HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಗ್ರಾಪಂ ಚುನಾವಣೆ ಪೂರ್ವ ತಯಾರಿ: ಅರಿಯಡ್ಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

Puttur_Advt_NewsUnder_1
Puttur_Advt_NewsUnder_1
  • ಕಾರ್ಯಕರ್ತರ ಶ್ರಮದಿಂದ ಈ ಬಾರಿ ಅರಿಯಡ್ಕ ಗ್ರಾಪಂ ನಲ್ಲಿ ಅಧಿಕಾರ ಪಡೆಯುವಂತಾಗಬೇಕು; ಹೇಮನಾಥ ಶೆಟ್ಟಿ

ಪುತ್ತೂರು; ಅರಿಯಡ್ಕ ಗ್ರಾಪಂ ವ್ಯಾಪ್ತಿಗೆ ಒಳಪಡುವ ಅರಿಯಡ್ಕ ಮತ್ತು ಮಾಡ್ನೂರು ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯು ಅ. ೧೦ ರಂದು ಕಾವು ಸಮುದಾಯ ಭವನದಲ್ಲಿ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅರಿಯಡ್ಕ ಗ್ರಾಪಂನ ಎಲ್ಲಾ ೨೪ ಸ್ಥಾನಗಳಿಗೂ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕಿದೆ. ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಕಳೆದ ಗ್ರಾಪಂ ಆಡಳಿತ ವೈಫಲ್ಯತೆಯನ್ನು ಕಂಡಿದ್ದು ಈ ಬಗ್ಗೆ ಗ್ರಾಮದ ಪ್ರತೀ ಮನೆ ಮನೆಗೂ ವಿವರಣೆ ನೀಡುವ ಕೆಲಸವನ್ನು ಕಾರ್ಯಕರ್ತರು ಮಾಡಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಗ್ರಾಪಂ ನಲ್ಲಿ ಉತ್ತಮ ಆಡಳಿತ ನೀಡುವ ಪಣತೊಡುವ ಕೆಲಸವನ್ನು ನಾವೆಲ್ಲರೂ ಈಗಿಂದಲೇ ಮಾಡಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಅರಿಯಡ್ಕ ಗ್ರಾಪಂಗೆ ೨ ಕೋಟಿ ಅನುದಾನ: ಅನಿತಾ ಹೇಮನಾಥ ಶೆಟ್ಟಿ
ನನ್ನ ಅವಧಿಯಲ್ಲಿ ಅರಿಯಡ್ಕ ಮತ್ತು ಮಾಡ್ನೂರು ಗ್ರಾಮಕ್ಕೆ ಸುಮರು ೨ ಕೋಟಿ ರೂ ಅನುದಾನವನ್ನು ತಂದು ವಿವಿಧ ಕಡೆಗಳಲ್ಲಿ ಅಭಿವೃದ್ದಿ ಕಾಮಗಾರಿಯನ್ನು ನಡೆಸಲಾಗಿದೆ.ಕುಡಿಯುವ ನೀರಿಗಾಗಿ ಗರಿಷ್ಠ ಅನುದಾನವನ್ನು ಬಳಕೆ ಮಾಡಲಾಗಿದೆ. ಜನರ ಬೇಡಿಕೆಗೆ ಪೂರಕವಾಗಿ ನೀರಿನ ಟ್ಯಾಂಕ್, ಪ್ಯಪ್ ಮತ್ತು ಪಂಪ್ ಜೋಡನಾ ಕಾರ್ಯವನ್ನು ನಡೆಸಲಾಗಿದೆ. ಗ್ರಾಮದಲ್ಲಿ ಎಲ್ಲೂ ಕುಡಿಯುವ ನೀರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಜಲಜೀವನ್ ಮಿಷನ್‌ನಲ್ಲಿ ನನ್ನ ವ್ಯಾಪ್ತಿಯ ಗ್ರಾಮಗಳಿಗೆ ಹೆಚ್ಚಿನ ಅನುದಾನವನ್ನು ಇರಿಸಿದ್ದೇನೆ. ಮಾಡಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ಗ್ರಾಮಸ್ಥರಿಗೆ ಮನವರಿಕೆ ಮಾಡುವ ಕೆಲಸ ಕಾರ್ಯಕರ್ತರಿಂದ ಆಗುತ್ತಿದೆ ಇದು ತೃಪ್ತಿ ತಂದಿದೆ ಎಂದು ಹೇಳಿದರು.

ಅರಿಯಡ್ಕ ಗ್ರಾಪಂ ಮಾಜಿ ಅಧ್ಯಕ್ಷ ಶಿವರಾಮ ಮಣಿಯಾಣಿ ಮಾತನಾಡಿ ಕಳೆದ ಐದು ವರ್ಷದಲ್ಲಿ ಅರಿಯಡ್ಕ ಗ್ರಾಪಂ ವತಿಯಿಂದ ಉತ್ತಮ ಆಡಳಿತ ಗ್ರಾಮಸ್ಥರಿಗೆ ದೊರೆಯಲಿಲ್ಲ. ಕಳೆದ ಬಾರಿ ಕಾಂಗ್ರೆಸ್‌ಗೆ ಅಧಿಕಾರ ತಪ್ಪಿತ್ತು ಆದರೆ ಈ ಬಾರಿ ಖಂಡಿತವಾಗಿಯೂ ಮತದಾರ ನಮ್ಮನ್ನು ಬೆಂಬಲಿಸುತ್ತಾರೆ ಎಂದು ಹೇಳಿದರು.

ಶಕ್ತಿಮೀರಿ ಪ್ರಯತ್ನಿಸಬೇಕಿದೆ; ಬುಶ್ರಾ ಅಝೀಝ್
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬುಶ್ರಾ ಅಝೀಝ್ ಮಾತನಾಡಿ ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಅರಿಯಡ್ಕ ಗ್ರಾಪಂ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಕಾರ್ಯಕರ್ತರು ಸೇರಿದಂತೆ ನಾವೆಲ್ಲರೂ ಶಕ್ತಿ ಮೀರಿ ಕೆಲಸ ಮಾಡಬೇಕಿದೆ. ಪಕ್ಷದ ಅಭಿವೃದ್ದಿಗಗಿ ತಳಮಟ್ಟದಿಂದ ಕೆಲಸ ಕಾರ್ಯಗಳು ನಡೆಯಬೇಕು . ಜಿಪಂನಿಂದ ನಡೆದಿರುವ ಅಭಿವೃದ್ದಿ ಕಾರ್ಯಗಳು ಜನರಿಗೆ ತಿಳಿಸುವ ಕೆಲಸವನ್ನು ನಾವು ಮಾಡಬೇಕು ಎಂದು ಹೇಳಿದರು.

ಅರಿಯಡ್ಕ ಗ್ರಾಪಂ ಮಾಜಿ ಉಪಾಧ್ಯಕ್ಷ ಇಕ್ಬಾಲ್ ಹುಸೇನ್, ಕೆರೆಮಾರು ಮೋನಪ್ಪ ಪೂಜಾರಿಯವರು ಅನಿಸಿಕೆ ವ್ಯಕ್ತಪಡಿಸಿದರು.
ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಶಂಕರ ಮಾಡಂದೂರು, ಜಿಲ್ಲಾ ಕಾರ್ಮಿಕ ಮುಖಂಡ ಶಿವಕುಮಾರ್ ಕೌಡಿಚ್ಚಾರ್, ಮಾಜಿ ಗ್ರಾಪಂ ಅಧ್ಯಕ್ಷೆ ಶಶಿಕಲಾ ಚೌಟ, ಜಿಲ್ಲಾ ಕಾಂಗ್ರೆಸ್ ಪ್ರ. ಕಾರ್ಯದರ್ಶಿ ಮಹೇಶ್ ರೈ ಅಂಕೊತ್ತಿಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಯು ಟಿ ತೌಸೀಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಸದಸ್ಯರುಗಳಾದ ದಿವ್ಯನಾಥ ಶೆಟ್ಟಿ ಕವು, ನವೀನ. ಬಿ.ಡಿ, ಮಹಾಲಿಂಗ ನಾಯ್ಕ, ಸರೋಜಿನಿ ಕೆರೆಮಾರು, ನಳಿನಾಕ್ಷಿ, ಸಲ್ಮಾ , ಗೋಪಾಲಕೃಷ್ಣ ಪಾಟಾಳಿ, ಗುರುವಪ್ಪ ನಾಯ್ಕ, ಗಂಗಾಧರ ಪಾಟಾಳಿ, ಜಯಂತಿ ಪಟ್ಟುಮೂಲೆ, ಜಗನ್ನಾಥ ರೈ ಕಾವು ಗಉತ್ತು, ಜಗನ್ನಾಥ ರೈ ಕಾವು ಡೆಂಬಾಳೆ, ಸಂತೋಷ್ ರೈ , ಅಜರುದ್ದೀನ್ ಅಶ್ವತ್ತಡಿ, ಕಾಂಗ್ರೆಸ್ ಮುಖಂಡರುಗಳಾದ ಸಾರ್ಥಕ್ ರೈ ಪಾಪೆಮಜಲು, ಕಾರ್ಯಕರ್ತರಾದ ಅಂಬೋಡಿ ಅಮ್ಚಿನಡ್ಕ, ತಿಮ್ಮಯ್ಯ ಉಜ್ರುಗುಳಿ, ಬಾಬು ತೋಟದಮೂಲೆ, ಸೌಮ್ಯ ಅಮ್ಚಿನಡ್ಕ, ಗಂಗಾದರ, ರವಿ ತೋಟದಮೂಲೆ, ಸಾಹುಲ್ ಹಮೀದ್ ಆರ್ಲಪದವು, ಬಶೀರ್, ಪ್ರೇಮನಾಥ ಕಾವು, ಸಿಆರ್ ಸಿ ನಾರಾಯಣ, ಅಬ್ದುಲ್ ರಹಿಮಾನ್, ಅಬ್ದುಲ್ ಹಮೀದ್, ಯೂಸುಫ್, ಅಲ್‌ಫಾಝ್, ರವಿಪ್ರಸಾದ್ ಕಾವು, ವಿನೋದ್ ಅಕ್ಷತಾಕೆ, ಅಭಿಷೇಕ್, ಯತೀಶ್ ಪೂಜರಿ, ರಾಘವಪೂಜಾರಿ ಸರೋಳ್ತಡಿ, ಸಿದ್ದಿಕ್ ಸುಲ್ತಾನ್, ಕೆ ಮಹಮ್ಮದ್ ಆಸಿಫ್, ಶ್ರೀಪ್ರಸಾದ್, ಮುದರ, ಕೆ ವಿಠಲನಾಯ್ಕ, ಶೇಖರ ಯು, ಸಿದ್ದಿಕ್, ಬಾಬು ದರ್ಬೆತ್ತಡ್ಕ, ಮೂಷಿಕ್, ಆರಿಫ್, ಬಿ ಕೆ, ಮಹಮ್ಮದ್ ಪಿ ಎಂ, ಮಹಮ್ಮದ್ ನೂರುದ್ದೀನ್, ಶರತ್ ಪೂಜಾರಿ, ಹೇಮಂತ್, ಜಯಕುಮಾರ್ ರೈ, ಮೋನಪ್ಪ ಪೂಜಾರಿ ಬಾಳೆಕೊಚ್ಚಿ ಮೊದಲದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.