HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಉತ್ತರ ಪ್ರದೇಶದದಲ್ಲಿ ದಲಿತ ಯುವತಿ ಅತ್ಯಾಚಾರ, ಕೊಲೆ ಖಂಡನೆ: ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕ ನೇತೃತ್ವದಲ್ಲಿ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿಯ ಮೇಲಿನ ಅತ್ಯಾಚಾರ, ಕೊಲೆ ಖಂಡಿಸಿ ಪುತ್ತೂರು ಮತ್ತು ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ನೇತೃತ್ವದಲ್ಲಿ ಪುತ್ತೂರು ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಕಾರರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಬಿಜೆಪಿಗೆ ತಪ್ಪಿನ ಅರಿವು ಆಗುವ ತನಕ ಹೋರಾಟ ನಿಲ್ಲದು
ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಮಾತನಾಡಿ ದಲಿತ ಯುವತಿಯ ಅತ್ಯಾಚಾರ ಮಾಡಿ ಕೊಲೆ ನಡೆಸಿದ ಆರೋಪಿ ನರಹಂತಕರನ್ನು ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿ ಗಲ್ಲು ಶಿಕ್ಷೆ ವಿಧಿಸಬೇಕು. ಉತ್ತರ ಪ್ರದೇಶದ ಮುಖ್ಯಮಂತ್ರಿ ರಾಜಿನಾಮೆ ಕೊಡಬೇಕು. ಒಟ್ಟು ಬಿಜೆಪಿಗೆ ತನ್ನ ತಪ್ಪಿನ ಅರಿವು ಆಗುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು. ಓಟು ಆಗುವ ತನಕ ಮಾತ್ರ ದಲಿತರ ಮೇಲೆ ಬಿಜೆಪಿಯವರಿಗೆ ಅನುಕಂಪ. ಓಟು ಮುಗಿದ ಬಳಿಕ ಮೇಲ್ವವರ್ಗ, ಕೆಳವರ್ಗ ಅಸ್ಪ್ರಶ್ಯ ಹುಟ್ಟಿಕೊಂಡು ಜಾತಿ, ಜಾತಿಯ ಮೇಲೆ ವಿಭಜನೆ ಮಾಡಿ ವಿಷ ಬೀಜ ಬಿತ್ತುವ ಹುನ್ನಾರ ಮಾಡುವ ಬಿಜೆಪಿ ಸರಕಾರದ ವಿರುದ್ಧ ನಮ್ಮ ಹೋರಾಟ. ಈ ಹೋರಾಟ ಇವತ್ತು ಜಿಲ್ಲೆಯಾದ್ಯಂತ ನಡೆಸುತ್ತಿದ್ದೇವೆ ಎಂದ ಅವರು ಕಾಂಗ್ರೆಸ್ ಕೇವಲ ಅಧಿಕಾರಕ್ಕಾಗಿ ಮಾತ್ರವಲ್ಲ. ಅನ್ಯಾಯದ ವಿರುದ್ಧ ಈ ಹಿಂದೆ ಮತ್ತು ಹೋರಾಟ ಮಾಡಿದೆ. ಮುಂದೆಯೂ ಹೋರಾಟ ಮಾಡಲಿದೆ. ಬ್ರಿಟೀಷರೊಂದಿಗೆ ಹೊರಾಟ ಮಾಡಿ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟ ಪಕ್ಷ ಕಾಂಗ್‌ಸ್. ಹಾಗಾಗಿ ನಮಗೆ ಹೋರಾಟ ಮಾಡಲು ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ. ಬಿಜೆಪಿಯೋಂದಿಗೆ ಹೋರಾಟ ಮಾಡುವುದು ನಮಗೆ ಲೆಕ್ಕವೇ ಅಲ್ಲ ಎಂದು ಹೇಳಿದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಬದುಕು ಕಷ್ಟವಾಗುತ್ತಿದೆ. ಇಂದು ಉತ್ತರ ಪ್ರದೇಶದಲ್ಲಿ ನಡೆದ ಘಟನೆ ನಾಳೆ ನಮ್ಮಲ್ಲಿಯೂ ನಡೆಯಬಹುದಾದ ಅಪಾಯವಿದೆ. ಈ ಕುರಿತು ಎಚ್ಚರಿಕೆಯ ಅಗತ್ಯವಿದೆ. ಹೆಣ್ಣು ಮಕ್ಕಳ ಬೆಲೆ ತಿಳಿಯುವುದು ಕುಟುಂಬ ಮೌಲ್ಯವನ್ನು ಅರಿತವರಿಗೆ ಮಾತ್ರ ಆದರೆ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಂತಹ ಮೌಲ್ಯಗಳ ಅರಿವಿಲ್ಲ. ಅವರಿಂದ ಹೆಣ್ಣು ಮಕ್ಕಳ ರಕ್ಷಣೆಯ ನಿರೀಕ್ಷೆ ಸಾಧ್ಯವಿಲ್ಲ ಎಂದರು.

ಪ್ರಧಾನಿ ಮೋದಿಯವರಿಗೆ ಸ್ಪಲ್ಪವಾದರೂ ಮಹಿಳಾ ಕಾಳಜಿ ಇದ್ದಲ್ಲಿ ಅತ್ಯಾಚಾರ ಪ್ರಕರಣಕ್ಕೆ ಕಠಿಣ ಕಾನೂನು ಜಾರಿಗೊಳಿಸಬೇಕು. ಅತ್ಯಾಚಾರಿಗಳಿಗೆ ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.  ಕೆಪಿಸಿಸಿ ಸದಸ್ಯ ಎಂ.ಎಸ್. ಮಹಮ್ಮದ್ ಮಾತನಾಡಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಯೋಗಿ ಎಂಬ ಹೆಸರನ್ನು ಇಟ್ಟುಕೊಂಡು ಯೋಗಿ ಸಮುದಾಯಕ್ಕೆ ಅವಮಾನ ಮಾಡುತ್ತಿದ್ದಾರೆ. ಹತ್ರಾಸ್ ಘಟನೆಯು ಸಂವಿಧಾನಕ್ಕೆ ಮಾಡಿರುವ ಅಪಮಾನವಾಗಿದೆ. ದಲಿತ ಶಕ್ತಿಯು ಎಚ್ಚೆತ್ತುಕೊಂಡಿದ್ದು ಇದು ಮುಂದಿನ ದಿನಗಳಲ್ಲಿ ಬಿಜೆಪಿಗೆ ಮುಳುವಾಗಲಿದೆ ಎಂದರು.

ಪ್ರತಿಭಟನಾ ಸಭೆಯಲ್ಲಿ ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಗಿರಿಧರ ನಾಯ್ಕ್, ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು, ವಿಟ್ಲ-ಉಪ್ಪಿನಂಗಡಿ ಕಾಂಗ್ರೆಸ್ ಎಸ್‌ಸಿ ಘಟಕದ ಮುಖಂಡ ಸೇಸಪ್ಪ ನೆಕ್ಕಿಲು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಕೆಪಿಸಿಸಿ ಸದಸ್ಯ ಡಾ. ರಘು, ಗಣೇಶ್ ಪೂಜಾರಿ, ಬಾಲಚಂದ್ರ ಕೃಷ್ಣಾಪುರ ಮತ್ತಿತರರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ ಆಳ್ವ ಪ್ರತಿಭಟನಾ ಮನವಿಯನ್ನು ಮಂಡಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಸೋಮನಾಥ ಉಪ್ಪಿನಂಗಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ಮಾಜಿ ಅಧ್ಯಕ್ಷ ಮೊಯ್ದೀನ್ ಅರ್ಶದ್ ದರ್ಬೆ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ಅಧ್ಯಕ್ಷ ರಾಜು ಹೊಸ್ಮಠ, ಪುಡಾದ ಮಾಜಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಶೇಖರ್ ಕುಕ್ಕೆಟ್ಟಿ, ಡಾ. ರಾಜಾರಾಂ, ಭಾಸ್ಕರ ಗೌಡ ಇಚ್ಲಂಪಾಡಿ, ಚಂದ್ರಹಾಸ ರೈ ಬೋಳೋಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಉಷಾ ಅಂಚನ್, ಪಿಪಿ ವರ್ಗೀಸ್, ರಾಮ ಪಾಂಬಾರು, ಅಮಳ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.


ತನ್ನ ವಿರುದ್ಧ ದೂರು ಕೊಟ್ಟವರಿಗೆ ಮಿಥುನ್ ರೈ ಸವಾಲು
ಯೋಗಿ ಆದಿತ್ಯನಾಥ ಅವರು ತಾನು ತೊಟ್ಟಿರುವ ಕಾವಿಗೆ ನಿಜವಾದ ಬೆಲೆ ಕೊಡುವುದಾದರೆ ಅವರು ರಾಜಕೀಯಕ್ಕೆ ನಿವೃತ್ತಿ ಕೊಟ್ಟು ಮಠಕ್ಕೆ ಸೇರಬೇಕು. ಈ ಮಿಥುನ್ ರೈ ಸಾಯುವ ತನಕ ಪ್ರತಿ ತಿಂಗಳು ಅವರ ಪಾದಸ್ಪರ್ಶ ಮಾಡುತ್ತಾನೆ. ಅವರ ಯಾವ ಮಠಕ್ಕೆ ಸೇರುತ್ತಾರೋ ಅಲ್ಲಿಗೆ ಹೋಗಿ ಪಾದಸ್ಪರ್ಶ ಮಾಡುತ್ತೇನೆ. ಆದರೆ ಯೋಗಿ ಆದಿತ್ಯನಾಥ ಅವರ ನಾಥ ಪರಂಪರೆಯ ವಿರುದ್ಧ ಆಗಲಿ ಜೋಗಿ ಜನಾಂಗದ ವಿರುದ್ಧ ಆಗಲಿ ಮಿಥನ್ ರೈ ಮಾತನಾಡಿಲ್ಲ. ಪುತ್ತೂರಿನ ಯುವಮೋರ್ಚದ ನನ್ನ ಮಿತ್ರರು ನನ್ನ ವಿರುದ್ದ ದೂರು ನೀಡುವ ಮೂಲಕ ಒಂದು ಸಮುದಾಯವನ್ನು ಎತ್ತಿ ಕಟ್ಟುವ ಹುನ್ನಾರ ಮಾಡಿದ್ದಾರೆ. ನನ್ನ ವಿರುದ್ಧ ಅಪಪ್ರಚಾರ ಮಾಡಿದವರು ಒಂದು ಸಾಕ್ಷಿ ತಂದು ಕೊಟ್ಟರೆ ನಾನು ರಾಜಕೀಯ ನಿವೃತ್ತಿ ಮಾತ್ರವಲ್ಲ ಇಲ್ಲಿಯೇ ಪ್ರಾಣ ಕೊಡಲು ಸಿದ್ದನಿದ್ದೇನೆ. ಈ ಕುರಿತು ದೂರು ಕೊಟ್ಟವರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಮಾಣಕ್ಕೆ ಸಿದ್ಧರಾಗಬೇಕು. ನಾನಿವತ್ತು ಪೂರ್ತಿ ದಿನ ಪುತ್ತೂರಿನಲ್ಲಿದ್ದೇನೆ. ಮಿಥುನ್ ರೈ ಪ್ರತಿಭಟನೆಯಲ್ಲಿ ಮಾತನಾಡಿದ್ದು ಬಿಜೆಪಿಯ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಆದಿತ್ಯನಾಥರ ವಿರುದ್ಧ. ಸಮುದಾಯದ ವಿರುದ್ಧವಲ್ಲ. ನನ್ನ ಹೋರಾಟವನ್ನು ಕುಂದಿಸುವ ಬಿಜೆಪಿಗೆ ಯಾವತ್ತೂ ಸಾಧ್ಯವಿಲ್ಲ. ಆದರೆ ನಾನು ದೇವಸ್ಥಾನಕ್ಕೆ ಹೋಗದಿದ್ದರೆ ನನ್ನ ತಾಯಿಯ ಕಾಲು ಹಿಡಿಯದೇ ಒಂದು ದಿನ ನೀರು ಕೊಡಿರಲಿಕ್ಕಿಲ್ಲ. ಇವತ್ತು ನನ್ನ ಹೋರಾಟ ದಲಿತ ಯುವತಿಯ ಪರವಾಗಿ. ನಾನು ಜೋಗಿ ಜನಾಂಗ ಮತ್ತು ನಾಥ ಪರಂಪರೆಯ ವಿರುದ್ಧ ಮಾತನಾಡಿದ್ದೇ ಆಗಿದ್ದರೆ ನನ್ನ ತಲೆ ಇದೆ ನಿಮ್ಮ ಖಡ್ಗವಿದೆ. ನಾನು ಎಲ್ಲಿ ಬೇಕಾದರೂ ತಲೆ ತಗ್ಗಿಸಿ ನಿಲ್ಲುತ್ತೇನೆ. ನಿಮ್ಮ ಯಾವ ಶಿಕ್ಷೆಗೂ ನಾನು ಸಿದ್ಧ. ಬಿಜೆಪಿ ಯವರು ನನ್ನ ಸವಾಲವನ್ನು ಸ್ವೀಕಾರ ಮಾಡಬೇಕು.
–  ಮಿಥುನ್ ರೈ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.