HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ರಾಷ್ಟ್ರೀಯ ವಾರ್ಷಿಕ ಸ್ವಚ್ಛತಾ ಸಮೀಕ್ಷೆ: ಪುತ್ತೂರು ನಗರಸಭೆಗೆ 6 ನೇ ಸ್ಥಾನ

Puttur_Advt_NewsUnder_1
Puttur_Advt_NewsUnder_1

ಬೊಳುವಾರು ವಾರ್ಡ್‌ನಲ್ಲಿ ನಗರಸಭೆ ಅಧಿಕಾರಿಗಳಿಗೆ, ಸ್ವಚ್ಛತಾ ಯೋಧರಿಗೆ ಅಭಿನಂದನೆ

ರಾಜ್ಯದಲ್ಲೆ ಪುತ್ತೂರು ನಗರಸಭೆ ಮಾದರಿಯಾಗಬೇಕು- ರೂಪಾ ಶೆಟ್ಟಿ
ಕೊರೋನಾಕ್ಕೆ ಉಚಿತ ಚಿಕಿತ್ಸೆ ಇದೆ – ಡಾ.ದೀಪಕ್ ರೈ
ಜಾಗ್ರತಿಯೇ ಎಲ್ಲದಕ್ಕೂ ಔಷಧ – ಗೋಪಾಲಕೃಷ್ಣ ಹೇರಳೆ
ಒಳ್ಳೆಯ ಕೆಲಸಕ್ಕೆ ಹಾರೈಸುವುದು ನಮ್ಮ ಕರ್ತವ್ಯ – ಜಾನ್ ಕುಟ್ಹೀನಾ
ನಗರಸಭೆ ನಂ 1 ಸ್ಥಾನ ಆಗಬೇಕು – ಸಂತೋಷ್ ಕುಮಾರ್

ಪುತ್ತೂರು: ರಾಷ್ಟ್ರೀಯ ವಾರ್ಷಿಕ ಸ್ವಚ್ಛತೆ ಸರ್ವೆಯ ಸ್ವಚ್ಛ ಸರ್ವೇಕ್ಷಣ್ ಸರ್ವೆಯಲ್ಲಿ ಪುತ್ತೂರು ನಗರಸಭೆಗೆ 6 ನೇ ಸ್ಥಾನ ಬಂದ ಹಿನ್ನಲೆಯಲ್ಲಿ ನಗರಸಭೆ ಬೊಳುವಾರು ವಾರ್ಡ್ ಸ್ವಚ್ಛತಾ ಆಂದೋಲನಾ ಸಮಿತಿಯಿಂದ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಅ.೧೩ ರಂದು ನಡೆದ ಗಾಂಧೀ ಜಯಂತಿ ಅಂಗವಾಗಿ ನಗರಸಭೆ ಸ್ವಚ್ಛತಾ ಯೋಧರಿಗೆ ಅಭಿನಂದನಾ ಪತ್ರ ಪ್ರದಾನ ಮಾಡಲಾಯಿತು.

ನಗರಸಭೆ ಸ್ವಚ್ಛತಾ ಕಾರ್ಯವನ್ನು ಗೌರವಿಸುವ ಕಾರ್ಯಕ್ಕೆ ಬೊಳುವಾರು ವಾರ್ಡ್ ಪ್ರಥಮವಾಗಿ ಮುಂದೆ ಬಂದಿರುವುದು ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗು ಪೌರಕಾರ್ಮಿಕರಿಗೆ ಸಂತೋಷ ತಂದಿದೆ. ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಸೈನಿಕ ರವಿ ಶಂಕರ ಉಪ್ಪಂಗಳ ಅವರು ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ನಗರಸಭೆಯ ಪೌರಾಯುಕ್ತೆ ರೂಪಾ ಶೆಟ್ಟಿ, ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ ಅವರನ್ನು ಬೊಳುವಾರು ವಾರ್ಡ್‌ನ ಸ್ವಚ್ಛತಾ ಸಮಿತಿಯಿಂದ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಅಭಿನಂದನಾ ಪತ್ರ ಪ್ರದಾನ ಮಾಡಲಾಯಿತು.

ರಾಜ್ಯದಲ್ಲೆ ಪುತ್ತೂರು ನಗರಸಭೆ ಮಾದರಿಯಾಗಬೇಕು:
ಪೌರಾಯುಕ್ತೆ ರೂಪಾ ಶೆಟ್ಡಿ ಅವರು ಮಾತನಾಡಿ ಪ್ರತಿ ನಿತ್ಯ ನಮಗೆ ಪೋನ್ ಕಾಲ್ ಬರುವುದು ಬೊಳುವಾರು ವಾರ್ಡ್‌ನ ನಗರಸಭಾ ಸದಸ್ಯರಾದ ಸಂತೋಷ್ ಅವರಿಂದ ಮಾತ್ರ. ಇದು ಅವರಲ್ಲಿರುವ ಸ್ವಚ್ಛತಾ ಕಾಳಜಿಯನ್ನು ತೋರಿಸುತ್ತದೆ. ನಮ್ಮನ್ನು ಗುರುತಿಸುವ ಕಾರ್ಯಕ್ರಮ ಎಲ್ಲಿಯೂ ನಡೆದಿಲ್ಲ. ಇದು ಪ್ರಥಮ ಎಂದ ಅವರು ನಗರಸಭೆ 39ನೇ ಸ್ಥಾನದಿಂದ 6 ನೇ ಸ್ಥಾನಕ್ಕೆ ಬಂದಿರುವುದು ಸಂತೋಷ ವಿಚಾರ.

ಇದು ನಮ್ಮಿಂದ ಮಾತ್ರವಲ್ಲ ನಿಮ್ಮ ಸಹಕಾರದಿಂದ ಸಾಧ್ಯವಾಗಿದೆ ಎಂದರು. ಮುಂದೆಯೂ ನಿಮ್ಮ ಸಹಕಾರ ಬೇಕು. ಅದಕ್ಕಾಗಿ ಆದಷ್ಟು ಎಲ್ಲರು ಕಸ ವಿಂಗಡಣೆ ಮಾಡಿ ಕೊಡಬೇಕು. ಮುಂದಿನ ದಿನ ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ಬಯೋ ಗ್ಯಾಸ್ ಪ್ಲಾಂಟ್ ಮಾಡುವ ಚಿಂತನೆ ಇದೆ ಎಂದರು.

ಕೊರೋನಾಕ್ಕೆ ಉಚಿತ ಚಿಕಿತ್ಸೆ ಇದೆ:
ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿ ಡಾ. ದೀಪಕ್ ರೈ ಅವರು ಮಾತನಾಡಿ ಕೋವಿಡ್- 19 ಸೋಂಕಿನಿಂದ ಹೇಗೆ ಜಾಗೃತರಾಗಿರಬೇಕು. ಯಾವ ರೀತಿ ಔಷದಿ ಪಡೆಯಬೇಕೆಂದು ಮಾಹಿತಿ ನೀಡಿದ ಅವರು ಪ್ರಾಥಮಿಕ ಸಂಪರ್ಕದವರು ಕಂಡಿತಾ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ. ಸೋಂಕು ಇದ್ದವರಿಗೆ ಉಚಿತ ಚಿಕಿತ್ಸೆ ಇದೆ. ವ್ಯಾಕ್ಸಿನ್ ಬರುವ ತನಕ ಕೊರೊನಾ ಜಾಗೃತರಾಗಿರಬೇಕು ಹೊರತು ಕೋವಿಡ್ ಭಯ ಬೇಡ ಎಂದರು.

ಜಾಗ್ರತಿಯೇ ಎಲ್ಲದಕ್ಕೂ ಔಷಧ:
ಬೊಳುವಾರು ದುರ್ಗಾಪರಮೇಶ್ವರಿ ಮಲರಾಯ ದೇವಸ್ಥಾನದ ಸಮಿತಿ ಗೌರವಾಧ್ಯಕ್ಷ ಗೋಪಾಕೃಷ್ಣ ಹೇರಳೆ ಅವರು ಮಾತನಾಡಿ ಸ್ವಚ್ಚತೆಯಲ್ಲಿ ಪುತ್ತೂರು ನಗರಸಭೆ 6 ನೇ ಸ್ಥಾನಕ್ಕೆ ತರುವುದು ಸಣ್ಣ ವಿಚಾರ ಅಲ್ಲ. ಸಾಕಷ್ಟು ಜಾಗೃತಿ ಮೂಡಿಸಿದ ಕಾರಣ ಇವತ್ತು ಸುಂದರ ಪುತ್ತೂರು ಆಗಿದೆ. ಅದೇ ರೀತಿ ಇವತ್ತು ಕೋವಿಡ್ ಸಂದರ್ಭದಲ್ಲಿಯೂ ಜಾಗೃತಿಯೇ ಮುಖ್ಯ. ಈ ನಿಟ್ಟಿನಲ್ಲಿ ಎಲ್ಲಾ ವಿಚಾರದಲ್ಲೂ ಜಾಗೃತಿಯೇ ಔಷಧ ಎಂದರು.

ಒಳ್ಳೆಯ ಕೆಲಸಕ್ಕೆ ಹಾರೈಸುವುದು ನಮ್ಮ ಕರ್ತವ್ಯ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೊಳುವಾರು ಸ್ವಚ್ಛತಾ ಸಮಿತಿ ಅಧ್ಯಕ್ಷ ಜಾನ್ ಕುಟೀನ್ಹಾ ಅವರು ಮಾತನಾಡಿ ಒಳ್ಳೆ ಕೆಲಸ ಮಾಡುವವರನ್ನು ಬೆನ್ನು ತಟ್ಟಿ ಹಾರೈಸಬೇಕು. ಇದಕ್ಕೆ ಸಾಕ್ಷಿಯಾಗಿ ಇವತ್ತು ಬೊಳುವಾರು ವಾರ್ಡ್ ಸದಸ್ಯ ಸಂತೋಷ್ ಮತ್ತು ಸ್ವಚ್ಛತಾ ಯೋಧರಾದ ಪೌರಕಾರ್ಮಿಕರು ಮತ್ತು ಅಧಿಕಾರಿ ವರ್ಗದವರನ್ನು ಅಭಿನಂದಿಸಲೇಬೇಕು ಎಂದರು.

ನಗರಸಭೆ ನಂ 1 ಸ್ಥಾನ ಆಗಬೇಕು:
ಬೊಳುವಾರು ವಾರ್ಡ್‌ನ ಸದಸ್ಯ ಸಂತೋಷ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಚ್ಛತಾ ಯೋಧರಿಗೆ ಸಹಕಾರ ನೀಡಿ ಮುಂದಿನ ದಿನ ಪುತ್ತೂರು ಸ್ವಚ್ಛತೆಯಲ್ಲಿ ನಂ.1 ಆಗಬೇಕು. ಇದಕ್ಕೆ ಪುತ್ತೂರು ನಗರಸಭೆ ಸಾರ್ವಜನಿಕರು ಪೂರ್ಣಸಹಕಾರ ನೀಡಲಿದ್ದಾರೆ ಎಂದರು. ಬೊಳುವಾರು ಸ್ವಚ್ಛತಾ ಆಂದೋಲನಾ ಸಮಿತಿ ಸಂಚಾಲಕ ಆಸ್ಕರ್ ಆನಂದ್, ಪ್ರಭಾವತಿ, ದಯಾಕರ್, ವಸಂತ್, ನೌಶಾದ್, ಕೇಶವ ಪೈ, ವನಿತಾ ಅತಿಥಿಗಳನ್ನು ಗೌರವಿಸಿದರು. ಸಮಿತಿ ಕಾರ್ಯದರ್ಶಿ ನಗರಸಭೆ ನಿವೃತ್ತ ಸಿಬ್ಬಂದಿ ಉಸ್ಮಾನ್ ಅವರು ಸ್ವಾಗತಿಸಿದರು. ನೀಲಂತ್ ಬೊಳುವಾರು ಕಾರ್ಯಕ್ರಮ ನಿರೂಪಿಸಿದರು. ಕಿರಿಯ ಆರೋಗ್ಯಸಹಾಯಕಿ ನಿಶಾ, ಆಶಾ ಕಾರ್ಯಕರ್ತೆ ಮೀನಾಕ್ಷಿ, ಅಂಗನವಾಡಿ ಕಾರ್ಯಕರ್ತೆ ಯಶೋದ ಸೇರಿದಂತೆ ಪೌರ ಕಾರ್ಮಿಕರು ಸಭೆಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.