ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಧರ್ಣಪ್ಪ ಗೌಡ ಇಡ್ಯಾಡಿಯವರಿಗೆ ಶ್ರದ್ದಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಇತ್ತೀಚೆಗೆ ನಿಧನರಾದ ಸಂಘದ ಜಿಲ್ಲಾ ಉಪಾಧ್ಯಕ್ಷ ಧರ್ಣಪ್ಪ ಗೌಡ ಇಡ್ಯಾಡಿಯವರಿಗೆ ಶ್ರದ್ದಾಂಜಲಿ ಸಭೆಯು ಅ.12ರಂದು ಎಂ.ಟಿ ರಸ್ತೆಯ ಎಸ್.ಕೆ.ಎ.ಸಿ.ಎಂ.ಎಸ್ ಕಟ್ಟಡದಲ್ಲಿರುವ ಸಂಘದ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ನಡೆಯಿತು.

ನುಡಿ ನಮನ ಸಲ್ಲಿಸಿದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಮಾತನಾಡಿ, ಉತ್ತಮ ಸಂಘಟಕರಾಗಿ ಹೋರಾಟದ ಮೂಲಕ ಬಂದಿರುವ ದರ್ಣಪ್ಪ ಗೌಡರವರು ರೈತ ಪರವಾದ ಯಾವುದೇ ಹೋರಾಟದಲ್ಲಿಯೂ ಮುಂಚೂಣಿಯಲ್ಲಿದ್ದರು. ರೈತ ಪರವಾದ ಹೋರಾಟಗಳನ್ನು ಬಹಳಷ್ಟು ತೀವ್ರ ರೂಪದಲ್ಲಿ ನಡೆಸುತ್ತಿದ್ದರು. ರೈತ ಪರವಾದ ಹೋರಾಟಗಳನ್ನು ಇನ್ನಷ್ಟು ತೀವ್ರಗೊಳಿಸುವ ಮುಖಾಂತರ ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಬೇಕು ಎಂದ ಅವರು ರೈತ ವಿರೋಧಿ ನೀತಿಗಳನ್ನು ಜಾರಿಗೊಳಿಸಿ, ನಮ್ಮ ಸ್ವಾಭಿಮಾನದ ಬದುಕಿಗೆ ದಕ್ಕೆ ತರುವ ನೀತಿಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದರು.

ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ಕುಪ್ಪೆಪದವು ಮಾತನಾಡಿ, ರೈತಪರವಾದ ಹೋರಾಟದ ಮುಂಚೂಣಿಯಲ್ಲಿದ್ದ ಧರ್ಣಪ್ಪ ಗೌಡರವರು ಎದುರಾಳಿಗಳ ಯಾವುದೇ ಶಕ್ತಿಗೂ ಮಣಿಯುತ್ತಿರಲಿಲ್ಲ. ಕುಮಾರಾಧಾರ ಆಣೆಕಟ್ಟಿನ ವಿರುದ್ಧದ ಹೋರಾಟದಲ್ಲಿ ಆ ಪ್ರದೇಶದ ಜನರನ್ನು ಒಟ್ಟು ಸೇರಿಸಿ ನಡೆಸಿದ ಹೋರಾಟದಲ್ಲಿ ಅವರನ್ನು ಹಿಮ್ಮೆಟ್ಟಿಸುವಲ್ಲಿ ಸಫಲರಾಗಿದ್ದರು. ಇಂತಹ ಮಹಾನ್ ಹೋರಾಟಗಾರನ ಸ್ಮರಣಾರ್ಥವಾಗಿ ರೈತ ಪರವಾದ ಇನ್ನೊಂದು ಹೋರಾಟ ನಡೆಯಬೇಕು, ಅವರ ಹೆಸರು ಡೀ ಜಿಲ್ಲೆಗೆ ತಿಳಿಸುವ ಕೆಲಸವಾಗಬೇಕು ಎಂದರು.

ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಪುಣಚ ಮಾತನಾಡಿ, ಕಾರ್ಯಕರ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟು ಸೇರಿಸಿ, ಹೋರಾಟವನ್ನು ಯಶಸ್ವೀಗೊಳಿಸುವಲ್ಲಿ ಧರ್ಣಪ್ಪ ಗೌಡರವರೇ ಉತ್ತಮ ನಿದರ್ಶನ. ಸಂಘಟನೆಯಲ್ಲಿ ಅವರ ಪಾತ್ರ ಮಹತ್ತರವಾಗಿತ್ತು. ಹೋರಾಟವನ್ನು ಯಶಸ್ವಿಗೊಳಿಸುವ ಮೂಲಕ ವಿಜಯ ಪತಾಕೆಯನ್ನು ಹಾರಿಸುತ್ತಿದ್ದರು ಎಂದರು.

ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಮಾತನಾಡಿ, ಇಡ್ಯಾಡಿ ಕುಟುಂಬದಲ್ಲಿ ಹುಟ್ಟಿ ಬೆಳೆದ ಧರ್ಣಪ್ಪ ಗೌಡರವರ ಹೋರಾಟಗಳು ಪರಿಣಾಮಕಾರಿಯಾಗಿದ್ದವು. ತಮ್ಮ ಹೋರಾಟದಲ್ಲಿ ತಾರ್ಕಿಕವಾದ ಅಂತ್ಯವನ್ನು ಕಾಣುತ್ತಿದ್ದರು. ಯಾವುದೇ ಬೆದರಿಕೆಗಳಿಗೆ ಮಣಿಯದೇ ಎದುರಿಸಿ ಗೆದ್ದವರು. ರೈತರು ರಾಜಕೀಯ ಬಿಟ್ಟು ಹೋರಾಟ ಮಾಡಿದಾಗ ಅಗಲಿದ ಚೇತನಗಳ ಕನಸು ನನಸಾಗಲು ಸಾಧ್ಯ ಎಂದರು.
ಕಡಬ ತಾಲೂಕು ಅಧ್ಯಕ್ಷ ವಿಕ್ಟರ್ ಹಾಗೂ ಜಿಲ್ಲಾ ಕಾರ್ಯದರ್ಶಿ ಈಶ್ವರ ಭಟ್ ಬಡಿಲ ಮಾತನಾಡಿ ನುಡಿ ನಮನ ಸಲ್ಲಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ ಸವಣೂರು, ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಪುಚ್ಚೆತ್ತಡ್ಕ, ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರ್, ತಾಲೂಕು ಉಪಾಧ್ಯಕ್ಷ ಜಯಪ್ರಕಾಶ್ ರೈ ನೂಜಿಬೈಲು, ಕಡಬ ತಾಲೂಕು ಕಾರ್ಯದರ್ಶಿ ರಾಧಾಕೃಷ್ಣ ಗೌಡ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಕೇಶವ ಪೂಜಾರಿ, ಬಂಟ್ವಾಳ ತಾಲೂಕು ಅಧ್ಯಕ್ಷ ಎನ್.ಕೆ ಇದಿನಬ್ಬ, ಕುಂಬ್ರ ವಲಯಾಧ್ಯಕ್ಷ ಶೇಖರ ರೈ ಕುರಿಕ್ಕಾರ, ಮೋನಪ್ಪ ಗೌಡ ಕುಂಟ್ಯಾಣ, ವಿಶ್ವನಾಥ ಪೂಜಾರಿ ಕುಂತೂರು ಕೋಡ್ಲ, ದಾಮೋದರ ಗೌಡ ಬರೆ, ಕೃಷ್ಣಪ್ಪ ಗೌಡ, ವಿಡ್ಲ ಮುಡ್ನೂರು, ನೇವಿಲ್ ಮೊರಾಸ್ ಬೆಳ್ತಂಡಿ, ಆನಂದ ಶೆಟ್ಟಿ ನೆಕ್ರಾಜೆ, ಶಿವಚಂದ ಪಡುವನ್ನೂರು, ಗಣೇಶ ಕುದ್ಮಾರು, ರಾಧಾಕೃಷ್ಣ ಕಾಣಿಯೂರು, ಬಾಳಪ್ಪ ಗೌಡ ಆಲಂತಡ್ಕ, ಸಿಲಾ ಮೋಂತೆರೋ ಪುಣಚ, ಇಸುಬು ಹಿರೇಬಂಡಾಡಿ, ಕುಶ ಕುಮಾರ್ ಕುದ್ಮಾರ್, ಇಸುಬು ಪುಣಚ, ಈಶ್ವರ ಗೌಡ ಪಾಲೆಚ್ಚಾರು, ಹರ್ಷ ಕುಮಾರ್ ಜೈನ್, ಸಂಜೀವ ಕುಲಾಲ್ ರಾಮಕುಂಜ, ಕಚೇರಿ ಸಿಬಂದಿ ಸ್ವಪ್ನ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.