ಕಾಣಿಯೂರು ಗ್ರಾಮ ಪಂಚಾಯತ್ ಜಮಾಬಂದಿ ಸಭೆ| ಕ್ಲಪ್ತ ಸಮಯದಲ್ಲಿ ಕಾಮಗಾರಿಗಾಗಿ ಅನುದಾನವನ್ನು ಬಳಸಿ

Puttur_Advt_NewsUnder_1
Puttur_Advt_NewsUnder_1

ಚಿತ್ರ: ಸುಧಾಕರ್ ಕಾಣಿಯೂರು

ಕಾಣಿಯೂರು: 2019-20ನೇ ಸಾಲಿನ ಕಾಣಿಯೂರು ಗ್ರಾ.ಪಂ ಜಮಾಬಂದಿ ಸಭೆಯು ಕಾಣಿಯೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅ.13ರಂದು ನಡೆಯಿತು. ಜಮಾಬಂದಿ ಅಧಿಕಾರಿಯಾಗಿ ಭಾಗವಹಿಸಿದ ಮಂಗಳೂರು ದ.ಕ ಜಿ.ಪಂ, ಲೆಕ್ಕ ಶಾಖೆಯ ಲೆಕ್ಕಾಧಿಕಾರಿ ಝೀವಲ್ ಕಾನ್ ಅವರು ಮಾತನಾಡಿ, ಸರಕಾರದಿಂದ ಬರುವ ಅನುದಾನವನ್ನು ಕ್ಲಪ್ತ ಸಮಯದಲ್ಲಿ ಕಾಮಗಾರಿಗಾಗಿ ಬಳಸಬೇಕು. ಪ್ರತಿಯೊಂದು ಕಾಮಗಾರಿಗಳು ಪಾರದರ್ಶಕವಾಗಬೇಕು ಎಂಬ ನಿಟ್ಟಿನಲ್ಲಿ ಜನತೆಯ ಮುಂದಿಡುವ ಪ್ರಯತ್ನದಿಂದ ಜಮಾಬಂದಿ ಸಭೆಯನ್ನು ಮಾಡಲಾಗುತ್ತದೆ. ಗ್ರಾಮದ ಅಭಿವೃದ್ಧಿಗೆ ಜನತೆಯ ಸಹಕಾರ ಅಗತ್ಯ. ಪಂಚಾಯತ್‌ನಿಂದ ಸಿಗುವ ಸವಲತ್ತುಗಳನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದವರು ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಅನುದಾನ ಹಂಚಿಕೆ ಅಥವಾ ಕ್ರೀಯಾಯೋಜನೆಯ ವಿಚಾರವಾಗಿ ಏನಾದರು ಸಮಸ್ಯೆಯಿದ್ದಲ್ಲಿ ಸಭೆಯಲ್ಲಿ ಕೇಳಬಹುದು ಎಂದರು. ಕಾಣಿಯೂರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಜೈ ಪ್ರಕಾಶ್ ಮಾತನಾಡಿದರು. ಜಮಾಬಂದಿ ಸಹಾಯಕಿ ಅಶ್ವಿನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ, ಮಾಜಿ ಉಪಾಧ್ಯಕ್ಷೆ ಕಮಲಾಕ್ಷಿ ಬೆದ್ರಂಗಳ, ಮಾಜಿ ಸದಸ್ಯರಾದ ಗಣೇಶ್ ಉದನಡ್ಕ, ರುಕ್ಮಿಣಿ ನಾಗಲೋಕ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಜಯಪ್ರಕಾಶ್ ಲೆಕ್ಕಪತ್ರಗಳ ದಾಖಲೆಗಳನ್ನು ಓದಿದರು. ಸಭೆಯಲ್ಲಿ ಗ್ರಾಮ ಪಂಚಾಯತ್ ಲೆಕ್ಕಪತ್ರಗಳ ದಾಖಲೆ ಮತ್ತು ೨೦೧೯-೨೦ನೇ ಸಾಲಿನಲ್ಲಿ ನಿರ್ವಹಿಸಿದ ಕಾಮಗಾರಿಗಳ ತಪಾಸಣೆ ನಡೆಸಲಾಯಿತು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.