HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ದಲಿತ್ ಸೇವಾ ಸಮಿತಿ ವತಿಯಿಂದ ಪದಗ್ರಹಣ, ಸನ್ಮಾನ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಕಡಬ; ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ವತಿಯಿಂದ ಕಡಬ ತಾಲೂಕು ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾನ್ವಿತರ ಸನ್ಮಾನ ಕಾರ್ಯಕ್ರಮ ಅ.11ರಂದು ಕಡಬ ಅಂಬೆಡ್ಕರ್ ಭವನದಲ್ಲಿ ನಡೆಯಿತು.

ಕಡಬ ಪೊಲೀಸ್ ಉಪ ನಿರೀಕ್ಷಕರಾದ ರುಕ್ಮ ನಾಯ್ಕ ನವರು ದೀಪ ಬೆಳಗಿಸಿ ಅಂಬೆಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದಲಿತ್ ಸೇವಾ ಸಮಿತಿ ವತಿಯಿಂದ ಹಲವಾರು ಜನಪರ ಕಾರ್ಯಕ್ರಮ ನಡೆಯುತ್ತಿದ್ದು ಬಡವರ ದೀನ ದಲಿತರ ಅಭಿವೃದ್ಧಿಗೆ ಶ್ರಮಿಸುವಂತಾಗಲಿ ಎಂದು ಶುಭ ಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿ ದಲಿತರ ಸೇವೆಯೇ ನಮ್ಮ ಗುರಿಯಾಗಿದ್ದು ಕಳೆದ ಹದಿನೈದು ವರ್ಷಗಳಿಂದ ದಲಿತರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದು, ಬೇರೆ ಬೇರೆ ರೀತಿಯಲ್ಲಿ ಹೋರಾಟ, ಪ್ರತಿಭಟನೆ, ಅಧಿಕಾರಿಗಳಿಗೆ ಒತ್ತಡ ತರುವ ಮೂಲಕ ನ್ಯಾಯಯುತ ಬೇಡಿಕೆ ಗಳನ್ನು ಈಡೇರಿಸುವಲ್ಲಿ ಪ್ರಯತ್ನಿಸುತ್ತಿದ್ದೇವೆ, ಮುಂದೆಯೂ ಜನಪರ ಸೇವೆಯೇ ನಮ್ಮ ಗುರಿಯಾಗಿದೆ ಎಂದರು, ಸುದ್ದಿ ಬಿಡುಗಡೆ ವರದಿಗಾರ ಖಾದರ್ ಸಾಹೇಬ್ ಕಲ್ಲುಗುಡ್ಡೆ ರವರು ಉತ್ತರ ಪ್ರದೇಶದ ಹಥರಾಸ್ ನಲ್ಲಿ ಹತ್ಯಾಚಾರಕ್ಕೆ ಒಳಗಾಗಿ ಮೃತರಾದ ಯುವತಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಇವರು ಈ ಪೈಶಾಚಿಕ ಕೃತ್ಯ ವನ್ನು ಖಂಡಿಸಿದ್ದಲ್ಲದೆ, ದಲಿತ ಸೇವಾ ಸಮಿತಿ ಯ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ರವರ ನೇತೃತ್ವದಲ್ಲಿ ಜಿಲ್ಲಾದ್ಯಂತ ಸಂಘಟನಾತ್ಮಕ ವಾಗಿ ಶೋಷಿತ,ದೀನ ದಲಿತರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ, ಸರ್ಕಾರದ ಸೌಲಭ್ಯ ಪ್ರತಿಯೊಬ್ಬ ಬಡಪಾಯಿಗಳಿಗೂ ಸಿಗುವಂತೆ ಪ್ರಯತ್ನಿಸಬೇಕೆಂದರು, ಪಂಜ ವಲಯ ಅರಣ್ಯ ರಕ್ಷಕ ರವಿಚಂದ್ರ ಪಡುಬೆಟ್ಟು ಮಾತನಾಡಿ ಕ್ರಾಂತಿಕಾರಿ ಹೋರಾಟ ನಡೆಯಬೇಕೆಂದ ಅವರು ವಿದ್ಯಾರ್ಥಿ ಗಳಲ್ಲಿ ಕಲಾತ್ಮಕ ಚಟುವಟಿಕೆಗಳನ್ನು ಮೂಡಿಸಬೇಕೆಂದರು, ಉಜಿರೆ ಎಸ್ ಡಿ ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ವಿ.ಕೆ ಕಡಬ ಮಾತನಾಡಿ ಋಣಾತ್ಮಕ ಚಿಂತನೆಗಳನ್ನು ಬಿಟ್ಟು ಧನಾತ್ಮಕ ಚಿಂತನೆಗಳ ಬಗ್ಗೆ ಗಮನ ಹರಿಸುವ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿನಿ ಕೌಶಲ್ಯ ರಂತಹ ಪ್ರತಿಭಾನ್ವಿತರನ್ನು ಗುರುತಿಸುವ ಕೆಲಸ ನಮ್ಮದಾಗಲಿ ಎಂದರು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಣ್ಣೀ ಎಲ್ತಿಮಾರ್, ಪುತ್ತೂರು ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾಯರ್ಕಡ್, ಪುತ್ತೂರು ತಾಲೂಕು ಮಹಿಳಾ ಅಧ್ಯಕ್ಷೆ ಸುನಂಧ ತೆಂಕಿಲ, ಬಂಟ್ವಾಳ ತಾಲೂಕು ಅಧ್ಯಕ್ಷ ಗಣೇಶ್ ಶೀಗೆಬಳ್ಳೆ, ಸುಳ್ಯ ತಾಲೂಕಿನ ಮಾಜಿ ಅಧ್ಯಕ್ಷ ಅಚ್ಯುತ ಗುತ್ತಿಗಾರು ಮಾತನಾಡಿದರು, ಕಡಬ ತಾಲೂಕು ಮಹಿಳಾ ಅಧ್ಯಕ್ಷೆ ಜಯಕುಮಾರಿ ಹಾಗೂ ಕಡಬ ಸಿ.ಎ ಬ್ಯಾಂಕ್ ಮಾಜಿ ಸಿಬ್ಬಂದಿ ತನಿಯಪ್ಪ ಕುತ್ಯಾಡಿ ಅನಿಸಿಕೆ ವ್ಯಕ್ತಪಡಿಸಿದರು, ಕಡಬ ತಾಲೂಕು ಮಾಜಿ ಅಧ್ಯಕ್ಷ ಪದ್ಮಯ್ಯ ಅಂಗಡಿ ಮಜಲು ಹಾಲಿ ಅಧ್ಯಕ್ಷ ಕೆ.ಪಿ ಆನಂದ ಪಡುಬೆಟ್ಟು ಹಾಗೂ ಕಾರ್ಯಧರ್ಶಿ ತಾರಾನಾಥ್ ಅದೇ ರೀತಿ ಮಹಿಳಾ ಘಟಕದ ಅಧ್ಯಕ್ಷೆ ಜಯಕುಮಾರಿ ಹಾಗೂ ಕಾರ್ಯದರ್ಶಿ ಜಯಶ್ರೀ ರವರಿಗೆ ಪುಸ್ತಕ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು, ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಕೇಶವ ಕುಪ್ಲಾಜೆ,ಮಾಜಿ ಪದಾಧಿಕಾರಿಗಳು, ಹಾಗೂ ನೂತನ ಪದಾಧಿಕಾರಿಗಳು ಉಪಸ್ಥಿತರಿದ್ದರು, ದಿನೇಶ್ ಅಗತ್ತಾಡಿ, ತಾರಾನಾಥ್ ಕಡಿರಡ್ಕ, ಸುರೇಶ್ ತೋಟಂತಿಲ, ಗಣೇಶ್ ಪಡುಬೆಟ್ಟು, ರಾಘವ ಕಲಾರ, ಜಯಶ್ರೀ ಹೊಸಮಠ, ಉಮೇಶ್ ಅಲೆಕ್ಕಾಡಿ, ಚಿದಾನಂದ ಕೆ ಅಥಿತಿಳಿಗೆ ಹೂ ಗುಚ್ಛ ನೀಡಿ ಗೌರವಿಸಿದರು.

ಪ್ರಮಾಣ ವಚನ
ನಾವು ಗಳು ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿಯ ಕಡಬ ತಾಲೂಕಿನ ಪದಾಧಿಕಾರಿಗಳಾಗಿ ಆಯ್ಕೆ ಯಾಗಿದ್ದು, ದಲಿತ್ ಸೇವಾ ಸಮಿತಿ ಯ ತತ್ವ ಸಿದ್ಧಾಂತಗಳಿಗೆ ಬದ್ದರಾಗಿರುತ್ತೇವೆ. ಪರಿಸಿಷ್ಟ ಜಾತಿ ಪಂಗಡಗಳಿಗೆ ಅದೇ ರೀತಿ ಮಹಿಳೆಯರಿಗೆ ಯಾವುದೇ ದೌರ್ಜನ್ಯ, ಅನ್ಯಾಯ ವಾದಲ್ಲಿ ನ್ಯಾಯ ಬದ್ದ ಹೋರಾಟ ಗಳಿಗೆ ಬದ್ದರಾಗಿದ್ದೇವೆ ಎಂದು ಪ್ರತಿಙೆ ಮಾಡುತ್ತೇವೆ – ಸೇಸಪ್ಪ ಬೆದ್ರಕಾಡು ಅಧ್ಯಕ್ಷರು ದಲಿತ್ ಸೇವಾ ಸಮಿತಿ ದ.ಕ

ಸನ್ಮಾನ
ಕಳೆದ ಪಿ ಯು ಸಿ ಪರೀಕ್ಷೆಯಲ್ಲಿ ಕಡಬ ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದ ಕೌಶಲ್ಯ ಬೊಟ್ಟಡ್ಕ ರವರನ್ನು ಸಮಿತಿ ವತಿಯಿಂದ ಕಡಬ ಠಾಣಾಧಿಕಾರಿ ರುಕ್ಮ ನಾಯ್ಕ ರವರು ಶಾಲು ಹೊದಿಸಿ ಹಾರ ಹಾಕಿ ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು. ಜಿಲ್ಲಾ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಅಥಿತಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಇತ್ತೀಚೆಗೆ ಉತ್ತರ ಪ್ರದೇಶದ ಹಥರಾಸ್ ನಲ್ಲಿ ಹತ್ಯಾಚಾರಕ್ಕೆ ಒಳಗಾಗಿ ಮೃತರಾದ ಯುವತಿಗೆ ಸದ್ಘತಿಗಾಗಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ನೂತನ ಅಧ್ಯಕ್ಷ ಕೆ.ಪಿ ಆನಂದ ರವರು ಸ್ವಾಗತಿಸಿ ಉಪಾಧ್ಯಕ್ಷ ಚಿದಾನಂದ ಕೆ ವಂದಿಸಿದರು. ಶಾಲಾ ಶಿಕ್ಷಕಿ ಪೂರ್ಣಿಮಾ ಮುಳಿಮಜಲು, ನೂತನ ಮಹಿಳಾ ಕಾರ್ಯದರ್ಶಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.