ಸವಣೂರು ಸುಂದರ ರೈಯವರ ಅಳಿಯ ಹರಿಕೃಷ್ಣ ರೈಯವರಿಗೆ ಡಾಕ್ಟರೇಟ್ ಪದವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸವಣೂರಿನ ಹಿರಿಯ ಉದ್ಯಮಿ ಎನ್ ಸುಂದರ ರೈರವರ ಅಳಿಯ,  ಸುಳ್ಯ ಗಾಂಧಿನಗರದ ನಿವೃತ್ತ ಉಪ ವಲಯಾರಣ್ಯಾಧಿಕಾರಿ ಕೆ. ನಾರಾಯಣ ರೈ ಹಾಗೂ ದಿ. ಕಮಲ ರೈಯವರ ಪುತ್ರ ಹರಿಕೃಷ್ಣ ರೈ ಯವರು Investigation of Feature Descriptors applicable to Medical Images for Effective Content Based Image Retrieval ಎಂಬ ವಿಷಯದಲ್ಲಿ ದೇಶದ ಪ್ರತಿಷ್ಟಿತ N.I.T- Warangal ನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ರಾಧಾಕೃಷ್ಣರವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ ಮಹಾಪ್ರಬಂಧಕ್ಕೆ ಹೈದರಾಬಾದ್‌ನ ಜವಾಹರ್‌ಲಾಲ್ ನೆಹರು ತಾಂತ್ರಿಕ ವಿಶ್ವ ವಿದ್ಯಾನಿಲಯವು ಡಾಕ್ಟರೇಟ್ (ಪಿ.ಹೆಚ್‌ಡಿ) ಪದವಿ ನೀಡಿದೆ. ಇವರು ಅಂತಾರಾಷ್ಟ್ರೀಯ ಸಾಫ್ಟ್‌ವೇರ್ ಕಂಪೆನಿಗಳಾದ SHARP , SHARP, CERNER, INFOSYS RESEARCH ಹಾಗೂ PHILIPS ಮುಂತಾದ ಕಂಪೆನಿಗಳಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಹಾಗೂ ಸಾಫ್ಟ್‌ವೇರ್ ಆರ್ಕಿಟೆಕ್ಟ್ ಆಗಿ ಸೇವೆ ಸಲ್ಲಿಸಿ, ಪ್ರಸ್ತುತ ಬೆಂಗಳೂರಿನ John.F.Welch R & D center £ G.E.Healthcareನಲ್ಲಿ ಟೆಕ್ನಿಕಲ್ ಪ್ರಾಡಕ್ಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಸುಮಾರು 20 ವರ್ಷಗಳಿಂದ ಮೆಡಿಕಲ್ ಇಮೇಜಿಂಗ್ ತಂತ್ರಜ್ಞಾನದಲ್ಲಿ ಸಂಶೋಧನೆಗಳನ್ನು ಮಾಡಿ ೮ ಪೇಟೆಂಟ್‌ಗಳನ್ನು ಅಮೇರಿಕಾದಿಂದ ಪಡೆದಿರುತ್ತಾರೆ ಹಾಗೂ 20ಕ್ಕೂ ಹೆಚ್ಚು ಸಂಶೋಧನಾತ್ಮಕ ಲೇಖನಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ತಂತ್ರಜ್ಞಾನ ಸಮ್ಮೇಳನಗಳಲ್ಲಿ ಮಂಡಿಸಿದ್ದಾರೆ.

ಇವರು ಸುಳ್ಯ ಗಾಂಧಿನಗರದ ಸ.ಮಾ.ಹಿ.ಪ್ರಾ ಶಾಲೆ ಹಾಗೂ ಅರಂತೋಡಿನ ನೆ.ಸ್ಮಾ.ಪ.ಪೂ. ಕಾಲೇಜಿನಲ್ಲಿ ಪ್ರಾಥಮಿಕ ಹಾಗೂ ಪದವಿಪೂರ್ವ ಶಿಕ್ಷಣಗಳನ್ನು ಪೂರೈಸಿ, ಸುಳ್ಯದ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಪದವಿ ಪೂರೈಸಿ ಅಲ್ಲಿಯೇ ಅಲ್ಪಾವಧಿ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ನಂತರ ಮಣಿಪಾಲದ ಮಾಹೆ ವಿಶ್ವವಿದ್ಯಾನಿಲಯದಲ್ಲಿ ಮೆಡಿಕಲ್ ಸಾಫ್ಟ್‌ವೇರ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಸಕ್ಷಮ ಎಂಬ ದಿವ್ಯಾಂಗರ ಶ್ರೇಯೋಭಿವೃದ್ಧಿಗಾಗಿ ಸಮರ್ಪಿತ ರಾಷ್ಟ್ರೀಯ ಸಂಘಟನೆಯ ರಾಜ್ಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಡಾ| ಹರಿಕೃಷ್ಣ ರೈ ರವರು ಪತ್ನಿ ಕಿರಣ್‌ ಹರಿಕೃಷ್ಣ ರೈ, ಪುತ್ರ ಕೃತಿಕ್‌ ಹರಿಕೃಷ್ಣ ರೈ ರವರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.