HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಸಂಕಷ್ಟದಲ್ಲಿದ್ದ ತೆಲಂಗಾಣ ನಿವಾಸಿಯನ್ನು ತಾಯ್ನಾಡಿಗೆ ಕಳುಹಿಸಲು ಸಹಕಾರಿಯಾದ ಕೆ.ಸಿ.ಎಫ್ ಸೌದೀ ಅರೇಬಿಯಾದ ಖಮೀಸ್ ಮುಶೈತ್ ಸಾಂತ್ವನ ತಂಡ

Puttur_Advt_NewsUnder_1
Puttur_Advt_NewsUnder_1
  • ಬನ್ನೂರಿನ ಅಬ್ದುಲ್ ರಝಾಕ್‌ರವರ ನೇತೃತ್ವದ ತಂಡದಿಂದ ಸತ್ಕಾರ್ಯ


ಪುತ್ತೂರು: ಸೌದೀ ಅರೇಬಿಯಾದ ಖಮೀಸ್ ಮುಶೈತ್ ಎಂಬಲ್ಲಿ ಕಳೆದ ಸುಮಾರು ಎರಡು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮೂಲತಃ ಹೈದರಾಬಾದ್ (ತೆಲಂಗಾಣ) ನಿವಾಸಿ ಶೇಖ್ ಮುಹಮ್ಮದ್ ಎಂಬವರನ್ನು ಕೆ.ಸಿ.ಎಫ್ ಸಾಂತ್ವನ ತಂಡದ ನಾಯಕರು ಸಂಪರ್ಕಿಸಿ, ಅವರಿಗೆ ಬೇಕಾಗಿರುವ ಎಲ್ಲಾ ರೀತಿಯ ಆರೋಗ್ಯ, ಸಲಹೆ, ಆರೈಕೆಯನ್ನು ಮಾಡಿ ಊರಿಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.

ಸಾಂತ್ವನ ಸೇವೆಗೆ ಕೆ.ಸಿ.ಎಫ್ ಖಮೀಸ್ ಮುಶೈತ್ ಸೆಕ್ಟರ್ ನಾಯಕರಾದ ಪುತ್ತೂರಿನ ಬನ್ನೂರು ನಿವಾಸಿ ಅಬ್ದುಲ್ ರಝಾಕ್ ಹಾಗೂ ಸಲ್ಮಾನ್ ಚಿಕ್ಕಮಗಳೂರು, ಖಾಲಿದ್ ಕಬಕ, ಇಕ್ಬಾಲ್ ಮದನಿ ಪಾವೂರು, ಕೆ.ಸಿ.ಎಫ್ ಮದೀನಾ ಸಾಂತ್ವನ ವಿಭಾಗದ ನಾಯಕರಾದ ಅಬ್ದುಲ್ ರಝಾಕ್ ಉಳ್ಳಾಲ್ ಮತ್ತು ತಂಡದವರು ಆಶಕ್ತ ವ್ಯಕ್ತಿಯಾಗಿದ್ದ ಶೇಖ್ ಮುಹಮ್ಮದ್ ರವರನ್ನು ಅ.10ರಂದು ಜಿದ್ದಾ ವಿಮಾನ ನಿಲ್ದಾಣ ಮೂಲಕ ಪ್ರತ್ಯೇಕ ಆಸನದ ಸೌಕರ್ಯ ಮಾಡಿ ತಾಯ್ನಾಡಿಗೆ ಕಳುಹಿಸುವುದರೊಂದಿಗೆ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಅನಿವಾಸಿ ಕನ್ನಡಿಗರ ಸಂಘಟನೆಯಾದ ಕೆ.ಸಿ.ಎಫ್ ನೇತೃತ್ವದಲ್ಲಿ ಕನ್ನಡಿಗರಲ್ಲದೆ ಇತರ ರಾಜ್ಯದ ಅನಿವಾಸಿಗರಿಗೂ ತನ್ನ ಸಾಂತ್ವನ ಸೇವೆಯ ಪುಷ್ಟಿಯನ್ನು ನೀಡುತ್ತಾ ಕೆ.ಸಿ.ಎಫ್‌ನ ಸಾಮಾಜಿಕ ಸೇವೆ ಯಾವುದೇ ಭೇದವಿಲ್ಲದೆ ಎಲ್ಲಾ ಕಾರ್ಯಕ್ಷೇತ್ರಗಳಿಗೆ ಮೀಸಲಿಟ್ಟಿದ್ದು ಹೆಮ್ಮೆಯ ವಿಚಾರ ಎಂದು ಕೆ.ಸಿ.ಎಫ್ ಖಮೀಸ್ ಮುಶೈತ್ ಸೆಕ್ಟರ್ ಅಧ್ಯಕ್ಷ ಅಬ್ದುಲ್ ರಝಾಕ್ ಬನ್ನೂರು ಅಭಿಪ್ರಾಯಪಟ್ಟಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.