HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ವೃದ್ಧ ದಂಪತಿಗೆ ದಂಡ ವಿಧಿಸಿ ರಶೀದಿ ನೀಡದ ಪ್ರಕರಣ: ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳ ಬಗ್ಗೆ ತನಿಖೆ-ಕೋಟ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬಸ್ ಟಿಕೆಟ್ ಖರೀದಿಸಿದ್ದರೂ ಪರೀಕ್ಷಕರು ಆಗಮಿಸಿದ ವೇಳೆ ಟಿಕೆಟ್ ಇಲ್ಲದ ಕಾರಣಕ್ಕಾಗಿ ವೃದ್ದ ದಂಪತಿಗೆ ದಂಡ ವಿಧಿಸಿ ರಶೀದಿ ನೀಡದಿರುವ ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳ ಬಗ್ಗೆ ತನಿಖೆ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

ಕಳೆದ ಮಂಗಳವಾರ ಪುತ್ತೂರಿನಿಂದ ಉಪ್ಪಿನಂಗಡಿಗೆ ಬಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಒಟ್ಟು ೧೬ ಮಂದಿ ಪ್ರಯಾಣಿಕರಿದ್ದರು. ಬಸ್ ಕಂಡೆಕ್ಟರ್‌ನ ಲಾಗ್ ಲಿಸ್ಟ್‌ನಲ್ಲಿಯೂ ೧೬ ಮಂದಿಗೆ ಟಿಕೆಟ್ ನೀಡಿದ ದಾಖಲೆ ಇತ್ತು. ಆದರೆ ಬಸ್ಸನ್ನೇರಿದ ಟಿಕೆಟ್ ಪರೀಕ್ಷಕರು ಎಲ್ಲಾ ಪ್ರಯಾಣಿಕರಿಂದ ಪರಿಶೀಲನೆಗಾಗಿ ಟಿಕೆಟ್ ಕೇಳಿದಾಗ ಕೋಡಿಂಬಾಳದ ನಿವಾಸಿಗಳಾದ ವೃದ್ಧ ದಂಪತಿಯ ಕೈಯಲ್ಲಿ ಟಿಕೆಟ್ ಇರಲಿಲ್ಲ. ಟಿಕೆಟ್ ಪಡೆದಿದ್ದೇವೆ ಎಂದು ದಂಪತಿ ಹೇಳಿದರೂ, ಟಿಕೆಟ್ ನೀಡಿದ್ದೇನೆಂದೂ ಕಂಡೆಕ್ಟರ್ ತಿಳಿಸಿದರೂ ಟಿಕೆಟ್ ಲಭಿಸದ ಕಾರಣ ದಂಡ ಶುಲ್ಕ ಪಾವತಿಸಬೇಕೆಂದು ಪರೀಕ್ಷಕರು ಸೂಚಿಸಿದ್ದರು.

ಅದರಂತೆ  ಕೈಯಲ್ಲಿದ್ದ ೩೫೦ ರೂಪಾಯಿ ಹಣವನ್ನು ವೃದ್ಧ ದಂಪತಿ ದಂಡವಾಗಿ ಪಾವತಿಸಿದ್ದರು.ಆದರೆ, ಉಪ್ಪಿನಂಗಡಿಯಿಂದ ಕೋಡಿಂಬಾಳಕ್ಕೆ ಹೋಗಲು ಹಣವಿಲ್ಲದೆ ಅವರು ಕಂಗಾಲಾಗಿದ್ದರು. ಈ ವೇಳೆ ಅವರ ಸಂಕಷ್ಟವನ್ನು ಕಂಡ ಕಡಬ ಪರಿಸರದ ವ್ಯಕ್ತಿಯೊಬ್ಬರು ಅವರನ್ನು ಊರಿಗೆ ಕಳುಹಿಸಲು ನೆರವಾಗಿದ್ದರು. ದಂಡವಾಗಿ ಸ್ವೀಕರಿಸಿದ ಮೊತ್ತಕ್ಕೆ ಪರೀಕ್ಷಕರು ಯಾವುದೇ ರಶೀದಿ ನೀಡದೇ ಹೋಗಿದ್ದಾರೆಂದು ಪ್ರಕರಣದ ಪ್ರತ್ಯಕ್ಷದರ್ಶಿಗಳು ಪತ್ರಿಕೆಗೆ ತಿಳಿಸಿದ್ದರಲ್ಲದೆ ಇಲಾಖೆಯ ಮೇಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ಒತ್ತಾಯಿಸಿದ್ದರು. ಈ ಘಟನೆಯ ಬಗ್ಗೆ ‘ಸುದ್ದಿ ಬಿಡುಗಡೆ’ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಈ ವರದಿಯನ್ನು ಫೇಸ್ ಬುಕ್ ನಲ್ಲಿ ಹಾಕಿದ್ದ ಉಪ್ಪಿನಂಗಡಿ ಶ್ರೀರಾಮ ಶಾಲೆಯ ಸಂಚಾಲಕರಾಗಿರುವ 34 ನೆಕ್ಕಿಲಾಡಿಯ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಜಿ.ರಾಧಾರವರು ವೃದ್ಧ ದಂಪತಿಗೆ ನ್ಯಾಯ ಒದಗಿಸುವಂತೆ ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಯು.ಜಿ.ರಾಧಾರವರ ಫೇಸ್ಬುಕ್ ಪೋಸ್ಟ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಅಲ್ಲದೆ ಪ್ರಕರಣದ ಬಗ್ಗೆ ರಾಧಾರವರು ಟ್ವೀಟ್ ಮಾಡಿದ್ದರು. ಆದರೂ ಸಂಬಂಧಿಸಿದವರಿಂದ ಸ್ಪಂದನ ದೊರಕಿರಲಿಲ್ಲ.

ಬಳಿಕ ಯು.ಜಿ.ರಾಧಾರವರು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ವಾಟ್ಸಪ್ ಸಂದೇಶ ಕಳುಹಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು. ಕೂಡಲೇ ಪ್ರತಿಕ್ರಿಯೆ ನೀಡಿದ ಸಚಿವರು ಘಟನೆಯ ಬಗ್ಗೆ ತನಿಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.