HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ವಿಟ್ಲ: ಒಂಟಿ ಮಹಿಳೆಯ ಮನೆಯಲ್ಲಿ ನಡೆದ ದರೋಡೆ ಯತ್ನ ಪ್ರಕರಣ| ಉತ್ತರ ಪ್ರದೇಶ ಮೂಲದ ವ್ಯಕ್ತಿಯ ಬಂಧನ

Puttur_Advt_NewsUnder_1
Puttur_Advt_NewsUnder_1
  • ವಿಟ್ಲ ಠಾಣಾಎಸ್.ಐ.ರವರ ನೇತೃತ್ವದ ತಂಡದ ಕಾರ್ಯಾಚರಣೆ
  • ಕುರುಹು ಬಿಟ್ಟು ಕೊಡದೆ ಪರಾರಿಯಾಗಿದ್ದ ಆರೋಪಿ
  • ಎರಡೇ ದಿನದಲ್ಲಿ ಆರೋಪಿಯನ್ನು ಬಂಧಿಸಿದ ವಿಟ್ಲ ಪೊಲೀಸರು

ವಿಟ್ಲ: ಇಲ್ಲಿನ ಮೇಗಿನಪೇಟೆಯಲ್ಲಿ ಒಂಟಿ ಮಹಿಳೆಯಿದ್ದ ಮನೆಯಲ್ಲಿ ನಡೆದಿರುವ ಹಲ್ಲೆ ಹಾಗೂ ದರೋಡೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಠಾಣಾ ಎಸ್.ಐ. ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡ ಪ್ರಕರಣವನ್ನು ಎರಡೇ ದಿನದಲ್ಲಿ ಭೇದಿಸಿ, ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.


ಉತ್ತರ ಪ್ರದೇಶ ಸಹರನಪುರ ಜಿಲ್ಲೆ ನಿವಾಸಿ, ಮೇಗಿನಪೇಟೆಯಲ್ಲಿನ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದ ಜುಬೈರ್ ಅಹಮ್ಮದ್ (24ವ.) ಬಂಧಿತ ಆರೋಪಿ ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ವಿಟ್ಲ ಮೇಗಿನ ಪೇಟೆಯ ದಿ. ಬಂಟಪ್ಪ ಶೆಟ್ಟಿಯವರ ಪುತ್ರಿ ಕುಮಾರಿ ಲಲಿತಾ(45ವ.)ರವರ ಮನೆಯಲ್ಲಿ ಅ.೯ರಂದು ಬೆಳಗ್ಗೆ 7.45ಘಂಟೆ ಸುಮಾರಿಗೆ ಘಟನೆ ನಡೆದಿತ್ತು. ಘಟನೆಯಿಂದಾಗಿ ಲಲಿತಾರವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆರಂಭದಲ್ಲಿ ವಿಟ್ಲ ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳು ಮಹಿಳೆ ನೀಡಿದ ಕೆಲವೊಂದು ಮಾಹಿತಿ, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಆಗಂತುಕನ ಭಾವಚಿತ್ರದ ಆಧಾರದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ವಿಟ್ಲ ಠಾಣಾ ಪೊಲೀಸರು ಸಫಲರಾಗಿದ್ದಾರೆ. ಬಂಧಿತ ಆರೋಪಿಯಿಂದ ಕೃತ್ಯದ ಸಮಯ ಬಳಸಿದ ವಸ್ತುಗಳನ್ನು ಹಾಗೂ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್, ಬಂಟ್ವಾಳ ಸಹಾಯಕ ಅಧೀಕ್ಷಕ ವೆಲೆಂಟನ್ ಡಿಸೋಜರವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರ ನೇತೃತ್ವದಲ್ಲಿ ವಿಟ್ಲ ಠಾಣಾ ಉಪನಿರೀಕ್ಷಕ ವಿನೋದ್ ರೆಡ್ಡಿ ಹಾಗೂ ಸಿಬ್ಬಂದಿಗಳಾದ ಪ್ರಸನ್ನ, ದಿನೇಶ್, ಜಯಕುಮಾರ್, ಪ್ರತಾಪ, ವಿನಾಯಕ, ಹೇಮರಾಜ್ ರವರ ತಂಡ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ.

ಅಂದು ನಡೆದಿದ್ದೇನು..?: ಕೊಡಂಗೈ ಸಮೀಪದ ಹಾಳೆತಟ್ಟೆ ಫ್ಯಾಕ್ಟರಿಯಲ್ಲಿ ಕೆಲಸಮಾಡಿಕೊಂಡಿದ್ದ ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ ವಿಟ್ಲ ಮೇಗಿನ ಪೇಟೆಯ ದಿ. ಬಂಟಪ್ಪ ಶೆಟ್ಟಿಯವರ ಪುತ್ರಿ ಕುಮಾರಿ ಲಲಿತಾರವರು ಅ.9ರಂದು ಬೆಳಗ್ಗೆ ೭.೪೫ಘಂಟೆ ಸುಮಾರಿಗೆ ತನ್ನ ಮನೆಯಲ್ಲಿ ದೇವರಿಗೆ ದೀಪ ಇಟ್ಟು ಪ್ರಾರ್ಥಿಸುತ್ತಿದ್ದ ವೇಳೆ ಮನೆಯೊಳಗಡೆ ನುಗ್ಗಿದ ಜುಬೈರ್ ಅಹಮ್ಮದ್ ಲಲಿತಾರವರನ್ನು ಎತ್ತಿಕೊಂಡು ಮನೆಯ ಅಡುಗೆ ಕೋಣೆಗೆ ಎಳೆದುಕೊಂಡು ಹೋಗಿ ಅವರ ಮೇಲೆ ದಾಳಿ ಮಾಡಿ ಅವರ ಬಳಿ ಇದ್ದ ಚಿನ್ನಾಭರಣವನ್ನು ಕೊಂಡೊಯ್ಯುವ ಪ್ರಯತ್ನ ಮಾಡಿದ್ದ. ಈ ವೇಳೆ ಲಲಿತಾರವರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರ ಬಾಯಿಗೆ ಬಟ್ಟೆ ತುರುಕಿಸಿ ಕೈಕಾಲುಗಳನ್ನು ವಯರಿನಿಂದ ಕಟ್ಟಿ ಹಲ್ಲೆ ನಡೆಸಿದ್ದ. ಇದರಿಂದ ಕಂಗೆಟ್ಟ ಮಹಿಳೆ ಸತ್ತವರ ಹಾಗೆ ನೆಲದಲ್ಲಿ ಬಿದ್ದುಕೊಂಡಿದ್ದರು. ಮಹಿಳೆ ಮೃತಪಟ್ಟಿರುವುದಾಗಿ ಭಾವಿಸಿದ ಆರೋಪಿ ಅಲ್ಲೇ ಮೇಜಿನ ಮೇಲೆ ಇದ್ದ ಬೀಗದ ಕೀಯ ಮೂಲಕ ಮುಂಬಾಗಿಲಿಗೆ ಬೀಗ ಜಡಿದು ಬಳಿಕ ಪರಾರಿಯಾಗಿದ್ದ. ಘಟನೆಯಿಂದಾಗಿ ಮುಖ ಹಾಗೂ ಎದೆಯ ಭಾಗಕ್ಕೆ ಗಂಭೀರ ತರದಲ್ಲಿಗಾಯಗೊಂಡಿದ್ದ ಮಹಿಳೆ ಹಿಂಬಾಗಿಲ ಮೂಲಕ ಮನೆಯಿಂದ ಹೊರಬಂದು ನೆರೆಮನೆಯವರ ಸಹಾಯ ಯಾಚಿಸಿದ್ದರು. ನೆರೆ ಮನೆಯವರ ಸಹಾಯದಿಂದ ಮಹಿಳೆಯನ್ನು ವಿಟ್ಲದ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದೀಗ ಅಲ್ಲಿ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ . ಘಟನೆಗೆ ಸಂಬಂಧಿಸಿದಂತೆ ಮಹಿಳೆ ನೀಡಿದ ದೂರಿನಂತೆ ದರೋಡೆಗೆ ಯತ್ನ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿ ಮಹತ್ತರವಾದ ಮಾಹಿತಿಯೊಂದನ್ನು ಕಲೆಹಾಕಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ವಿವಿಧ ದೃಷ್ಟಿಕೋನದಲ್ಲಿ ನಡೆದಿತ್ತು ತನಿಖೆ: ನಡು ಪೇಟೆಯಲ್ಲಿ ಹಾಡಹಗಲೇ ನಡೆದಿರುವ ಒಂಟಿ ಮಹಿಳೆಯ ಮೇಲಿನ ಹಲ್ಲೆಯ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದರು. ಮಹಿಳೆ ನೀಡಿದ ಕೆಲವೊಂದು ಮಹತ್ತರ ಮಾಹಿತಿ ಹಾಗೂ ಮಹಿಳೆಯ ಮನೆಯ ಪಕ್ಕದ ಸಿಸಿಕ್ಯಾಮಾರದ ಫುಟೇಜ್‌ಗಳನ್ನು ತಾಳೆ ಹಾಕಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಸಂಶಯಕ್ಕೆ ಎಡೆ ಮಾಡಿಕೊಟ್ಟಿದ್ದ ಪ್ರಕರಣ: ಘಟನೆ ನಡೆಯುತ್ತಿದ್ದಂತೆ ಆರಂಭದಲ್ಲಿ ಇದೊಂದು ಚಿನ್ನಾಭರಣ ದೋಚುವ ಉzಶದಿಂದ ನಡೆದ ದರೋಡೆ ಪ್ರಕರಣವೆಂಬ ಅನುಮಾನ ವ್ಯಕ್ತವಾಗಿತ್ತು. ಆದರೆ ತನಿಖೆ ವೇಳೆ ಪೊಲೀಸರಿಗೆ ಮಹಿಳೆ ಹಾಕಿಕೊಂಡಿದ್ದ ಚಿನ್ನಾಭರಣಗಳು ಮನೆಯೊಳಗಡೆ ಪತ್ತೆಯಾಗಿತ್ತು. ಮಾತ್ರವಲ್ಲದೆ ಮನೆಯೊಳಗಡೆ ಆರೋಪಿ ಚಿನ್ನಾಭರಣಕ್ಕಾಗಿ ಹುಡುಕಾಡಿದ ಕುರುಹುಗಳು ಪತ್ತೆಯಾಗಿರಲಿಲ್ಲ. ಈ ಎಲ್ಲಾ ನಿಟ್ಟಿನಲ್ಲಿ ಇದು ದರೋಡೆಗಾಗಿ ನಡೆದ ಕೃತ್ಯವಾಗಿರದೆ ಹಳೆದ್ವೇಷದಿಂದ ನಡೆದ ಕೃತ್ಯವೆಂಬ ಸಂಶಯ ವ್ಯಕ್ತವಾಗಿತ್ತು. ಇಷ್ಟು ಮಾತ್ರವಲ್ಲದೆ ಒಂಟಿ ಮಹಿಳೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಪ್ರಕರಣ ಹಲವಾರು ಸಂಶಯಕ್ಕೆ ಎಡೆಮಾಡಿಕೊಟ್ಟಿತ್ತು.

ಪೀಠೋಪಕರಣ ಕಾರ್ಖಾನೆಯಲ್ಲಿ ಕೆಲಸ: ಉತ್ತರ ಪ್ರದೇಶ ಮೂಲದ ಜುಬೈರ್ ಅಹಮ್ಮದ್ ವರ್ಷಗಳಿಂದ ಮೇಗಿನಪೇಟೆಯಲ್ಲಿರುವ ಮರದ ಪೀಠೋಪಕರಣ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಮೇಗಿನಪೇಟೆಯಲ್ಲಿರುವ ವ್ಯಕ್ತಿಯೋರ್ವರ ಬಾಡಿಗೆ ಮನೆಯಲ್ಲಿ ಸ್ನೇಹಿತರೊಂದಿಗೆ ವಾಸಿಸುತ್ತಿದ್ದ. ಆದರೆ ಕೃತ್ಯ ನಡೆದಂದು ಮುಂಜಾನೆ ಒಬ್ಬಂಟಿಯಾಗಿ ಮನೆಯಿಂದ ಹೊರಬಂದು ಕೃತ್ಯ ನಡೆಸಿ ರೂಮಿಗೆ ಮರಳಿ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹಣಕ್ಕಾಗಿ ನಡೆಸಿರುವ ಕೃತ್ಯವೆಂದ ಆರೋಪಿ: ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಜುಬೈರ್ ಅಹಮ್ಮದ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದಿರುವುದರಿಂದಾಗಿ ತನಗೆ ಹಣದ ಅಡಚಣೆಯಾಗಿತ್ತು. ಇದರಿಂದಾಗಿ ಒಂಟಿ ಮಹಿಳೆಯಿದ್ದ ಮನೆಯನ್ನು ಆಯ್ಕೆ ಮಾಡಿ ದರೋಡೆಗೆ ಯತ್ನಿಸಿರುವುದಾಗಿ ಆತ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಆರೋಪಿ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಹಾಗೂ ಕಿವಿಯ ಓಲೆಯನ್ನು ಎಳೆದು ಕೊಂಡಿದ್ದನಾದರೂ, ಕೃತ್ಯ ನಡೆಸಿ ಆತ ಪಲಾಯನ ಮಾಡುವ ಸಂದರ್ಭದಲ್ಲಿ ಅದು ಮನೆಯೊಳಗಡೆಯೇ ಬಿದ್ದುಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರಿಗೆ ನಾಗರೀಕರಿಂದ ವ್ಯಾಪಕ ಪ್ರಶಂಸೆ
ವಿಟ್ಲದ ಪೇಟೆಯಲ್ಲಿ ಒಂಟಿಮಹಿಳೆಯ ಮನೆಯಲ್ಲಿ ಹಾಡಹಗಲೆ ನಡೆದ ಹಲ್ಲೆ ಹಾಗೂ ದರೋಡೆಗೆ ಯತ್ನ ಪ್ರಕರಣ ಹಲವಾರು ಸಂಶಯಕ್ಕೆ ಎಡೆಮಾಡಿಕೊಟ್ಟಿತ್ತು. ಮಾತ್ರವಲ್ಲದೆ ಪೊಲೀಸ್ ಇಲಾಖೆಗೆ ಇದೊಂದು ಸವಾಲಾಗಿ ಪರಿಣಮಿಸಿತ್ತು. ಇಷ್ಟು ಮಾತ್ರವಲ್ಲದೆ ಘಟನೆ ನಡೆದ ಕ್ಷಣದಿಂದ ಹಲವಾರು ತಿರುವುಗಳನ್ನು ಪಡೆದುಕೊಂಡು ಪ್ರಶ್ನೆಗಳನ್ನು ಹುಟ್ಟುಹಾಕುತ್ತಾ ಮುನ್ನಡೆದಿತ್ತು. ಆರೋಪಿ ಹಾಡಹಗಲೇ ಕೃತ್ಯ ನಡೆಸಿ ಯಾವುದೇ ಕುರುಹನ್ನು ಬಿಟ್ಟುಕೊಡದೆ ಪೊಲೀಸರಿಗೆ ಸವಾಲೆಸೆದು ಪರಾರಿಯಾಗಿದ್ದ. ಆದರೆ ಇಷ್ಟೊಂದು ಕಠಿಣ ಪರಿಸ್ಥಿತಿಯಲ್ಲಿಯೂ ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಎರಡೇ ದಿನಗಳಲ್ಲಿ ಪತ್ತೆ ಮಾಡಿರುವ ವಿಟ್ಲ ಠಾಣಾ ಪೊಲೀಸರ ಕಾರ್ಯಾಚರಣೆ ನಾಗರೀಕರಲ್ಲಿ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.