HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

50 ವರ್ಷಗಳ ಇತಿಹಾಸ ಇರುವ ಗೃಹರಕ್ಷಕದಳಕ್ಕೆ ಸ್ವಂತ ಕಟ್ಟಡವಿಲ್ಲ !

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಸುಮಾರು ೫೦ ವರ್ಷಗಳ ಇತಿಹಾಸ ಇರುವ ಪುತ್ತೂರಿನ ಗೃಹರಕ್ಷಕ ದಳಕ್ಕೆ ಸ್ವಂತ ನಿವೇಶನ, ಕಟ್ಟಡವಿಲ್ಲದೆ ತಮ್ಮ ಸೇವಾ ಚಟುವಟಿಕೆಯ ಸಭೆ ನಡೆಸಲು ಬೇರೆ ಬೇರೆ ದೇವಸ್ಥಾನ, ಮಂದಿರ, ಹಾಲ್‌ಗಳನ್ನು ಅವಲಂಭಿಸಿರುವುದಲ್ಲದೆ ಸ್ವಂತ ಕಟ್ಟಡಕ್ಕಾಗಿ ಇದೀಗ ಘಟಕಾಧಿಕಾರಿಗಳು ಪುತ್ತೂರು ಶಾಸಕರ ಮೊರೆ ಹೋಗಿದ್ದಾರೆ.

ಗೃಹರಕ್ಷಕದಳ ಎನ್ನುವುದು ಸರಕಾರದ ಅಧೀನದಲ್ಲಿ ರುವ ಸ್ವತಂತ್ರವಾದ, ಶಿಸ್ತುಬದ್ಧವಾದ ಸಮವಸ್ತ್ರದಾರಿ ಸ್ವಯಂ ಸೇವಕರನ್ನು ಒಳಗೊಂಡ ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಸಮಾಜಕ್ಕೆ ತುರ್ತು ಅಗತ್ಯದ ಸಂದರ್ಭಗಳಲ್ಲಿ ಸೇವೆ ಸಲ್ಲಿಸುವ ಸಂಸ್ಥೆಯಾಗಿರುತ್ತದೆ. ನಿಸ್ವಾರ್ಥ ಸೇವೆ ಎಂಬ ಮೂಲಮಂತ್ರದೊಂದಿಗೆ ಸಮಾಜದ ಎಲ್ಲಾ ವರ್ಗದ ಜನರಿಗೆ ರಕ್ಷಣೆ ನೀಡುವ ಧ್ಯೇಯವನ್ನು ಹೊಂದಿರುತ್ತದೆ. ಪೊಲೀಸರೊಂದಿಗೆ ಪೊಲೀಸರಾಗಿ, ಅಗ್ನಿಶಾಮಕದಳದಲ್ಲೂ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲೂ ಉತ್ತಮ ಸೇವಾ ಕಾರ್ಯವನ್ನು ಗೃಹರಕ್ಷಕದಳ ಬಹಳ ಹಿಂದಿನಿಂದಲೂ ನಿಸ್ವಾರ್ಥ ಸೇವೆ ಇವರದ್ದು, ಪುತ್ತೂರಿನಲ್ಲಿ ಈಗಿನ ಮಿನಿ ವಿಧಾನ ಸೌಧವಿದ್ದ ಸ್ಥಳದಲ್ಲಿ ಆಗಿನ ಸಹಾಯಕ ಕಮೀಷನರ್ ಕಚೇರಿ ಕಟ್ಟಡದ ಒಂದು ಭಾಗದಲ್ಲಿ ಗೃಹರಕ್ಷಕ ದಳಕ್ಕೂ ಕೊಠಡಿ ಇತ್ತು. ಆದರೆ ಮಿನಿ ವಿಧಾನ ಸೌಧ ನಿರ್ಮಾಣ ಆದ ಬಳಿಕ ಅಲ್ಲಿಂದ ಬೇರೆ ಬೇರೆ ಕಡೆಗಳಿಗೆ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಗೃಹರಕ್ಷಕ ದಳದ ಕಚೇರಿ ಕೊನೆಗೆ ಹಿಂದಿನ ಹಳೆ ಪುರಸಭೆ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಇದೀಗ ಪುರಸಭೆ ಕಟ್ಟಡವಿದ್ದ ಸ್ಥಳದಲ್ಲಿ ನೂತನ ನಗರಸಭೆ ಆಡಳಿತ ಕಚೇರಿ ನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ಹಳೆ ಕಟ್ಟಡವನ್ನು ಕೆಡವಲಾಗಿದ್ದರಿಂದ ಗೃಹರಕ್ಷಕದಳ ಕಚೇರಿ ಇಲ್ಲದೆ ಅಳೆದಾಟದಲ್ಲಿದೆ.

ಶಾಸಕರಿಗೆ ಮನವಿ :
ಗೃಹರಕ್ಷಕದಳಕ್ಕೆ ಪುತ್ತೂರಿನಲ್ಲಿ ಸ್ವಂತ ನಿವೇಶನ ಕೊಡಿಸುವ ಕುರಿತು ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಮುರಳಿಮೋಹನ ಚೂಂತರ್ ಅವರು ಅ.೧೧ರಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಶಾಸಕರು ಈ ಕುರಿತು ಭರವಸೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯಲ್ಲಿ ೧೫ ಯುನಿಟ್‌ಗಳಿದ್ದು ೧ಸಾವಿರ ಗೃಹರಕ್ಷಕರು ಅತ್ಯಂತ ಕ್ರೀಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಪೊಲೀಸ್ ಇಲಾಖೆಯ ಒಂದಷ್ಟು ಗೃಹರಕ್ಷಕರನ್ನು ಕರ್ತವ್ಯದಿಂದ ತೆಗೆದಿದ್ದರು ಸಹ ಸಂಬಳ ಜಾಸ್ತಿ ಅಗಿದ್ದರಿಂದ ಎಲ್ಲರಿಗೂ ಕೆಲಸ ಸಿಗುವಂತೆ ಮಾಡಿದ್ದೆವೆ. ಪುತ್ತೂರಿನಲ್ಲಿ ಸುಮಾರು ೬೦ ಗೃಹರಕ್ಷಕದಳದವರು ಅತ್ಯಂತ ಕ್ರೀಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ. ಪುತ್ತೂರಿನಲ್ಲಿ ೧೯೭೦ರಲ್ಲಿ ಗೃಹರಕ್ಷಕದಳ ಅರಂಭಗೊಂಡಿದ್ದು, ಅಗ ಚಂದ್ರಶೇಖರ್ ಎಂಬವರು ಘಟಕಾಧಿಕಾರಿಯಾಗಿದ್ದರು. ಆದರೆ ದುದೃಷ್ಟಕರ ಎಂದರೆ ನಮಗೆ ಸ್ವಂತ ಸೂರಿಲ್ಲ. ನಮಗೆ ನಮ್ಮದೆ ಆದ ಪುಟ್ಟದಾದ ಸೂರು ಸಿಗಲು ಗೃಹರಕ್ಷಕದಳದವರ ಒಕ್ಕೊರಲಿನ ಆಗ್ರಹ. ಈ ಕುರಿತು ಜನಪ್ರತಿನಿಧಿಗಳಲ್ಲಿ ಬೇಡಿಕೆ ಇಟ್ಟಿದ್ದೇವೆ – ಮುರಳಿಮೋಹನ್ ಚೂಂತರ್  ಕಮಾಂಡೆಂಟ್ ದ.ಕ.ಜಿಲ್ಲಾ ಗೃಹರಕ್ಷಕದಳ

ಗೃಹರಕ್ಷಕದಳಕ್ಕೆ ನಿವೇಶನ ಕಾದಿರಿಸಲಾಗುವುದು
ಪುತ್ತೂರಿನಲ್ಲಿ ಒಂದು ರೀತಿಯಲ್ಲಿ ಪೊಲೀಸರ ಸರಿ ಸಾಟಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕದಳದವರ ಬೇಡಿಕೆಯಂತೆ ಅವರ ಕಚೇರಿ ಕಟ್ಟಡಕ್ಕಾಗಿ ನಿವೇಶನ ಕಾದಿರಿಸಲಾಗುವುದು. ಪುತ್ತೂರಿನ ಕೇಂದ್ರ ಭಾಗದಲ್ಲೇ ನಿವೇಶನ ಕಾದಿರಿಸುವ ನಿಟ್ಟಿನಲ್ಲಿ ತಹಶೀಲ್ದಾರ್, ಕಂದಾಯ ಅಧಿಕಾರಿಗಳ ಜೊತೆ ಜಾಗ ಪರಿಶೀಲನೆ ನಡೆಸುತ್ತೇವೆ. ಬಳಿಕ ಅವರು ಜಿಲ್ಲಾ ಮಟ್ಟದಲ್ಲಿ ಅದಕ್ಕೆ ಬೇಗಾದ ಪತ್ರಗಳನ್ನು ತಾಲೂಕಿಗೆ ನೀಡಬೇಕು. ಕಟ್ಟಡ ನಿರ್ಮಾಣಕ್ಕೆ ಇಲಾಖೆಯ ಮೂಲಕ ಅನುದಾನ ಹೊಂದಾಣಿಗೆ ಮಾಡುವ ಕುರಿತು ಚಿಂತನೆ ನಡೆಸುತ್ತೇನೆ  – ಸಂಜೀವ ಮಠಂದೂರು, ಶಾಸಕರು ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.