HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಸ್ಕೂಟರ್ ಸ್ಕಿಡ್ : ಗಾಯಾಳು ಫಯಾಜ್ ನನ್ನು ಆಸ್ಪತ್ರೆಗೆ ದಾಖಲಿಸಿದ ದೇವಳದ ನಿತ್ಯ ಕರ ಸೇವಕರು ಹಾಗೂ ಬಿಜೆಪಿ ಕಾರ್ಯಕರ್ತರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಶ್ರೀ‌ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಸ್ಕೂಟರೊಂದು ಸ್ಕಿಡ್ ಆಗಿ ಸವಾರ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ. ಈ ಸಂದರ್ಭದಲ್ಲಿ  ಗಾಯಾಳುವನ್ನು ದೇವಳದ ನಿತ್ಯ ಕರಸೇವಕರು ಹಾಗು ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಸೇರಿಕೊಂಡು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ಅ.13 ರಂದು ರಾತ್ರಿ ನಡೆದಿದೆ.

ಕೊಂಬೆಟ್ಟು ಕಾಲೇಜು ರಸ್ತೆಯಾಗಿ ವೇಗವಾಗಿ ಬಂದ ಸ್ಕೂಟರ್ ಮಹಾಲಿಂಗೇಶ್ವರ ದೇವಳದ ರಸ್ತೆಯ ಬಳಿ ಉಬ್ಬು ದಿಣ್ಣೆಯಲ್ಲಿ ಸವಾರನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿದೆ. ಸ್ಕೂಟರ್ ಸವಾರ ವಿಟ್ಲದ ಮಹಮ್ಮದ್ ಪಯಾಜ್ ಎಂಬವರು ರಸ್ತೆಗೆ ಎಸೆಯಲ್ಪಟ್ಟಿದ್ದರು.

ಇದೇ ವೇಳೆ ದೇವಳದ ಬಳಿ ಇದ್ದ ನಿತ್ಯ ಕರಸೇವಕರು ಮತ್ತು ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ತೀವ್ರ ಗಾಯಗೊಂಡಿದ್ದ ಸವಾರ ಮಹಮ್ಮದ್ ಪಯಾಜ್ ಅವರನ್ನು ತಕ್ಷಣ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.

ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸಚಿನ್, ಕಿರಣ್ ಶಂಕರ ಮಲ್ಯ, ಮಂಜುನಾಥ ಭಂಡಾರ್ ಕರ್ , ಸಚಿನ್ , ಸಂಪತ್ ಅವರು ಗಾಯಾಳುವನ್ನು ಮಂಜುನಾಥ ಭಂಡಾರ್ ಕರ್ ಅವರ ಕಾರಿನಲ್ಲಿ ಆಸ್ಪತ್ರೆಗೆ ಸೇರಿಸುವಲ್ಲಿ ಸಹಕರಿಸಿದರು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಆಸ್ಪತ್ರೆಗೆ ಭೇಟಿ ನೀಡಿದರು.

ಗಾಯಾಳುವಿನ ತಲೆಗೆ ಗಾಯವಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಲ್ಲೂ ಪಿ.ಜಿ.ಜಗನ್ನಿವಾಸ ರಾವ್ ಅವರ ನೇತೃತ್ವದ ತಂಡ ಆಸ್ಪತ್ರೆಯಲ್ಲಿ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.