HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕಾವು: ಜಿಪಂ ಸ್ವಚ್ಚಭಾರತ್ ಮಿಷನ್ ಯೋಜನೆಯಡಿ ನಿರ್ಮಾಣಗೊಂಡ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನೂತನ ಶೌಚಾಲಯ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು; ನೆಟ್ಟಣಿಗೆ ಮುಡ್ನೂರು ಜಿಲ್ಲಾಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಜಿಪಂ ಸ್ವಚ್ಚ ಭಾರತ್ ಮಿಷನ್ ಯೋಜನೆ ಮತ್ತು ಅರಿಯಡ್ಕ ಗ್ರಾಪಂ ಸಹಕಾರದಿಂದ ನಿರ್ಮಾಣ ಮಾಡಲಾದ ಶೌಚಾಲಯದ ಉದ್ಘಾಟನಾ ಕಾರ್ಯಕ್ರಮ ಅ. 10ರಂದು ನಡೆಯಿತು.

ಶೌಚಾಲಯವನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರು ಲೋಕಾರ್ಪಣೆಗೊಳಿಸಿದರು. ನೆಟ್ಟಣಿಗೆ ಮುಡ್ನೂರು ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾವು ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ದಿವ್ಯನಾಥ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಲಯನ್ಸ್ ವಲಯ ೧ರ ವಲಯಾಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ, ಕಂದಾಯ ನಿರೀಕ್ಷಕ ರವಿಕುಮಾರ್, ಅರಿಯಡ್ಕ ಗ್ರಾ ಪಂ ಆಡಳಿತಾಧಿಕಾರಿ ಸುರೇಶ್ ಕುಮಾರ್,ಕಾವು ಜಾತ್ರೋತ್ಸವ ಸಮಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ರಾವ್ ನಿಧಿಮುಂಡ, ಅರಿಯಡ್ಕ ಗ್ರಾ ಪಂ ಮಾಜಿ ಉಪಾಧ್ಯಕ್ಷ ಲೋಕೇಶ್ ಗೌಡ ಚಾಕೋಟೆ, ಪುತ್ತೂರು ಕಾವು ಲಯನ್ಸ್ ಕ್ಲಬ್‌ನ ಅಧ್ಯಕ್ಷ ರಮೇಶ್ ರೈ ಸಾಂತ್ಯವೇದಿಕೆಯಲ್ಲಿದ್ದರು.

ನನ್ಯ ಅಚ್ಚುತ್ತಮೂಡಿತ್ತಾಯ ಉದ್ಘಾಟಿಸಿದರು 

ಕಾರ್ಯಕ್ರಮದಲ್ಲಿ ಲಯನ್ಸ್ ಸದಸ್ಯರುಗಳಾದ ಜಯಪ್ರಕಾಶ್ ರೈ ನೂಜಿಬೈಲು, ದೇವಣ್ಣ ರೈ, ಗೋಪಾಲ ಪಾಟಾಳಿ ಪಟ್ಟುಮೂಲೆ, ರಾಮದಾಸ್ ರೈ, ಮೋನಪ್ಪ ಪೂಜಾರಿ ಕೆರೆಮಾರು, ದಿನೇಶ್ ಗೌಡ, ಜಗನ್ನಾಥ್ ರೈ, ಮಾಜಿ ಪಂ ಸದಸ್ಯರುಗಳಾದ ರವೀಂದ್ರ ಪೂಜಾರಿ ಮಂಜಕೊಟ್ಯ, ಸೀತಾರಾಮ್ ಮೇಲ್ಪಾದೆ, ಸುಬ್ರಾಯ ಅಮ್ಚಿನಡ್ಕ, ಪವನ್ ಕಾವು, ಗಂಗಾಧರ ಪಾಟಾಳಿ ಪಟ್ಟುಮೂಲೆ, ಜಗನ್ನಾಥ್ ರೈ ದೆಂಬಾಳೆ, ಸಂದೇಶ್ ಅಮ್ಚಿನಡ್ಕ, ಕಾವು ಪಂಚಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಶಿವಪ್ರಸಾದ್ ಕಡಮಣ್ಣಾಯ, ವಿಕಾಸ್ ಕಡಮಣ್ಣಾಯ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖಂಡರು

ಲೋಕಾರ್ಪಣೆಗೊಂಡ ಕಟ್ಟಡದ ಬೀಗದ ಕೀ ಯನ್ನುದೇವಸ್ಥಾನ ದ ಆಡಳಿತಧಿಕಾರಿಯಾದ ಕಂದಾಯ ನಿರೀಕ್ಷಕ ರವಿ ಕುಮಾರ್ ಅವರಿಗೆ ಹಸ್ತಾಂತರಿಸಿದ ಜಿ ಪಂ ಸದಸ್ಯೆ, ಹಾಗೂ ದೇವಸ್ಥಾನದ ಮಾಜಿ ಮುಕ್ತೇಸರ ದಿವ್ಯನಾಥ್ ಶೆಟ್ಟಿ ಯುವರ ಆಡಳಿತಾವಧಿಯಲ್ಲಿ ರೂಪುಗೊಂಡ ಅಡಿಕೆ ಹಾಗೂ ಬಾಳೆ ತೋಟದ ಸುತ್ತ ಬೇಲಿಯ ಗೇಟಿನ ಬೀಗದ ಕೀಯನ್ನು ಆಡಳಿತಾಧಿಕಾರಿಗೆ ಹಸ್ತಾಂತರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.