HomePage_Banner
HomePage_Banner
HomePage_Banner
HomePage_Banner
HomePage_Banner

ಗೃಹರಕ್ಷಕದಳದ ಜಗನ್ನಾಥ್ ಸಾರ್ಜಂಟ್ ಆಗಿ ಪದೋನ್ನತಿ | ಪ್ರೀತಿ, ಪ್ರಾಮಾಣಿಕೆಯಿಂದ ಸಮಾಜದಲ್ಲಿ ಬದಲಾವಣೆ ಸಾದ್ಯ- ಮುರಳಿಮೋಹನ್ ಚೂಂತಾರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗೃಹರಕ್ಷಕದಳದವರು ಇತರರಂತಲ್ಲ. ಸಾಮಾಜಿಕ ಹೊಣೆಗಾರಿಕೆಯ ಜವಾಬ್ದಾರಿ ಇದೆ. ಪ್ರಸ್ತುತ ದಿನದಲ್ಲಿ ತಮ್ಮ ಕರ್ತವ್ಯದ ಜೊತೆಗೆ ಕೋವಿಡ್ -೧೯ಗೆ ಸಂಬಂಧಿಸಿ ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಮನವೊಲೀಸುವಂತೆ ಮಾಡಿ. ಪ್ರೀತಿ ಮತ್ತು ಪ್ರಾಮಾಣಿಕೆಯಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ. ಎಂದು ದಕ್ಷಿಣ ಕನ್ನಡ ಗೃಹರಕ್ಷಕದಳದ ಕಮಾಡೆಂಟ್ ಮುರಳೀಮೋಹನ ಚೂಂತಾರು ಅವರು ಹೇಳಿದರು.

ಪುತ್ತೂರು ಗೃಹರಕ್ಷಕದಳ ಘಟಕದ ಸೆಕ್ಷನ್ ಲೀಡರ್ ಆಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ಸಾರ್ಜಂಟ್ ಆಗಿ ಪದ್ದೊನ್ನತಿ ಹೊಂದಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭದ್ರತಾ ಸಿಬ್ಬಂದಿ ಜಗನ್ನಾಥ ಅವರಿಗೆ ಅವರು ಸಾರ್ಜಂಟ್ ಪಟ್ಟಿ ತೊಡಿಸಿ ಮಾತನಾಡಿದರು. ಜನರು ಗೃಹರಕ್ಷಕದಳವರನ್ನು ಹೆಚ್ಚಾಗಿ ಗಮನಿಸುತ್ತಾರೆ. ಯಾಕೆಂದರೆ ಜನರಲ್ಲಿ ಹೆಚ್ಚು ಬೆರೆಯುವವರು ಗೃಹರಕ್ಷಕದಳದವರು. ಇವತ್ತು ಮೇಲಾಧಿಕಾರಿಗಳಿಂದ ಬಂದಿರುವ ಆದೇಶದಂತೆ ಗೃಹರಕ್ಷಕದಳದವರು ಹೆಚ್ಚು ಮುತುವರ್ಜಿಯಿಂದ ತೊಡಗಿಸಿಕೊಳ್ಳಬೇಕು. ವಾಹನ ಸವಾರರು ಪೊಲೀಸರು ಇದ್ದರೆ ಮಾತ್ರ ಹೆಲ್ಮೆಟ್, ಸೀಟ್ ಬೆಲ್ಟ್ ಹಾಕುವುದು ಮಾತ್ರವಲ್ಲ ಪೊಲೀಸರು ಇಲ್ಲದಿದ್ದರೂ ಕಾನೂನು ಪಾಲನೆ ಮಾಡುವಂತಾಗಬೇಕಾದರೆ ಅದಕ್ಕೆ ಗೃಹರಕ್ಷಕದಳವರ ಪ್ರೀತಿ, ಪ್ರಾಮಾಣಿಕತೆ ಅಡಗಿದೆ. ಪ್ರಸ್ತುತ ದಿನದಲ್ಲಿ ಕೋವಿಡ್‌ಗೆ ಸಂಬಂಧಿಸಿ ಮಾಸ್ಕ್ ಧರಿಸದವರಿಗೆ ದಂಡ ಪ್ರಕ್ರಿಯೆ ಇದೆ. ಆದರೆ ದಂಡದ ಭಯದ ಬದಲು ಪ್ರೀತಿಯ ಪ್ರಾಮಾಣಿಕೆಯಲ್ಲಿ ಜನರ ಆರೋಗ್ಯದ ಮನವೊಲಿಸುವ ಮೂಲಕ ಎಲ್ಲರು ಮಾಸ್ಕ್ ಧರಿಸುವಂತೆ ಮಾಡುವ ದೊಡ್ಡ ಜವಾಬ್ದಾರಿ ಗೃಹರಕ್ಷಕದವರ ಮೇಲಿದೆ ಎಂದರು. ಗೃಹರಕ್ಷಕದಳದ ಪುತ್ತೂರು ಘಟಕಾಧಿಕಾರಿ ಅಭಿಮನ್ಯು ಅಧ್ಯಕ್ಷತೆ ವಹಿಸಿದ್ದರು. ಪ್ರಭಾರ ಘಟಕಾಧಿಕಾರಿ ಸಂತೋಷ್ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸತ್ಯನಾರಾಯಣ್ ಮತ್ತು ವಿಠಲ್ ನಾಯ್ಕ್ ಅತಿಥಿಗಳನ್ನು ಗೌರವಿಸಿದರು. ಧನುಷಾ ಟಿ. ಪ್ರಾರ್ಥಿಸಿದರು. ಕವಿತಾ ಸ್ವಾಗತಿಸಿದರು. ಕಾವ್ಯ ವಂದಿಸಿದರು.

ಕೋವಿಡ್ ಜಾಗೃತಿ ಪುಸ್ತಕ ವಿತರಣೆ:
ಕೋವಿಡ್ ಸಂದರ್ಭದಲ್ಲಿ ತಮ್ಮ ಕರ್ತವ್ಯದ ಅವಧಿಯಲ್ಲಿ ಯಾವ ರೀತಿಯಲ್ಲಿ ಮುಂಜಾಗರುಕತೆ ವಹಿಸಬೇಕು ಮತ್ತು ಕೋವಿಡ್ ಪ್ರಾಥಮಿಕ ಸಂಪರ್ಕಿತರೊಂದಿಗೆ ಯಾವ ರೀತಿ ಇರಬೇಕು ಮತ್ತು ಕೋವಿಡ್ ಬಂದ ಬಳಿಕ ಮುನ್ನೆಚ್ಚರಿಕೆ ಮತ್ತು ದೇಹದ ರೋಗ ನಿರೋಧಕ ಶಕ್ತಿ ಹೇಗೆ ವೃದ್ದಿಸಬೇಕೆಂಬ ಕುರಿತು ಕೋವಿಡ್ ಜಾಗೃತಿ ಪುಸ್ತಕವನ್ನು ಗೃಹರಕ್ಷಕ ಸಿಬ್ಬಂದಿಗಳಿಗೆ ವಿತರಣೆ ಮಾಡಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.