HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪುತ್ತೂರಿನಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ 100 ಎಕರೆ ಜಮೀನು ಪೇಸ್‌ನ ನೂತನ ಪದಾಧಿಕಾರಿಗಳ ಪದಗ್ರಹಣದಲ್ಲಿ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೈಗಾರಿಕೆಗಳಿಗೆ ಉತ್ತೇಜನ ನೀಡಿ, ಯುವಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಪುತ್ತೂರಿನಲ್ಲಿ ಕೈಗಾರಿಕೆಗಳ ಸ್ಥಾಪನೆಗೆ 100 ಎಕರೆ ಜಮೀನು ಗುರುತಿಸಲಾಗಿದೆ. ಕೈಗಾರಿಕೆಗಳಿಗೆ 24×7 ವಿದ್ಯುತ್, ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು. ಇದರ ಕುರಿತು ಕೈಗಾರಿಕಾ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದ ಶಾಸಕ ಸಂಜೀವ ಮಠಂದೂರು ಹೇಳಿದರು.


ಮನೀಷಾ ಬಿಲ್ಡಿಂಗ್ ನಲ್ಲಿರುವ ರೋಟರಿ ಸೂರ್ಯ ಹಾಲ್‌ನಲ್ಲಿ ಅ.11ರಂದು ಸಂಜೆ ನಡೆದ ಪುತ್ತೂರು ಅಸೋಸಿಯೇಷನ್ ಆಪ್ ಸಿವಿಲ್ ಇಂಜಿನಿಯರ್ಸ್‌ನ 2020-21ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಪುತ್ತೂರನ್ನು ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲೆಯನ್ನಾಗಿ ಮಾಡುವ ಪ್ರಯತ್ನದಲ್ಲಿದೆ. ಇದಕ್ಕೆ ಪೂರಕವಾಗಿ ಪ್ರಾರಂಭದಲ್ಲಿ ಎಸ್.ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಕ್ಕ ಜಮೀನು ಗುರುತಿಸಲಾಗಿದ್ದು ಪಹಣಿ ಪತ್ರದ ಹಂತದಲ್ಲಿದೆ.

ಅಂಚೆ ಇಲಾಖೆ, ಕೆಎಸ್‌ಆರ್‌ಟಿಸಿ, ತೋಟಗಾರಿಕೆ, ಕೃಷಿ ಇಲಾಖೆಗಳು ಈಗಾಗಲೇ ಪುತ್ತೂರನ್ನು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಸೀಫುಡ್ ಪಾರ್ಕ್‌ಗೆ ಸೇಡಿಯಾಪುನಲ್ಲಿ 44 ಎಕರೆ ಜಮೀನು ಗುರುತಿಸಲಾಗಿದೆ. ಪ್ರವಾಸೋಧ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರೊಂದಿಗೆ ಈಗಾಗಲೇ ಚರ್ಚಿಸಲಾಗಿದ್ದು ಟೆಂಪಲ್ ಟೂರಿಸಂ, ಬಿರುಮಲೆ ಬೆಟ್ಟದಲ್ಲಿ ಮಕ್ಕಳ ರೈಲು, ಬಾಲವನಕ್ಕೆ ರೋಪ್ ವೇ, ಬೆಂದ್ರ್‌ತೀರ್ಥದ ಅಭಿವೃದ್ಧಿ, ಬಾಲವನದಲ್ಲಿ ಶಿವರಾಮ ಕಾರಂತರ ಮ್ಯೂಸಿಯಂಗಳನ್ನು ನಿರ್ಮಿಸುವ ಯೋಜನೆಗಳಿವೆ ಎಂದು ಶಾಸಕರು ಹೇಳಿದರು.

ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನದ ಸಂಚಾಲಕ ವೇ. ಮೂ ಮಿತ್ತೂರು ತಿರುಮಲೇಶ್ವರ ಭಟ್ ಮಾತನಾಡಿ, ಸಿವಿಲ್ ಇಂಜಿನಿಯರ್‌ಗಳು ವಾಸ್ತು ಶಿಲ್ಪವನ್ನು ಬಲ್ಲವರು. ವಾಸ್ತು ಯೋಗ್ಯವಾದ ಮನೆ ನಿರ್ಮಿಸುವ ಮೂಲಕ ಮಾಲಕನ ಆಶಯವನ್ನು ಈಡೇರಿಸುವವರು ಇಂಜಿನಿಯರ್. ತಮ್ಮ ಉತ್ತಮ ಸೇವೆ ಮೂಲಕ ಲೋಕ ಕ್ಷೇಮವಾಗಲಿದೆ ಎಂದರು.
ಅಸೋಸಿಯೇಷನ್‌ನ ಗೌರವಾಧ್ಯಕ್ಷ ಮಾಸ್ಟರ್ ಪ್ಲಾನರಿಯ ಎಸ್. ಕೆ ಆನಂದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನರಿಗೆ ಕಟ್ಟಡ ಕಟ್ಟುವುದಕ್ಕಿಂತ ಅನುಮತಿ ಪಡೆಯುವುದೇ ಸವಾಲು. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಎಸೋಸಿಯೇಶನ್ ಪ್ರಯತ್ನಿಸಬೇಕು ಎಂದರು. ನೂತನ ಪದಾಧಿಕಾರಿಗಳು ಸಂಸ್ಥೆಯ ಘನತೆಯನ್ನು ಎತ್ತಿತೋರಿಸಿ ಯಶಸ್ವಿ ಸಂಸ್ಥೆಯನ್ನಾಗಿ ಬೆಳೆಯಬೇಕು. ತನ್ನಲ್ಲಿರುವ ಶಕ್ತಿ, ಸಾಮರ್ಥ್ಯವನ್ನು ಅರಿತು  ಕೆಲಸ ಮಾಡಬೇಕು. ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು ಎಂದರು.


ನಿರ್ಗಮಿತ ಅಧ್ಯಕ್ಷ ಹರೀಶ್ ಪುತ್ತೂರಾಯ ಮಾತನಾಡಿ, 14 ವರ್ಷಗಳ ಹಿಂದೆ ಆರಂಭವಾದ ಸಂಸ್ಥೆ ಹದಿಹರೆಯಕ್ಕೆ ಬಂದಿದೆ. ಹಿರಿಯರ ಆಶಯದಂತೆ ಈ ವರ್ಷ ನೋಂದಾಯಿತ ಸಂಸ್ಥೆಯಾಗಿ ಬದಲಾವಣೆಗೊಂಡಿದೆ. ಸಂಸ್ಥೆಯಿಂದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸ್ತನ್ಯಪಾನ್ಯ ಕಕ್ಷವನ್ನು ರೋಟರಿ ಪುತ್ತೂರು ಪೂರ್ವ ಸಹಕಾರದೊಂದಿಗೆ ಕೊಡುಗೆ ನೀಡಿದೆ. ಸದಸ್ಯರನ್ನು ಬೆಳೆಸುವುದರ ಜೊತೆಗೆ ಸಂಸ್ಥೆಯು ಬೆಳೆಯುತ್ತಾ ಸಾಗುತ್ತಿದೆ ಎಂದರು.

ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್, ಹರೀಶ್ ಪುತ್ತೂರಾರರವರ ಪತ್ನಿ ಗೀತಾ ಪುತ್ತೂರಾಯ, ನೂತನ ಅಧ್ಯಕ್ಷ ರಮೇಶ್ ಭಟ್‌ ಎಂ.ಹೆಚ್. ರವರ ಪತ್ನಿ ಅಂಬಿಕಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪದಗ್ರಹಣ:
ನಿರ್ಗಮಿತ ಅಧ್ಯಕ್ಷ ಹರೀಶ್ ಪುತ್ತೂರಾಯ ನೂತನ ಅಧ್ಯಕ್ಷ ರಮೇಶ್ ಭಟ್‌ ಎಂ.ಹೆಚ್. ರವರಿಗೆ ಕಚೇರಿ ಕೀಲಿ ಕೈ ಹಾಗೂ ದಾಖಲೆಗಳನ್ನು ಹಸ್ತಾಂತರಿಸುವ ಮೂಲಕ ಪದಗ್ರಹಣ ನಡೆಸಲಾಯಿತು. ಕಾರ್ಯದರ್ಶಿ ಸತ್ಯಗಣೇಶ್, ಉಪಾಧ್ಯಕ್ಷ ರಾಘವೇಂದ್ರ ಭಟ್, ಖಜಾಂಚಿ ಜಯಪ್ರಕಾಶ್, ಜತೆ ಕಾರ್ಯದರ್ಶಿ ರವೀಶ್, ನಿರ್ದೇಶಕರಾದ ಶಿವರಾಮ ಎಂ.ಎಸ್., ಪ್ರವೀಣ ಆಚಾರ್ಯ, ಶಿವಪ್ರಸಾದ ಟಿ., ಶ್ರೀನಿಧಿ ಕೆ., ರಾಜಶೇಖರ, ಆಕಾಸ್ ಎಸ್.ಕೆ., ಆರ್.ರಾಮಪ್ರಕಾಶ್, ಶ್ರೀಕಾಂತ್ ಕೊಳತ್ತಾಯ ಉಪಸ್ಥಿತರಿದ್ದರು.

ನೂತನ ಸದಸ್ಯರ ಸೇರ್ಪಡೆ:
ಅಸೋಸಿಯೇಷನ್ ಗೆ ನೂತನ ಸದಸ್ಯರನ್ನಾಗಿ ಜಯಪ್ರಕಾಶ್, ಕೀರ್ತನ್ ಹಾಗೂ ಜಯಗುರು ಆಚಾರ್ ರನ್ನು ಸೇರ್ಪಡೆಗೊಳಿಸಲಾಯಿತು.

ಸನ್ಮಾನ:
ಶಾಸಕ ಸಂಜೀವ ಮಠಂದೂರು, ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ ಸಂಪ್ರತಿಷ್ಠಾನದ ಸಂಚಾಲಕ ವೇ. ಮೂ ತಿರುಮಲೇಶ್ವರ ಭಟ್‌ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನೂತನ ಅಧ್ಯಕ್ಷ ರಮೇಶ್ ಭಟ್‌ ಎಂ.ಹೆಚ್  ರವರು ವೃತ್ತಿ ಗುರು ಕೆ.ಎಚ್ ಅಬ್ದುಲ್ಲಾ, ವಿದ್ಯಾಗುರು ರವಿರಾಮ ಎಸ್‌ರವರನ್ನು ಅಭಿನಂದಿಸಿದರು. ಎಸೋಸಿಯೇಶನ್‌ನ  ಅಧ್ಯಕ್ಷರಾಗಿ ಯಶಸ್ವಿಯಾಗಿ ಮುನ್ನಡೆಸಿದ ಮಾಜಿ ಅಧ್ಯಕ್ಷರುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಒಂದು ವರ್ಷದ ಅವಧಿಯಲ್ಲಿ ತನ್ನೊಂದಿಗೆ ಸಹಕರಿಸಿದ ಎಸೋಸಿಯೇಶನ್‌ನ ಎಲ್ಲಾ ಪದಾಧಿಕಾರಿಗಳನ್ನು ನಿರ್ಗಮಿತ ಅಧ್ಯಕ್ಷ ಹರೀಶ್ ಪುತ್ತೂರಾಯ ಗೌರವಿಸಿದರು.

ಶ್ಯಾಮ ಕುಮಾರ್ ಎಂ.ಹೆಚ್ ಹಾಗೂ ಆದಿತ್ಯ ಪುತ್ತೂರಾಯ ಪ್ರಾರ್ಥಿಸಿದರು. ಅಧ್ಯಕ್ಷ  ಹರೀಶ್ ಪುತ್ತೂರಾಯ ಸ್ವಾಗತಿಸಿದರು. ಇಡ್ಕಿದು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮಿತ್ತೂರು, ಪ್ರತಿಷ್ಠಾನದ ಅಧ್ಯಕ್ಷ ಬೈಪದವು ರಮೇಶ್ ಭಟ್‌ರವರು ಮಾತನಾಡಿ ನೂತನ ಅಧ್ಯಕ್ಷರಿಗೆ ಹಾಗೂ ಪದಾಧಿಕಾರಿಗಳಿಗೆ ಶುಭಾಶಯ ಕೋರಿದರು. ಕಾರ್ಯದರ್ಶಿ ದಿನೇಶ್ ವಿ. ಭಟ್ ವರದಿ ವಾಚಿಸಿದರು. ಸತ್ಯನಾರಾಯಣ ಭಟ್ ಅತಿಥಿಗಳ ಪರಿಚಯ ಮಾಡಿದರು. ನೂತನ ಕಾರ್ಯದರ್ಶಿ ಸತ್ಯಗಣೇಶ್ ವಂದಿಸಿದರು. ಮಾಜಿ ಅಧ್ಯಕ್ಷರಾದ ರವಿರಾಮ ಎಸ್. ಹಾಗೂ ಜತೆ ಕಾರ್ಯದರ್ಶಿ ರವೀಶ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಗಣ್ಯರು ಆಗಮಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಿತು.

ಪೇಸ್ ಜನಾನುರಾಗಿಯಾಗಿ ಗುರುತಿಸಿಕೊಂಡಿದೆ: ರಮೇಶ್ ಭಟ್ ಎಂ.ಹೆಚ್
ನೂತನ ಅಧ್ಯಕ್ಷ ರಮೇಶ್ ಭಟ್ ಎಂ.ಹೆಚ್. ರವರು ಮಾತನಾಡಿ, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಸಿವಿಲ್ ಇಂಜಿನಿಯರ‍್ಸ್ ಎಸೋಸಿಯೇಶನ್ ಜನಾನುರಾಗಿಯಾಗಿ ಗುರುತಿಸಿಕೊಂಡಿದೆ. ಈ ಸಂಸ್ಥೆಯ 15ನೇ ಅಧ್ಯಕ್ಷನಾಗಿ ನಾನು ಅಧಿಕಾರ ಸ್ವೀಕರಿಸಿದ್ದೇನೆ. ಮುಂದಿನ ನನ್ನ ಅವಧಿಯಲ್ಲಿ ಸಂಸ್ಥೆಯ ಮೂಲ ಆಶಯಗಳಿಗೆ ದಕ್ಕೆ ಬಾರದಂತೆ ಸೇವೆ ಸಲ್ಲಿಸುವುದಾಗಿ ಹೇಳಿದ ಅವರು ಮುಂದಿನ ದಿನಗಳಲ್ಲಿ ತನ್ನ ಅಧಿಕಾರವಧಿಯಲ್ಲಿ ಮಾಡಲಿರುವ ಯೋಜನೆ, ಯೋಚನೆಗಳ ಬಗ್ಗೆ ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ನಡೆಯಲಿರುವ ಎಲ್ಲಾ ಕಾರ್ಯಗಳಿಗೆ ತಾವೆಲ್ಲರೂ ಸಹಕರಿಸುವಂತೆ ಅವರು ಮನವಿ ಮಾಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.