HomePage_Banner
HomePage_Banner
HomePage_Banner
HomePage_Banner
HomePage_Banner

ಪುತ್ತೂರು ತಾಲೂಕು ಬಂಟರ ಸಂಘದ ಕಾರ್‍ಯಕಾರಿ ಸಮಿತಿ ಸಭೆ| ಪ್ರತಿ ಗ್ರಾಮ ಗ್ರಾಮದಲ್ಲಿ ಬಂಟರ ಸಂಘದ ಸಮಿತಿ ರಚನೆ- ಬೂಡಿಯಾರ್ ರಾಧಾಕೃಷ್ಣ ರೈ

Puttur_Advt_NewsUnder_1
Puttur_Advt_NewsUnder_1

ಚಿತ್ರ- ಉಮಾಪ್ರಸಾದ್ ರೈ ನಡುಬೈಲು

ಪುತ್ತೂರು: ತಾಲೂಕು ಬಂಟರ ಸಂಘದ ವತಿಯಿಂದ ಪ್ರತಿ ಗ್ರಾಮ ಗ್ರಾಮದಲ್ಲಿ ಬಂಟರ ಸಂಘದ ಗ್ರಾಮ ಸಮಿತಿಯನ್ನು ರಚನೆಯನ್ನು ಮಾಡಿ, ಆ ಮೂಲಕ ಗ್ರಾಮ ಮಟ್ಟದಲ್ಲಿ ಬಂಟ ಸಮಾಜದ ಸಂಘಟನೆಯನ್ನು ಬಲಪಡಿಸಿ, ಗ್ರಾಮದಲ್ಲಿ ಅರ್ಥಿಕ ಬಡತನದಲ್ಲಿ ಇರುವ ಕುಟುಂಬವನ್ನು ಗುರುತಿಸಿ, ಅವರಿಗೆ ಸಹಾಯ ಹಸ್ತವನ್ನು ನೀಡಲಾಗುವುದು ಎಂದು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಹೇಳಿದರು.

ಅವರು ಅ.13ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದ ಬಂಟರ ಸಂಘದ ಕಚೇರಿಯಲ್ಲಿ ಜರಗಿದ ತಾಲೂಕು ಬಂಟರ ಸಂಘದ ಕಾರ್‍ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ಸಂಘದ ಮೂಲಕ ಕಾರ್‍ಯರೂಪಕ್ಕೆ ತರಲಾಗುವುದು ಎಂದರು. ಬಂಟರ ಸಂಘದ ನಿಕಟಪೂರ್ವಾಧ್ಯಕ್ಷ ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ, ಉಪಾಧ್ಯಕ್ಷರುಗಳಾದ ಜಗಜೀವನ್‌ದಾಸ್ ರೈ ಚಿಲ್ಮೆತ್ತಾರು, ಸುಬ್ಬಣ್ಣ ರೈ ಖಂಡಿಗ, ರೋಶನ್ ರೈ ಬನ್ನೂರು, ನಿರ್ದೇಶಕರುಗಳಾದ ಎ.ಬಿ.ಮನೋಹರ್ ರೈ, ಸುಭಾಶ್ ಕುಮಾರ್ ಶೆಟ್ಟಿ ಆರುವಾರ, ಸಂತೋಷ್ ಶೆಟ್ಟಿ ಸಾಜ, ಸಬಿತಾ ಭಂಡಾರಿ, ವಿಕ್ರಮ್ ಶೆಟ್ಟಿ ಅಂತರ, ಶಶಿಕಿರಣ್ ರೈ ನೂಜಿಬೈಲು, ಸುಧೀರ್ ಶೆಟ್ಟಿ ತೆಂಕಿಲ, ದಿವ್ಯನಾಥ್ ಶೆಟ್ಟಿ ಕಾವು ಹಾಗೂ ಗೌರವ ಆಹ್ವಾನಿತ ಉಮಾಪ್ರಸಾದ್ ರೈ ನಡುಬೈಲುರವರುಗಳು ಉಪಸ್ಥಿತರಿದ್ದರು. ತಾಲೂಕು ಬಂಟರ ಸಂಘದ ಪ್ರದಾನ ಕಾರ್‍ಯದರ್ಶಿ ರಾಕೇಶ್ ರೈ ಕೆಡೆಂಜಿ ಸ್ವಾಗತಿಸಿ, ವಂದಿಸಿದರು, ಬಂಟರ ಸಂಘದ ಕಛೇರಿ ಸಿಬಂದಿ ರಂಜಿನಿ ಶೆಟ್ಟಿ ಸಹಕರಿಸಿದರು.

ಅ. 24 – ಬಂಟರ ಸಂಘದಿಂದ ವಿದ್ಯಾರ್ಥಿ ವೇತನ ವಿತರಣೆ
ಪುತ್ತೂರು ತಾಲೂಕು ಬಂಟರ ಸಂಘದಿಂದ ಬಂಟ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನವನ್ನು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಅ.24ರಂದು ವಿತರಿಸಲಾಗುವುದು. ಬೆಳಿಗ್ಗೆ 10 ಗಂಟೆಗೆ ಎಸ್‌ಎಸ್‌ಎಲ್‌ಸಿ ಹಾಗೂ 11 ಗಂಟೆಗೆ ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸರಳ ರೀತಿಯ ಸಮಾರಂಭದಲ್ಲಿ ವಿತರಿಸಲು ಸಭೆ ನಿರ್ಧರಿಸಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.