಾಂ, ಸದಸ್ಯರುಗಳಾದ ಅಮ್ಮು ರೈ, ಮೋಹನ್‌ದಾಸ್ ರೈ, ಜಗನ್ನಾಥ ರೈ, ದಿನೇಶ್ ಗೌಡ, ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ಜಗನ್ನಾಥ ರೈ ಡೆಂಬಾಳೆ, ಇಬ್ರಾಹಿಂ ಅಶ್ವತ್ತಡಿ, ಶಿವಕುಮಾರ್ ಕೌಡಿಚ್ಚಾರ್, ಮಹಮ್ಮದ್ ಬುಶ್ರಾ, ಫಳನೀರು ಈಗಲ್ ಬಾಯ್ಸ್‌ನ ಕಾರ್ಯದರ್ಶಿ ಅಝರುದ್ದೀನ್, ಅರಿಯಡ್ಕ ಗ್ರಾಪಂ ಸಿಬಂದಿ ಪ್ರಭಾಕರ್, ಆಶಾಕಾರ್ಯಕರ್ತೆ ಉಷಲತಾ, ಹರಿಣಾಕ್ಷಿ, ಅಂಗನವಾಡಿ ಸಹಾಯಕಿ ಉಷಾ ಕಾಮತ್, ದಿನೇಶ್ ಪಾಣಾಜೆ, ಮೊದಲಾದವರು ಉಪಸ್ಥಿತರಿದ್ದರು.
ಮಹಮ್ಮದ್ ಹಾಜಿ ಅಶ್ವತ್ತಡಿ ಸ್ವಾಗತಿಸಿ, ಅಂಗನವಾಡಿ ಶಿಕ್ಷಕಿ ಸವಿತಾ ವಂದಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.