HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

31 ವಾರ್ಡ್‌ಗಳಲ್ಲೂ ಸರ್ವಋತು ರಸ್ತೆಯ ಗುರಿ: ಬನ್ನೂರು ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮುಂದಿನ 25 ವರ್ಷ ರಸ್ತೆಗಾಗಿ ಯಾವುದೇ ಅರ್ಜಿ ಹಿಡಿದು ಶಾಸಕರ ಬಳಿಗೆ ಬಾರದ ಹಾಗೆ ನಗರಸಭೆಯ 31 ವಾರ್ಡ್‌ಗಳಲ್ಲೂ ಕಾಂಕ್ರೀಟ್ ರಸ್ತೆ ಮಾಡುವ ಮೂಲಕ ಸರ್ವಋತು ರಸ್ತೆ ಮಾಡಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಬನ್ನೂರು 6 ನೇ ವಾರ್ಡ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಬಳಿ ಹಾದುಹೋಗಿರುವ ಒಟ್ಟು ರೂ. ೫ಲಕ್ಷದಲ್ಲಿ ನಿರ್ಮಾಣ ಗೊಂಡ ಎರಡು ಕಾಂಕ್ರೀಟಿಕರಣ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು. ರೂ. 2 ಕೋಟಿಯ ಮುಖ್ಯಮಂತ್ರಿ ವಿಶೇಷ ಅನುದಾನ, ನಗರಸಭೆ ಸ್ವಂತ ನಿಧಿ, 14ನೇ ಹಣಕಾಸು, ನಗರೋತ್ಥಾನ ಮತ್ತು ಒಂದಷ್ಟು ರಾಜ್ಯ, ಕೇಂದ್ರ ಸರಕಾರದ ಅನುದಾನದಲ್ಲಿ ನಗರದೊಳಗೆ ಮೂಲಭೂತ ಸೌಕರ್ಯದ ಜೊತೆಗೆ ರಸ್ತೆಗೆ ಹೆಚ್ಚು ಒತ್ತು ಕೊಡಲಾಗಿದೆ. ನಗರಸಭೆಯ 31 ವಾರ್ಡ್‌ಗಳಲ್ಲೂ ನೂರಕ್ಕೆ ನೂರು ಕಾಂಕ್ರೀಟಿಕರಣ ರಸ್ತೆ ನಿರ್ಮಾಣ ಮಾಡಲಾಗುವುದು. ರಸ್ತೆ ಆದ ಬಳಿಕ ಅದನ್ನು ಬಳಕೆ ಮಾಡುವ ನಾಗರಿಕರು ಕೂಡಾ ಬಹಳ ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ರಸ್ತೆ ಬದಿಯ ಗಿಡಗಂಟಿಗಳ ತೆರವು ಕಾರ್ಯವನ್ನು ನಗರಸಭೆ ಮಾಡುವ ಮೂಲಕ ಸುಂದರ, ಸ್ವಚ್ಛತೆಯನ್ನು ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದರು. ನಗರಸಭೆ ಸ್ಥಳೀಯ ಸದಸ್ಯೆ ಮೋಹಿನಿ ವಿಶ್ವನಾಥ್ ಅತಿಥಿಗಳನ್ನು ಗೌರವಿಸಿದರು.


ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ಜೀವಂಧರ್ ಜೈನ್, ಗೌರಿ ಬನ್ನೂರು, ಭಾಮಿ ಅಶೋಕ್ ಶೆಣೈ, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಯುವರಾಜ್, ಜಯಶ್ರೀ ಎಸ್ ಶೆಟ್ಟಿ, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ರಾಮ್‌ದಾಸ್ ಹಾರಾಡಿ, ನಿವೃತ್ತ ಮೆಸ್ಕಾಂ ಇಂಜಿನಿಯರ್ ಶೇಷಪ್ಪ ಪೂಜಾರಿ, ಬಿಜೆಪಿ ಮುಖಂಡ ಆನಂದ ಕುಲಾಲ್, ಬಿಜೆಪಿ ವಾರ್ಡ್ ಅಧ್ಯಕ್ಷ ಗೋಪಾಲ ಪಡೀಲ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಗನ್ನಾಥ ರೈ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯಗುರು ರೂಪಕಲಾ, ಮನೋಹರ್ ರೈ ಆನೆಮಜಲು, ಉದ್ಯಮಿ ಶೇಖರ್ ಬಿರ್ವಾ, ಸಂಜೀವ ಪೂಜಾರಿ, ಮನೀಷ್ ಕುಲಾಲ್, ರತ್ನಾಕರ ರೈ ಕೆಳಗಿನಮನೆ, ಎ.ಎಸ್.ಐ ತಿಮ್ಮಯ್ಯ ಗೌಡ, ಲಕ್ಷ್ಮಣ ಆಚಾರ್ಯ, ನಾಗೇಶ್ ಆಚಾರ್ಯ, ಸುಂದರ ಗೌಡ, ಪ್ರಭಾ ಮತ್ತಿತರರು ಉಪಸ್ಥಿತರಿದ್ದರು. ನಗರಸಭಾ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ ಅವರು ಸ್ವಾಗತಿಸಿ, ವಂದಿಸಿದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.