HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪಾಣಾಜೆ:  ದೈತೋಟ ರಸ್ತೆ ಬದಿ ಅಳವಡಿಸಿದ ಸೋಲಾರ್ ದೀಪ ಕಳವು

Puttur_Advt_NewsUnder_1
Puttur_Advt_NewsUnder_1


ನಿಡ್ಪಳ್ಳಿ: ಪಾಣಾಜೆ ಪೆರ್ಲ ಮುಖ್ಯ ರಸ್ತೆಯಲ್ಲಿ   ಪಾಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ದೈತೋಟ ಎಂಬಲ್ಲಿ  ರಸ್ತೆ ಬದಿಯಲ್ಲಿ ಅಳವಡಿಸಿದ್ದ  ಸೋಲಾರ್ ದೀಪ ಕಳವಾದ ಘಟನೆ ಅ.10 ರಂದು  ಬೆಳಕಿಗೆ ಬಂದಿದೆ. ನಿರ್ಜನ ಪ್ರದೇಶವಾದ ದೈತೋಟದಲ್ಲಿ ಇರುವ ಹಾಲುತ್ಪಾದಕರ ಸಹಕಾರಿ ಸಂಘದ ಎದುರುಗಡೆ ಜನರ ಅನುಕೂಲಕ್ಕಾಗಿ ಕಳೆದ ಒಂದು ವರ್ಷದ ಹಿಂದೆ  ಪಾಣಾಜೆ ಗ್ರಾಮ ಪಂಚಾಯತ್ ಅನುದಾನದಲ್ಲಿ   ಅಳವಡಿಸಿದ ಈ ದಾರಿ ದೀಪವನ್ನು ಬುಡ ಸಮೇತ ಕಿತ್ತು ಕೊಂಡೊಯ್ಯಲಾಗಿದೆ.ಹತ್ತಿರದಲ್ಲಿ ಪಂಚಾಯತ್ ವತಿಯಿಂದ ನಿರ್ಮಿಸಿದ ಒಣಕಸ ಸಂಗ್ರಹಣಾ ತಾತ್ಕಾಲಿಕ ಶೆಡ್ ಕೂಡ ಇಲ್ಲಿಯೇ ಇದೆ. ದಾರಿ ದೀಪ ಕಳವಾಗಿರುವ ಬಗ್ಗೆ ಸ್ಥಳೀಯರು ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷ ನಾರಾಯಣ ಪೂಜಾರಿಯವರಿಗೆ  ತಿಳಿಸಿದ್ದಾರೆ. ಕಳವಾದ ಬಗ್ಗೆ  ನಾರಾಯಣ ಪೂಜಾರಿಯವರು ಸಂಪ್ಯ ಠಾಣೆಗೆ ದೂರವಾಣಿ ಮೂಲಕ ದೂರು ನೀಡಿದ ಬಗ್ಗೆ ಪತ್ರಿಕೆಗೆ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.