ನೆಟ್ಟಣಿಗೆಮುಡ್ನೂರು: ಕೋಳಿ ಅಂಕಕ್ಕೆ ದಾಳಿ ನಡೆಸಿದ ಸಂಪ್ಯ ಪೊಲೀಸರು| 5 ಮಂದಿ ಆರೋಪಿಗಳ ಬಂಧನ – 9 ಕೋಳಿ, ನಗದು, 7 ದ್ವಿಚಕ್ರ ವಾಹನ ವಶಕ್ಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೆಟ್ಟಣಿಗೆಮುಡ್ನೂರು ಗ್ರಾಮದ ಮೈರೋಳು ಎಂಬಲ್ಲಿ ಸರಕಾರಿ ಗುಡ್ಡ ಪ್ರದೇಶದಲ್ಲಿ ಕೋಳಿ ಅಂಕ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಸಂಪ್ಯ ಎಸ್.ಐ ಉದಯರವಿ ಅವರ ನೇತೃತ್ವದಲ್ಲಿ ನಡೆದ ದಾಳಿ ನಡೆಸಿ ಕೋಳಿ ಅಂಕದಲ್ಲಿ ನಿರತರಾಗಿದ್ದವರ ಪೈಕಿ 5 ಮಂದಿಯನ್ನು ಬಂಧಿಸಿದ್ದು, ಜೂಜಾಟಕ್ಕೆ ಬಳಸಿದ್ದ ನಗದು, 7 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ಕೊಂಡ ಘಟನೆ ಅ.11ರಂದು ನಡೆದಿದೆ.

ಮೈರೋಳು ಸರಕಾರಿ ಗುಡ್ಡದ ಖಾಲಿ ಪ್ರದೇಶದಲ್ಲಿ ಕೋಳಿ ಅಂಕ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿತ್ತು. ಕೋಳಿ ಅಂಕದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಕರುಣಾಕರ, ಸಂಜೀವ ಕೆ, ಮಹಾಲಿಂಗ ಮಣಿಯಾಣಿ, ಜಯರಾಮ ಸಿ, ಸೀತಾರಾಮ ಎಂ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಸುಭಾಶ್ ಕರ್ನೂರು ಬಾವ, ಕೃಷ್ಣಾ ಕುಂಞಿಪಾದೆ, ಪ್ರವೀಣ್ ಕರ್ನೂರು ಬಾವ ಮತ್ತು ಇತರರು ಪರಾರಿಯಾಗಿದ್ದಾರೆ. ಆರೋಪಿಗಳು ಜೂಜಿಗೆ ಬಳಸಿದ್ದ ರೂ. 9 ಸಾವಿರ ಮೌಲ್ಯದ ವಿವಿಧ ಜಾತಿಯ 9 ಹುಂಜ ಕೋಳಿಗಳನ್ನು ಮತ್ತು ಜೂಜಾಟಕ್ಕೆ ಬಳಸಿದ್ದ ಒಟ್ಟು ರೂ. 2ಸಾವಿರ ನಗದನ್ನು ಹಾಗು ಆರೋಪಿಗಳು ಜೂಜಾಟದ ಸ್ಥಳಕ್ಕೆ ಬರಲು ಉಪಯೋಗಿಸಿ ೭ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದು, ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.