HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಸಮಸ್ತ ಹನೀಫಿ ಉಲಮಾ ಒಕ್ಕೂಟದಿಂದ ವಿಖಾಯ ಸಮಿತಿಗೆ ಅಗತ್ಯ ಸಲಕರಣೆಗಳ ವಿತರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ರಾಜ್ಯ ಸಮಸ್ತಹನೀಫಿ ಉಲಮಾ ಒಕ್ಕೂಟದ ವತಿಯಿಂದ ಪುತ್ತೂರು ಎಸ್ಕೆಎಸ್ಸಸ್ಸೆಫ್ ಅಧೀನದ ತುರ್ತು ಸೇವಾ ತಂಡವಾದ ವಿಖಾಯ ಸಮಿತಿಗೆ ವಿವಿಧ ಅಗತ್ಯ ಸಲಕರಣೆಗಳನ್ನು ಕುಂಬ್ರ ಕೆಐಸಿಯಲ್ಲಿ ಅ. ೧೧ ರಂದು ನಡೆದ ಸಮಾರಂಭದಲ್ಲಿ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಿ.ಕೆ.ಅಬ್ದುಲ್ ಖಾದಿರ್ ಖಾಸಿಮಿ ಬಂಬ್ರಾಣರವರು ರಾಜ್ಯ ಹನೀಫಿ ಉಲಮಾ ಸಂಘಟನೆಯು ದ. ಕ. ಜಿಲ್ಲಾ ಎಸ್ಕೆಎಸ್ಸಸ್ಸೆಫ್ ನ ಅಧೀನದ ವಿವಿಧ ವಲಯ ವಿಖಾಯ ಸಮಿತಿಗಳಿಗೆ ಅಗತ್ಯವಾಗಿರುವ ವಿವಿಧ ಸಲಕರಣೆಗಳನ್ನು ವಿತರಿಸುವ ಯೋಜನೆಯನ್ನು ಹಾಕಿ ಕೊಂಡಿದ್ದು, ಇದರ ಉದ್ಘಾಟನೆಯನ್ನು ಪುತ್ತೂರು ವಲಯದ ಮೂಲಕ ಕೆಐಸಿಯಲ್ಲಿ ನಡೆಸಿದೆ. ಈ ಮೊದಲು ಮದ್ರಸ ಅಧ್ಯಾಪಕರಿಗೆ ಆಹಾರದ ಕಿಟ್ ವಿತರಣೆ, ವಿವಾಹಕ್ಕೆ ಸಹಾಯ ಧನ ವಿತರಣೆ ನಡೆಸಿ ಸಂಘಟನೆಯು ಮಾದರಿಯಾಗಿದ್ದು, ಇದೀಗ ವಿಖಾಯದಂತಹ ತುರ್ತು ಸೇವಾ ತಂಡಕ್ಕೆ ಬೇಕಾದ ಸಲಕರಣೆಗಳನ್ನು ನೀಡಿದ್ದು ಸ್ತುತ್ಯರ್ಹವಾಗಿದೆ ಎಂದರು.

ಎಸ್ಕೆಎಸ್ಸಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹನೀಫಿ ಉಲಮಾ ಸಂಘಟನೆಯ ಕಾರ್ಯಸಾಧನೆಯನ್ನು ಶ್ಲಾಘಿಸಿದರು.

ಸಮಾರಂಭದಲ್ಲಿ ಎಸ್ಕೆಎಸ್ಸಸ್ಸೆಫ್ ದ.ಕ.ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಹನೀಫಿ ಉಲಮಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಹನೀಫಿ ಮರ್ದಳ, ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುರ್ರಶೀದ್ ಹಾಜಿ ಪರ್ಲಡ್ಕ, ಜಾಬಿರ ಫೈಝಿ ಬನಾರಿ,ಇಸ್ಮಾಯಿಲ್ ಹನೀಫಿ ವಿಟ್ಲ, ಸ್ವಾದಿಕ್ ಹನೀಫಿ ಕುಂಬ್ರ, ಫಾರೂಕ್ ಸಂಟ್ಯಾರ್, ಅಶ್ರಫ್ ಮುಕ್ವೆ, ಇಬ್ರಾಹಿಂ ಕಡವ ,ಆಸಿಫ್ ಕಬಕ, ಮನ್ಸೂರ್ ಮೌಲವಿ, ಅಬ್ದುಲ್ ಸತ್ತಾರ್ ಕೌಸರಿ, ಯೂಸುಫ್ ಡ್ರೀಮ್ಸ್ , ಕೆ.ಎಂ.ಖಾದರ್ ಕೂರ್ನಡ್ಕ ಶರೀಫ್ ಯು.ಪಿ. ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೇಯಲ್ಲಿ ಇತ್ತೀಚೆಗೆ ಅಗಲಿದ ಕಮ್ಮಾಡಿ ಇಬ್ರಾಹಿಂ ಹಾಜಿ, ಬೊಳ್ಳಾಡಿ ಇಬ್ರಾಹಿಂ ಹಾಜಿ,ಅಬ್ದುರ್ರಹ್ಮಾನ್ ಹಾಜಿ ಬೈತಡ್ಕ ಮತ್ತು ಖತೀಜಮ್ಮ ಹಜ್ಜುಮ್ಮ ಅರ್ತಿಕೆರೆ ರವರಿಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಸಮಸ್ತ ಹನೀಫಿ ಉಲಮಾ ಸಂಘಟನೆಯ ಅಧ್ಯಕ್ಷ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.