ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
  • ಹೊಸ ಜೀವನ ಶೈಲಿಗೆ ಕಾರ್ಮಿಕರ ಸಂಘದ ಜೋಡಣೆ – ಬಿ.ಪುರಂದರ ಭಟ್
  • ಯುವಕರಿಗೆ ಪೇಸ್‌ನಿಂದ ಕೌಶಲ್ಯ ತರಬೇತಿ -ರಮೇಶ್ ಭಟ್
  • ಕಾನೂನು ಮಾಹಿತಿ ಪಡೆದು ಕೊಳ್ಳಿ – ದೇವಾನಂದ
  • ಕಟ್ಟಡ ಕಾರ್ಮಿಕರಿಗೆ ಭವನ ನಿರ್ಮಾಣ ಆಗಬೇಕು – ಶೇಷಪ್ಪ ಕುಲಾಲ್
  • ನಿಜವಾದ ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಸಿಗಬೇಕು – ಜಯರಾಮ ಕುಲಾಲ್

ಪುತ್ತೂರು: ಕಳೆದ ೧೦ ವರ್ಷಗಳಿಂದ ಕಟ್ಟಡ ಕಾರ್ಮಿಕರ ಪರವಾಗಿ ನಿರಂತರವಾಗಿ ಕೆಲಸ ಮಾಡಿಕೊಂಡು ಬರುತ್ತಿರುವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘವು ನೂತನವಾಗಿ ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಹೆಸರಿನಲ್ಲಿ ನೋಂದಾಯಿತಗೊಂಡಿದ್ದು, ಅದರ ಉದ್ಘಾಟನಾ ಸಮಾರಂಭವು ಅ.೧೧ರಂದು ಇಲ್ಲಿನ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಮುದಾಯ ಭವನದಲ್ಲಿ ನಡೆಯಿತು.

ಹೊಸ ಜೀವನ ಶೈಲಿಗೆ ಕಾರ್ಮಿಕರ ಸಂಘದ ಜೋಡಣೆ:
ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘವನ್ನು ಉದ್ಘಾಟಿಸಿದ ಕರ್ನಾಟಕ ಕಾರ್ಮಿಕ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ಪುರಂದರ ಭಟ್ ಅವರು ಮಾತನಾಡಿ ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಹೆಸರಿನಲ್ಲಿ ಹೊಸತನ ಇದೆ. ವ್ಯಕ್ತಿ ಹೊಸತಾಗದೆ ವ್ಯಕ್ತಿಯ ಸುತ್ತಮುತ್ತ ಇರುವ ವಾತಾವರಣ ಹೊಸದಾಗದೆ ಹೊಸ ರೀತಿಯಲ್ಲಿ ಕಲಿತು ಕೊಂಂಡು ಹೋಗದೆ ಇದ್ದರೆ ಕೊರೋನಾಕ್ಕಿಂತಲೂ ಭೀಕರವಾಗಿ ಬರುವಂತಹ ಆರ್ಥಿಕ ಕಾಯಿಲೆಯಿಂದ ನಮ್ಮನ್ನು ನಾವು ರಕ್ಷಿಸಿ ಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಮ್ಮ ಜನ ಜೀವನದ ಸಂಕೇತ ಆಗಬೇಕು. ದೇಶವನ್ನು ದೇಹ ಎಂಬುದಾಗಿ ಪರಿಗಣಿಸಿ ಹೊಸ ಜೀವನ ಶೈಲಿಯನ್ನು ಕಲಿಯಬೇಕು. ಅದಕ್ಕಾಗಿ ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘ ಅಧೀಕೃತವಾಗಿ ನೋಂದಾವಣಿಗೊಂಡು ಕಟ್ಟಡ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯವನ್ನು ತೆಗೆಸಿಕೊಡುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.

ಯುವಕರಿಗೆ ಪೇಸ್‌ನಿಂದ ಕೌಶಲ್ಯ ತರಬೇತಿ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್‍ಸ್‌ನ ಅಧ್ಯಕ್ಷ ರಮೇಶ್ ಭಟ್ ಮಿತ್ತೂರು ಅವರು ಮಾತನಾಡಿ ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಸಂಘ ನೋಂದಾಯಿತವಾಗುವುದು ಅಗತ್ಯ. ಇಂತಹ ಸಂದರ್ಭದಲ್ಲಿ ನವ ಕರ್ನಾಟಕ ಸಂಘದ ಮೂಲಕ ಕಟ್ಟಡ ಕಾರ್ಮಿಕರಿಗೆ ಉತ್ತಮ ಸೌಲಭ್ಯ ಸಿಗುವಂತಲಾಗಲಿ ಎಂದ ಅವರು ಈ ವರ್ಷದ ಆರೋಗ್ಯವೇ ನಮ್ಮ ಸಂಪಾದನೆ ಎಂದು ತಿಳಿದು ಕೊಂಡು ಕಟ್ಟಡ ಕಾರ್ಮಿಕರಾಗಿ ಹೊಸ ಯುವಕರು ಮುಂದೆ ಬಂದರೆ ಅವರಿಗೆ ಕೌಶಲ್ಯ ತರಬೇತಿ ನೀಡಲು ಪೇಸ್ ಸಿದ್ದವಿದೆ. ಈ ಮೂಲಕ ಇಂಜಿನಿಯರ್‍ಸ್ ಮತ್ತು ಕಾರ್ಮಿಕರು ಸೇರಿ ಪುತ್ತೂರನ್ನು ಅಭಿವೃದ್ದಿಗೊಳಿಸೋಣ ಎಂದರು.

ಕಾನೂನು ಮಾಹಿತಿ ಪಡೆದು ಕೊಳ್ಳಿ:
ಕರ್ನಾಟಕ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಕಾನೂನು ಸಲಹೆಗಾರ ದೇವಾನಂದ ಕೆ ಅವರು ಮಾತನಾಡಿ ದುಡಿಮೆಯೇ ದೇವರು ಎಂಬಂತೆ ನಿಷ್ಠೆಯಿಂದ ಮಾಡುವ ಕೆಲಸಕ್ಕೆ ಪ್ರತಿಫಲ ಸಿಗುತ್ತದೆ. ಇಂತಹ ಸಂದರ್ಭದಲ್ಲಿ ಕೆಲವೊಂದು ಕಾನೂನಿನ ಬಗ್ಗೆ ಮಾಹಿತಿ ಕಟ್ಟಡ ಕಾರ್ಮಿಕರು ತಿಳಿದು ಕೊಳ್ಳುವುದು ಅಗತ್ಯ. ಈ ಮಾಹಿತಿ ಕೊಡಲು ನಾನು ಸದಾ ಸಿದ್ದನಿದ್ದೇನೆ ಎಂದು ಹೇಳಿದರು.

ಕಟ್ಟಡ ಕಾರ್ಮಿಕರಿಗೆ ಭವನ ನಿರ್ಮಾಣ ಆಗಬೇಕು:
ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಶೇಷಪ್ಪ ಕುಲಾಲ್ ಅವರು ಮಾತನಾಡಿ ಪುತ್ತೂರಿನಲ್ಲಿ ಸಾವಿರಾರು ಮಂದಿ ಕಟ್ಟಡ ಕಾರ್ಮಿಕರಿದ್ದಾರೆ. ಅದರೆ ಕಾರ್ಮಿಕ ಭವನ ಇಲ್ಲ. ಹಾಗಾಗಿ ಪುತ್ತೂರಿಗೆ ಕಾರ್ಮಿಕ ಭವನ ಬೇಕು. ಇದಕ್ಕೆ ಸ್ಥಳವಕಾಶ ಸರಕಾರ ಕೊಟ್ಟರೆ ನಮ್ಮ ಸಂಘದ ಮೂಲಕ ಭವನ ನಿರ್ಮಾಣ ಮಾಡಲು ಸಿದ್ದರಿದ್ದೇವೆ ಎಂದು ಹೇಳಿದರು.

ನಿಜವಾದ ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಸಿಗಬೇಕು:
ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಯರಾಮ ಕುಲಾಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಕರ್ನಾಟಕ ಕಟ್ಟಡ ಕಾರ್ಮಿಕ ಸಂಘ ೨ಸಾವಿರ ಕಟ್ಟಡ ಕಾರ್ಮಿಕರಿಗೆ ಗುರುತುಚೀಟಿ, ಮದುವೆ ಸಹಾಯಧನ, ವಿದ್ಯಾರ್ಥಿ ವೇತನ ಹೀಗೆ ಹಲವು ಸಹಾಯಧವನ್ನು ಕಾರ್ಮಿಕರಿಗೆ ಒದಗಿಸಿದೆ. ಇದೀಗ ಸಂಘ ನೋಂದಾವಣೆ ಆದ ಬಳಿಕ ಕಟ್ಟಡ ಕಾರ್ಮಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲು ಸಹಾಯ ಆಗಲಿದೆ. ನಮ್ಮ ಸಂಘ ಜಿಲ್ಲಾ ವ್ಯಾಪ್ತಿಯಲ್ಲಿ ನೋಂದಾವಣೆಗೊಂಡಿದ್ದು, ಮುಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಬಲಿಷ್ಠಗೊಳ್ಳಲಿದೆ. ಕಟ್ಟಡ ಕಾರ್ಮಿಕರಿಗೆ ಪ್ರಮಾಣ ಪತ್ರ ನೀಡಲು ನಮ್ಮ ಸಂಘ ಅಧೀಕೃತವಾಗಿ ಕಾರ್ಯ ನಿರ್ವಹಿಸಲಿದೆ. ಇದರ ಜೊತೆಗೆ ಸುಳ್ಳು ಪ್ರಮಾಣ ಪತ್ರ ಮಾಡಿಸಿಕೊಂಡಿರುವ ಕುರಿತು ಕಾರ್ಮಿಕರ ಮೂಲಕ ದೂರುಗಳು ಬಂದಿದೆ. ಈ ನಿಟ್ಟಿನಲ್ಲಿ ನಿಜವಾದ ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಸಿಗಬೇಕೆಂದು ನಮ್ಮ ಸಂಘ ಕಾರ್ಯಚರಿಸಲಿದೆ ಎಂದು ಹೇಳಿದರು. ಲಕ್ಷ್ಮೀ ಪ್ಲೈವುಡ್ಸ್‌ನ ಮಾಲಕ ಹರೀಶ್ ಅವರು ಕೊಡುಗೆಯಾಗಿ ನೀಡಿದ ೧೦೦ ಮಾಸ್ಕ್‌ಗಳನ್ನು ಸಭೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಉಚಿತ ವಿತರಣೆ ಮಾಡಲಾಯಿತು. ಧನ್ಯ ವಿ ಹೆಚ್ ಬೆಳ್ಳಿಪ್ಪಾಡಿ ಪ್ರಾರ್ಥಿಸಿದರು. ನವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ಜಯರಾಮ ಕುಲಾಲ್ ಸ್ವಾಗತಿಸಿದರು. ಕೋಶಾಧಿಕಾರಿ ರಾಜೇಶ್ ಪೂಜಾರಿ ಮುಕ್ವೆ ವಂದಿಸಿದರು. ತೇಜ ಕುಮಾರ್ ಎನ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.