HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕೋವಿಡ್ ನಿಯಮಾವಳಿಯ ಕಟ್ಟುನಿಟ್ಟಿನ ಆದೇಶ: ಮಕ್ಕಳಿಲ್ಲದೆ ಮಕ್ಕಳ ಪ್ರತಿಭೆಗಳ ಅಕ್ಷರ ಮಾಲೆ ‘ಹಾರಾ’ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

  •  ಇತರ ಶಾಲೆಗಳಿಗೆ ಪ್ರೇರಣೆ ಕೊಡುವ ಶಾಲೆ – ರಾಧಾಕೃಷ್ಣ ಬೋರ್ಕರ್
  • ಹಾರಾಡಿಯ ಮಾಸ್ಟ್ರು ಗುರುತಿಸಿಕೊಳ್ಳುವುದೇ ಗೌರವ – ಪ್ರಶಾಂತ್ ಅನಂತಾಡಿ
  • ಅಭಿವೃದ್ಧಿಗೆ ಸಹಕಾರ – ಪ್ರೇಮಲತಾ ರಾವ್

ಪುತ್ತೂರು: ಮಕ್ಕಳ ಪ್ರತಿಭೆಗಳನ್ನು ಅಕ್ಷರದಲ್ಲಿ ಹಿಡಿದಿಟ್ಟು ಮುದ್ರಿಸಿ ಅದನ್ನು ಮಕ್ಕಳ ಉಪಸ್ಥಿತಿಯಲ್ಲಿ ಅನಾವರಣ ಮಾಡಬೇಕಾದಲ್ಲಿ ಮಕ್ಕಳ ಉಪಸ್ಥಿತಿಗೆ ಕೋವಿಡ್ ನಿಯಮಾವಳಿ ಅಡ್ಡಿಯಾದ ಘಟನೆ ಪುತ್ತೂರಿನ ಹಾರಾಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅ.10ರಂದು ನಡೆದಿದೆ. ಇದೇ ಸಂದರ್ಭದಲ್ಲಿ ವರ್ಗಾವಣೆಗೊಂಡ ಸಹ ಶಿಕ್ಷಕ ಪ್ರಶಾಂತ್ ಅನಂತಾಡಿಯವರನ್ನು ಬಿಳ್ಕೊಡಲಾಯಿತು.

ಹಾರಾಡಿ ಶಾಲೆಯಲ್ಲಿ ಕಳೆದ ೪ ವರ್ಷಗಳಿಂದ ಶಿವರಾಮ ಕಾರಂತ ವೇದಿಕೆಯ ಮೂಲಕ ಅರಳು ಪ್ರತಿಭೆಗಳ ಅಕ್ಷರ ಮಾಲೆಯಾಗಿ ‘ ಹಾರ’ ಸಂಚಿಕೆ ವಿಜ್ರಂಭಣೆಯಿಂದ ಬಿಡುಗಡೆಯಾಗುತ್ತಿತ್ತು. ಅದೇ ರೀತಿ ಪ್ರತಿ ವರ್ಷ ಸಂಚಿಕೆಗೆ ಪ್ರಶಸ್ತಿಯನ್ನು ಪಡೆಯುತ್ತಿತ್ತು. ಆದರೆ ಈ ಭಾರಿ ಕೋವಿಡ್ -೧೯ ನಿಂದಾಗಿ ಸಂಚಿಕೆಯ ಸ್ಪರ್ಧೆಯು ನಡೆದಿಲ್ಲ. ಅದೇ ರೀತಿ ಅ.೧೦ರಂದು ಶಾಲೆಯ ಸಭಾಂಗಣದಲ್ಲಿ ನಡೆದ ೫ನೇ ವರ್ಷದ ‘ಹಾರ’ ಸಂಚಿಕೆ ಬಿಡುಗಡೆ ಸಮಾರಂಭವು ಮಕ್ಕಳ ಅನುಪಸ್ಥಿತಿಯಲ್ಲಿ ಕೇವಲ ಪೋಷಕರು ಮತ್ತು ಅತಿಥಿಗಳ ಉಪಸ್ಥಿತಿಯಲ್ಲಿ ಬಿಡುಗಡೆಗೊಂಡಿದೆ. ಕೋವಿಡ್ ನಿಯಮಾವಳಿಯಂತೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿ ಕಾರ್ಯಕ್ರಮ ನಡೆಸಲಾಯಿತು. ಪದ್ದೋನ್ನತಿ ಹೊಂದಿ ಕಡಬ ಹೈಸ್ಕೂಲ್‌ಗೆ ವರ್ಗಾವಣೆಗೊಂಡ ಸಹ ಶಿಕ್ಷಕ ಪ್ರಶಾಂತ್ ಅನಂತಾಡಿಯವರನ್ನು ಮತ್ತು ನಿರ್ಗಮನ ಎಸ್.ಡಿ.ಎಂ.ಸಿ ಅಧ್ಯಕ್ಷೆ ಪ್ರತಿಮಾ ಯು ರೈ ಅವರನ್ನು ಬೀಳ್ಕೊಡಲಾಯಿತು.

ಇತರ ಶಾಲೆಗಳಿಗೆ ಪ್ರೇರಣೆ ಕೊಡುವ ಶಾಲೆ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಮಾತನಾಡಿ ತಾಲೂಕಿಗೆ ಉತ್ತಮ ಶಾಲೆಯಾಗಿ, ಎಲ್ಲರಿಗೂ ಪ್ರೇರಣೆ ಕೊಡುವ ರೀತಿಯಲ್ಲಿ ಹಾರಾಡಿ ಶಾಲೆ ಉತ್ತಮ ಕಾರ್ಯಕ್ರಮ ನಡೆಸುತ್ತಿದೆ. ಅದಕ್ಕೆ ಕಾರಣೀಭೂತರಾದವರು ಈ ಶಾಲೆಯ ಅಧ್ಯಾಪಕ, ಪೋಷಕ ವೃಂದ, ದಾನಿಗಳು ಎಂದ ಅವರು ಶಾಲೆಯ ಅಭಿವೃದ್ಧಿಯ ದೃಷ್ಟಿಯಿಂದ ರೂ. ೧ ಲಕ್ಷ ಅನುದಾನ ಮಂಜೂರುಗೊಳಿಸಿದ್ದೇನೆ. ಅದೇ ರೀತಿ ರಾಜ್ಯಮಟ್ಟದಲ್ಲಿ ಎಸ್‌ಡಿಎಂಸಿಗೆ ಪ್ರಶಸ್ತಿ ಕೊಡಿಸಲು ಅವಕಾಶವಿದ್ದರೆ ಕಂಡಿತಾ ಹಾರಾಡಿಯ ಶಾಲೆಗೆ ಕೊಡಿಸಲು ಒತ್ತಡ ತರುತ್ತೇನೆ ಎಂದರು.

ಹಾರಾಡಿಯ ಮಾಸ್ಟ್ರು ಗುರುತಿಸಿಕೊಳ್ಳುವುದೇ ಗೌರವ:
ಕಡಬ ಹೈಸ್ಕೂಲ್‌ನ ಆಂಗ್ಲ ಶಿಕ್ಷಕ ಪ್ರಶಾಂತ್ ಅನಂತಾಡಿಯವರು ಮಾತನಾಡಿ ನಾನೆನು ಅನ್ನುವುದಕ್ಕಿಂತ ನನಗೆ ಶಾಲೆಯಿಂದ ಸಿಕ್ಕಿದ ಗೌರವ ನೆನಪಿಸಿಕೊಳ್ಳುತ್ತೇನೆ. ಮನೆಯ ಮಗನಾಗಿ ನೋಡುವ ತಾಯಂದಿರು ಈ ಶಾಲೆಯಲ್ಲಿದ್ದಾರೆ. ವಿದ್ಯಾರ್ಥಿಗಳು ಪ್ರೀತಿ ವಿಶ್ವಾಸ ಎಲ್ಲರು ಸಹಕಾರ ಸಂಸ್ಥೆ ಕೊಟ್ಟ ಗೌರವದ ಧನ್ಯತೆ ಇದೆ. ನಾನು ಎಲ್ಲಿಗೆ ಹೋದರೂ ಹಾರಾಡಿಯ ಶಾಲೆಯ ಮಾಸ್ಟ್ರು ಎಂದು ಗುರುತಿಸಿಕೊಳ್ಳುವುದೇ ಗೌರವ ಎಂದರು.

ಅಭಿವೃದ್ಧಿಗೆ ಸಹಕಾರ :
ನಗರಸಭಾ ಸದಸ್ಯೆ ಪ್ರೇಮಲತಾ ನಂದಿಲ ಅವರು ಮಾತನಾಡಿ ಶಾಲಾ ಅಭಿವೃದ್ಧಿ ದೃಷ್ಟಿಯಿಂದ ಈಗಾಗಲೇ ಶಾಸಕರ ಮೂಲಕ ರೂ. ೧೫ಲಕ್ಷ ಅನುದಾನ ಲಭಿಸಿದ್ದು, ನೂತನ ಕಟ್ಟಡ ಶೀಘ್ರ ಆರಂಭವಾಗಲಿದೆ. ಅದೇ ರೀತಿ ರೂ. ೨ಲಕ್ಷದಲ್ಲಿ ಇಂಟರ್‌ಲಾಕ್ ಅಳವಡಿಸಲಾಗುತ್ತಿದೆ ಎಂದ ಅವರು ಶಾಲಾ ಅಭಿವೃದ್ಧಿಯ ದೃಷ್ಟಿಯಿಂದ ಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

ಎಲ್ಲರ ಪ್ರೋತ್ಸಾಹ ದೊರಕಿದೆ:
ಎಸ್.ಡಿ.ಎಂ.ಸಿ ನಿರ್ಗಮನ ಅಧ್ಯಕ್ಷೆ ಪ್ರತಿಮಾ ಯು ರೈ ಅವರು ಮಾತನಾಡಿ ಶಾಲೆಯ ಅಭಿವೃದ್ದಿ ಮಕ್ಕಳ ಶೈಕ್ಷಣಿಕ ವಿಚಾರದಲ್ಲಿ ಎಸ್.ಡಿ.ಎಂ.ಸಿ ಮತ್ತು ಶಿಕ್ಷಕರು ಜೊತೆಗೂಡಿ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ದಾನಿಗಳ ಪ್ರೋತ್ಸಾಹವೂ ಸಿಕ್ಕಿದೆ ಎಂದರು. ಶಾಲೆಯ ಕೊಠಡಿಗೆ ಟೈಲ್ಸ್ ಅಳವಡಿಸಲು ದಾನಿಗಳಾದ ಹಿರಿಯ ಶಿಕ್ಷಕಿಯರಾದ ಲಿಲ್ಲಿ ಡಿಸೋಜ, ಯಶೋದಾ, ಹಿರಿಯ ವಿದ್ಯಾರ್ಥಿ ಅಬ್ದುಲ್ ಜಲೀಲ್, ಸಂಸ್ಕೃತ ಶಿಕ್ಷಕ ಸುಬ್ರಹ್ಮಣ್ಯ ಹೊಳ್ಳ, ಹಿರಿಯ ವಿದ್ಯಾರ್ಥಿ ದಿವಿತ್ ಯು ರೈ, ಎಸ್.ಡಿ.ಎಂ.ಸಿ ಸದಸ್ಯರಾದ ಉಮಾವತಿ, ಚಂದ್ರಕಲಾ ಅವರನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು. ಸಿ.ಆರ್.ಪಿ ಸ್ಟ್ಯಾನಿಪ್ರವೀಣ್ ಮಾತನಾಡಿದರು. ಶಾಲಾ ಪ್ರಭಾರ ಮುಖ್ಯಗುರು ಪ್ರಿಯಾಕುಮಾರಿ ಸ್ವಾಗತಿಸಿ, ಆರತಿ ವಂದಿಸಿದರು. ಧನ್ಯ ಕಾರ್ಯಕ್ರಮ ನಿರೂಪಿಸಿದರು.

ಶಾಸಕರಿಂದ ಟೈಲ್ಸ್ ಅಳವಡಿಸಿದ ಕೊಠಡಿ ಉದ್ಘಾಟನೆ
ತಾ.ಪಂ ಅನುದಾನ ಮತ್ತು ದಾನಿಗಳ ಸಹಕಾರದಿಂದ ಶಾಲೆಯ ಎಲ್ಲಾ ಕೊಠಡಿಗಳಿಗೆ ಅಳವಡಿಸಲಾದ ಟೈಲ್ಸ್‌ಗಳನ್ನು ಶಾಸಕ ಸಂಜೀವ ಮಠಂದೂರು ಅವರು ಬೆಳಿಗ್ಗೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಪ್ರೇಮಲತಾ ನಂದಿಲ, ಶಾಲಾ ಮುಖ್ಯಗುರು ಪ್ರಿಯಕುಮಾರಿ, ಬಿಜೆಪಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್ ಹಾರಾಡಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಸಕರು ಶಾಲೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವ ಕುರಿತು ಭರವಸೆ ವ್ಯಕ್ತಪಡಿಸಿದರು.

ಕೋವಿಡ್-೧೯ ಸುಮ್ಮನೆ ಕೂರದ ವಿದ್ಯಾರ್ಥಿ
ದುಡಿದ ಹಣದಲ್ಲಿ ಶಾಲಾ ಕೊಠಡಿಗೆ ಟೈಲ್ಸ್ ಕೊಡುಗೆ
ಕೋವಿಡ್ ಸಂದರ್ಭದಲ್ಲಿ ಶಾಲಾ ಶಿಕ್ಷಣ ಆನ್‌ಲೈನ್ ಆಗಿದ್ದ ಸಮಯದಲ್ಲಿ ಹಗಲು ಹೊತ್ತು ಸಮಯ ಸಿಕ್ಕಾಗ ಹಾರಾಡಿ ಶಾಲೆಯ ಹಿರಿಯ ವಿದ್ಯಾರ್ಥಿ ದಿವಿತ್ ಯು ರೈ ಅವರು ಮೆಸ್ಕಾಂನಲ್ಲಿ ಪವರ್ ಮ್ಯಾನ್ ಆಗಿರುವ ತನ್ನ ತಂದೆಯ ಜೊತೆ ಕೆಲಸ ನಿರ್ವಹಿಸಿಕೊಂಡಿದ್ದರು. ಆಗ ಸಿಕ್ಕಿದ ಅಲ್ಪಸ್ವಲ್ಪ ಹಣ ಕ್ರೋಡಿಕರಣ ಮಾಡಿ ಹಾರಾಡಿ ಶಾಲೆಯ ಕೊಠಡಿಗೆ ಟೈಲ್ಸ್ ಅಳವಡಿಸಲು ವಿನಿಯೋಗಿಸಿರುವುದು ಇತರರಿಗೆ ಮಾದರಿಯಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.