HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ನಗರಸಭೆ ವಾರ್ಡ್ ಪೂರ್ತಿ ಸಿಸಿರೋಡ್ ಆಗಲಿದೆ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜನರಿಗೆ ಮೂಲಭೂತವಾಗಿ ಏನೆನು ಬೇಕೋ ಅದನ್ನೆಲ್ಲಾ ಮಾಡುವ ಕೆಲಸ ನಮ್ಮ ಜವಾಬ್ದಾರಿ. ಈಗಾಗಲೇ ಒಂದಷ್ಟು ಕಾಂಕ್ರೀಟ್ ರಸ್ತೆಗಳು, ಅಂಡರ್‌ಗ್ರೌಂಡ್ ಪವರ್ ಸಿಸ್ಟಮ್, ೨೪/೭ ಕುಡಿಯುವ ನೀರು ಸೇರಿದಂತೆ ಹಲವು ಯೋಜನೆ ಜಾರಿಯಲ್ಲಿದ್ದು, ನಗರಸಭೆ ಎಲ್ಲಾ ವಾರ್ಡ್‌ಗಳು ಪೂರ್ತಿ ಸಿಸಿ ರೋಡ್ ಆಗಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಅ.೧೧ರಂದು ಅವರು ವಿವಿಧ ಕಾಮಗಾರಿಗಳ ಚಾಲನೆ ಮತ್ತು ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ನಗರಸಭೆಗೆ ಸೇರ್ಪಡೆಯಾದ ಸ್ಥಳದಲ್ಲೂ ರಸ್ತೆ ಕಾಂಕ್ರೀಟ್ ಮಾಡುವುದು, ನಗರಸಭೆಗೆ ಉತ್ತಮ ಆಡಳಿತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಕೆಲವೆ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳುವುದು. ಹಲವು ಸುಂದರ ಪಾರ್ಕ್‌ಗಳನ್ನು ನಿರ್ಮಾಣ ಮಾಡುವುದು ನಮ್ಮ ಯೋಜನೆಯಲ್ಲಿದ್ದು, ಚುನಾವಣೆ ಸಂದರ್ಭದಲ್ಲಿ ಸ್ವಚ್ಛ ಪುತೂರು ಘೋಷಣೆ ಸುಂದರ ಪುತ್ತೂರು ಕಲ್ಪನೆ ಇಟ್ಟು ಕೊಂಡು ಕಾರ್ಯ ಪ್ರವೃತರಾದ ನೆಲೆಯಲ್ಲಿ ಇವತ್ತು ನಗರಸಭೆ ರಾಜ್ಯದಲ್ಲೇ ೬ನೇ ಸ್ಥಾನಕ್ಕೆ ಬಂದಿದೆ. ನಮ್ಮ ಅಡಳಿತ ಇನ್ನೇನು ಕೆಲವೆ ದಿನಗಳಿಂದ ಆರಂಭ ಆಗಲಿದ್ದು, ನಗರಸಭೆ ಮುಂದಿನ ವರ್ಷ ೧ನೇ ಸ್ಥಾನಕ್ಕೆ ಬರಲಿದೆ. ದೂರ ದೃಷ್ಟಿಯಿಟ್ಟು ಹಿರಿಯರು ಹಾಕಿಕೊಂಡ ಕಾರ್ಯಕ್ರಮದಿಂದಾಗಿ ಮುಂದೆ ರಾಜ್ಯದಲ್ಲೆ ನಗರಸಭೆ ನಂ.೧ ಸ್ಥಾನದಲ್ಲಿ ಮೂಡಿ ಬರಲಿದೆ ಎಂದು ಹೇಳಿದ ಅವರು ನಗರಸಭೆಯ ೩೧ ವಾರ್ಡ್‌ಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.

ವಿವಿಧ ಕಾಮಗಾರಿಗಳ ಉದ್ಘಾಟನೆ:
ಬೆಳಿಗ್ಗೆ ಕೇಪುಳು ಕೊಟೆಚಾ ಸರ್ಕಲ್ ಬಳಿಯ ಕಾಂಕ್ರೀಟ್ ರಸ್ತೆ, ಕೊಂಬೆಟ್ಟು ಅಟಲ್ ಗಾರ್ಡನ್ ಬಳಿ ಮತ್ತುಉ ಸುದಾ ನರ್ಸರಿ ಮನೆಯ ಬಳಿಯ ಕಾಂಕ್ರೀಟ್ ರಸ್ತೆ, ಬಪ್ಪಳಿಗೆ ಬಂಗಾರ್ ಕಾಯರ್ ಕಟ್ಟೆ ವಠಾರ ರಸ್ತೆ, ಬಪ್ಪಳಿಗೆ ಗುಂಪಗಲ್ಲು ಕಾಂಕ್ರೀಟ್ ರಸ್ತೆ ಉದ್ಘಾಟನೆ ನೆರವೇರಿಸಿದ ಅವರು ಅಂಬಿಕಾ ಶಾಲೆಯ ಬಳಿಯ ಕಾಲುದಾರಿಯ ಮತ್ತು ರಾಗಿದಕುಮೇರು ಅಂಗನವಾಡಿ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಸದಸ್ಯರಾದ ಭಾಮಿ ಅಶೋಕ್ ಶೆಣೈ, ಪಿ.ಜಿ.ಜಗನ್ನಿವಾಸ ರಾವ್, ಜೀವಂಧರ್ ಜೈನ್, ಶಿವರಾಮ ಸಪಲ್ಯ, ಗೌರಿ ಬನ್ನೂರು, ಮೋಹಿನಿ ವಿಶ್ವನಾಥ್, ವಿದ್ಯಾ ಗೌರಿ, ವಸಂತ ಕಾರೆಕ್ಕಾಡು, ಜಯಶ್ರೀ ಶೆಟ್ಟಿ, ಜೋತಿ ಅರ್ ನಾಯಕ್, ಚಂದ್ರಶೇಖರ್ ಬಪ್ಪಳಿಗೆ, ಕಿರಣ್ ಶಂಕರ್ ಮಲ್ಯ, ಶ್ರೀಪತಿರಾವ್, ಆನಂದ ಕುಲಾಲ್, ಗೋಪಾಲ್ ಭಟ್, ನಾಗೇಶ್ ರಾವ್, ಡಾ.ಸತೀಶ್ ರಾವ್, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಅರ್ಪಣಾ ಪಡೀಲ್, ಡಾ.ಶೋಭಿತಾ ಸತೀಶ್, ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಸಚಿನ್ ಶೆಣೈ, ಅಶೋಕ್ ಕುಂಬ್ಳೆ, ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ಬಿಜೆಪಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್ ಹಾರಾಡಿ, ಅಶೋಕ್ ಹಾರಾಡಿ, ಅಶೋಕ್ ಕೀಲಾಡಿ, ಮನೀಶ್ ಕುಲಾಲ್, ಶವಿನ್ ಬನ್ನೂರು, ಯೋಗಾನಂದ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.