HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬೆಂಗಳೂರು ಗಿವ್‌ಬ್ಯಾಕ್ ಟೀಮ್‌ನಿಂದ ಕೊರೋನಾ ಜಾಗೃತಿ ಅಭಿಯಾನ

Puttur_Advt_NewsUnder_1
Puttur_Advt_NewsUnder_1
  • ಪುತ್ತೂರು ನಗರಸಭೆ ಪೌರ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್, ಪೇಸ್‌ಗಾರ್ಡ್ ವಿತರಣೆ

ಪುತ್ತೂರು: ಕೋವಿಡ್ -೧೯ನಿಂದ ದೇಶ ಜನತೆಯನ್ನು ಜಾಗೃತಿ ಗೊಳಿಸುವ ಸಲುವಾಗಿ ಸಮಾನಮನಸ್ಕರ ಬೆಂಗಳೂರಿನ ತಂಡವೊಂದು ಗಿವ್‌ಬ್ಯಾಕ್ ಟೀಮ್ ರಚನೆ ಮಾಡಿಕೊಂಡು ರಾಜ್ಯದ ವಿವಿಧ ಕಡೆಗಳಿಗೆ ತೆರಳಿ ಮಾಸ್ಕ್, ಸ್ಯಾನಿಟೈಸರ್, ಪೇಸ್‌ಗಾರ್ಡ್‌ಗಳನ್ನು ವಿತರಣೆ ಮಾಡುತ್ತಿದ್ದು, ಅ.೧೧ರಂದು ಪುತ್ತೂರು ತಾಲೂಕು ಒಕ್ಕೂಟದ ಸಹಯೋಗದಲ್ಲಿ ಪುತ್ತೂರು ನಗರಸಭೆ ಪೌರ ಕಾರ್ಮಿಕರಿಗೆ ವಿತರಣೆ ಮಾಡಿದರು.

ಶಾಸಕ ಸಂಜೀವ ಮಠಂದೂರು ಅವರು ಪೌರ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ಮತ್ತು ಪೇಸ್‌ಗಾರ್ಡ್‌ಗಳನ್ನು ಸಾಂಕೇತಿವಾಗಿ ವಿತರಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ ಪೌರ ಕಾರ್ಮಿಕರ ಕಾಳಜಿ ಇಟ್ಟು ಕೊಂಡು ಮಾಡಿದ ಗಿವ್‌ಬ್ಯಾಕ್ ಟೀಮ್ ಮತ್ತು ಯುವಜನ ಒಕ್ಕೂಟದ ಸೇವೆಯನ್ನು ಶ್ಲಾಘೀಸಿದರು. ಉಳ್ಳವನು ಇಲ್ಲದವನ ಬಗ್ಗೆ ಗಮನ ಹರಿಸಿದಾಗ ದೇಶ ಪ್ರಧಾನಿ ಕಂಡ ಆತ್ಮನಿರ್ಭರ ಭಾರತ ಆಗುತ್ತದೆ. ಆ ದಿಸೆಯಿಂದ ಬೆಂಗಳೂರಿನಲ್ಲಿರುವ ಪ್ರಜ್ಞಾವಂತ ಜನರು ಹಳ್ಳಿಯವರ ಆರೋಗ್ಯ, ಬದುಕಿನ ಬಗ್ಗೆ ಚಿಂತನೆ ಮಾಡಿ ಒಂದಷ್ಟು ಸಮುದಾಯದತ್ತ ಕಾರ್ಯಕ್ರಮ ಹಾಕಿಕೊಂಡಿದ್ದಾರೆ.

ಪೌರ ಕಾರ್ಮಿರ ಸೇವೆ ಗಮನಿಸಬೇಕು:
ಕೋವಿಡ್ ಬಂದಾಗ ಹಿಂದೆ ಮುಂದೆ ನೋಡದೆ ಉತ್ತಮ ಸೇವೆ ನೀಡಿದ್ದಾರೆ. ಅವರಿಗೆ ಪೌರಾಯುಕ್ತರು, ಶಾಸಕನ ನೆಲೆಯಲ್ಲಿ ನಾವು ಸಹಕಾರ ನೀಡಿದ್ದೇವೆ. ಪೌರ ಕಾರ್ಮಿಕರು ಕೂಡಾ ಉತ್ತಮ ಸೇವೆ ಮಾಡಿದ್ದ ಹಿನ್ನೆಲೆಯಲ್ಲಿ ಇವತ್ತು ರಾಜ್ಯದಲ್ಲಿ ೪೩ನೇ ಸ್ಥಾನದಲ್ಲಿದ್ದ ಪುತ್ತೂರು ನಗರಸಭೆ ೬ನೇ ಸ್ಥಾನಕ್ಕೆ ಏರಿದ್ದೇವೆ. ನಮಗೆ ಇವತ್ತು ಶಕ್ತಿ ಆನೆ ಬಲ ಬಂತಾಗಿದೆ. ಮುಂದಿನ ವರ್ಷ ನಂ.೧ ಸ್ಥಾನಕ್ಕೆ ಏರಿಕೆ ಆಗಬೇಕೆಂದು ಸಂಜೀವ ಮಠಂದೂರು ಹೇಳಿದರು. ಗಿವ್‌ಬ್ಯಾಕ್ ಸಂಸ್ಥೆಯ ಶಿವಪ್ರಸಾದ್ ಸಂಸ್ಥೆಯ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಭಾಮಿ ಅಶೋಕ್ ಶೆಣೈ, ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಗಿವ್‌ಬ್ಯಾಕ್ ಸಂಸ್ಥೆಯ ಮಂಜುನಾಥ್, ರಾಜೇಶ್ ಟಿ.ಎಸ್, ಯುವಜನ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ಕರಂಬಾರು, ಷಣ್ಮುಖ ಯುವಕ ಮಂಡಲದ ಕಮಲೇಶ್, ಸರ್ವೆ ಎಸ್.ಡಿ.ಎಂ ಶಾಲೆಯ ಮುಖ್ಯಗುರು ಶ್ರೀನಿವಾಸ ಹೆಚ್.ಬಿ, ರಾಜೇಶ್ ಎಸ್.ಟಿ, ಗೌತಮ್‌ರಾಜ್ ಕರಂಬಾರು, ರಾಧಾಕೃಷ್ಣ ಕರಂಬಾರು ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.