HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಾಲಕಿಯ ಪಾಲಿಗೆ ಬೆಳಕಾದ ‘ತುಳುನಾಡ ತುಡರ್’ ವಾಟ್ಸ್ಯಾಪ್ ಗ್ರೂಪ್

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ವಾಟ್ಸಫ್ ಗ್ರೂಫ್ ಮೂಲಕ ಸುಮಾರು 32 ಸಾವಿರ ರೂ.ಸಂಗ್ರಹಿಸಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ನೆರವು ನೀಡುವ ಮೂಲಕ ಮಾನವೀಯತೆ ತೋರಿರುವ ಪ್ರಕರಣವೊಂದು ಬಜತ್ತೂರು ಗ್ರಾಮದ ವಳಾಲುನಿಂದ ವರದಿಯಾಗಿದೆ.

ವಾಟ್ಸಫ್ ಗ್ರೂಫ್ ಕೇವಲ ವಿಚಾರ ವಿನಿಮಯಕ್ಕೆ ಮಾತ್ರ ಇರುವುದಲ್ಲ, ಸಂಕಷ್ಟದಲ್ಲಿರುವ ಬಡವರಿಗೂ ನೆರವು ನೀಡಲು ಸಹಕಾರಿಯಾಗಬಲ್ಲದು ಎಂಬುದನ್ನು ತುಳುನಾಡ ತುಡರ್ ವಾಟ್ಸಫ್ ಗ್ರೂಫ್‌ನವರು ಮಾಡಿ ತೋರಿಸಿದ್ದಾರೆ.

10ನೇ ತರಗತಿಯ ವಿದ್ಯಾರ್ಥಿನಿ, ಬಜತ್ತೂರು ಗ್ರಾಮದ ವಳಾಲು ಎಂಜಿರಡ್ಕ ನಿವಾಸಿ ವೀರಮ್ಮ ಎಂಬವರ ಪುತ್ರಿ ಯಕ್ಷಾ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿ ಕೂಲಿ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವುದರೊಂದಿಗೆ ಜೀವನ ನಿರ್ವಹಣೆಗೆ ಸಂಕಷ್ಟ ಪಡುತ್ತಿದ್ದ ಸಂದರ್ಭದಲ್ಲೇ ಮಗಳು ಅನಾರೋಗ್ಯಕ್ಕೆ ಒಳಗಾಗಿದ್ದು ವೀರಮ್ಮರವರನ್ನು ಮತ್ತಷ್ಟೂ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ.

ಇದನ್ನು ಅರಿತ ಸ್ಥಳೀಯ ಯುವಕರು ತುಳುನಾಡ ತುಡರ್ ವಾಟ್ಸಫ್ ಗ್ರೂಫ್ ಮೂಲಕ ಬಾಲಕಿಯ ಚಿಕಿತ್ಸೆಗೆ ನೆರವು ಯಾಚಿಸಿದ್ದರು. ಈ ಮೂಲಕ ಸುಮಾರು ೩೨ ಸಾವಿರ ರೂ.ಸಂಗ್ರಹವಾಗಿದ್ದು ಇದನ್ನು ಬಾಲಕಿಯ ಚಿಕಿತ್ಸೆಗಾಗಿ ಆಕೆಯ ತಾಯಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ವ್ಯಕ್ತಪಡಿಸಿದ್ದಾರೆ. ತುಳುನಾಡ ತುಡರ್ ವಾಟ್ಸಫ್ ಗ್ರೂಪ್‌ನವರ ಈ ಮಾನವೀಯ ಕಾರ್ಯಕ್ಕೆ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗಿದೆ.

 

ಸ್ಪಂದನಾ ಸೇವಾ ಸಂಘದಿಂದಲೂ ನೆರವು:
ಬಾಲಕಿಯ ಚಿಕಿತ್ಸೆಗೆ ಬೆಳ್ತಂಗಡಿಯ ಸ್ಪಂದನಾ ಸೇವಾ ಸಂಘವೂ 20 ಸಾವಿರ ರೂ.ನೆರವು ನೀಡಿದೆ. ಸ್ಪಂದನಾ ಸೇವಾ ಸಂಘದ ಅಕ್ಟೋಬರ್ ತಿಂಗಳ 11ನೇ ಸೇವಾ ಯೋಜನೆಯ ಧನ ಸಹಾಯವನ್ನು ವೀರಮ್ಮರವರ ಪುತ್ರಿ ಯಕ್ಷಾರವರ ಚಿಕಿತ್ಸೆಗೆ ನೀಡಲಾಗಿದೆ. ಧನಸಹಾಯದ ಚೆಕ್‌ನ್ನು ಉಪ್ಪಿನಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಪ್ರಬಂಧಕ ಪಿಜಕ್ಕಳ ವಿಶ್ವನಾಥ ಗೌಡರವರು ಬಾಲಕಿಯ ಕುಟುಂಬಕ್ಕೆ ಇತ್ತೀಚೆಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ಗೌಡ ಕೊಯ್ಯೂರು, ವಾಣಿ ಸೌಹಾರ್ದ ಕೋ-ಅಪರೇಟಿವ್ ಸಂಸ್ಥೆಯ ನಿರ್ದೇಶಕ ಸುರೇಶ್ ಕೌಡಂಗೆ, ಪುರಂದರ ಗೌಡ ಕಡೀರ, ಪ್ರಶಾಂತ್ ಗೌಡ ಪೂವಾಜೆ, ಸ್ಥಳೀಯರಾದ ವಾಸು ಗೌಡ ದಡ್ಡು, ವೀಣಾ ಆನಂದ ಗೌಡ, ನವೀನ ಹರೀಶ್ ಗೌಡ ಹಾಗೂ ಸ್ಪಂದನಾ ಸೇವಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.