HomePage_Banner
HomePage_Banner
HomePage_Banner
HomePage_Banner
HomePage_Banner

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ – ನೂತನ ತಾಲೂಕು ಸಮಿತಿ ರಚನಾ ಸಭೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಜತೆ ಸಂಯೋಜಿತವಾಗಿರುವ ಮತ್ತು ರಾಜ್ಯ ಸರಕಾರದ ಕಾರ್ಮಿಕ ಇಲಾಖೆಯಲ್ಲಿ ನೋಂದಾವಣೆಗೊಂಡಿರುವ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಇದರ ಪುತ್ತೂರು ತಾಲೂಕು ಸಮಿತಿ ರಚನಾ ಸಭೆಯು ಪುತ್ತೂರಿನ ಬ್ಲಡ್ ಬ್ಯಾಂಕ್ ಬಿಲ್ಡಿಂಗ್‌ನಲ್ಲಿರುವ ರೋಟರಿ ಟ್ರಸ್ಟ್ ಹಾಲ್‌ನಲ್ಲಿ ಅ.14ರಂದು ಜರಗಿತು.

ದ.ಕ. ಜಿಲ್ಲಾ ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ, ವಿ 4 ನ್ಯೂಸ್ ಚಾನೆಲ್ ನಿರ್ದೇಶಕ ತಾರಾನಾಥ್ ಗಟ್ಟಿ ಕಾಪಿಕಾಡ್‌ರವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಕರ್ತರಿಗೆ ಮತ್ತು ಮಾಧ್ಯಮ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಈ ಯೂನಿಯನ್‌ನ ಸದಸ್ಯತ್ವ ಪಡೆಯಬಹುದಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಪತ್ರಕರ್ತರಿಗೆ ಬೆನ್ನುಲುಬಾಗಿ ನಿಂತಿರುವ ಈ ಸಂಘ ಇದೀಗ ಪುತ್ತೂರಿನಲ್ಲೂ ಆರಂಭಗೊಳ್ಳಲಿದೆ. ಈ ಸಂಘದ ಮೂಲಕ ಪತ್ರಿಕೆ, ಡಿಜಿಟಲ್ ಮಾಧ್ಯಮ, ವೆಬ್‌ಸೈಟ್‌ನಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗಳಿಗೆ ಸರಕಾರ ಮತ್ತು ಸಂಬಂಧಿಸಿದ ಇಲಾಖೆಯಿಂದ ಸಿಗುವ ಸೌಲಭ್ಯ, ಆರೋಗ್ಯ ವಿಮೆ ಸೇರಿದಂತೆ ಹಲವು ಯೋಜನೆಗಳನ್ನು ಒದಗಿಸಿಕೊಡುವಂತಹ ಕಾರ್ಯ ಮಾಡಲಾಗುತ್ತಿದೆ ಎಂದರು.

ಯೂನಿಯನ್ ಜಿಲ್ಲಾ ಉಪಾಧ್ಯಕ್ಷ, ವಿ4  ಚಾನೆಲ್‌ನ ಮುಖ್ಯಸ್ಥ  ಲಕ್ಷ್ಮಣ ಕುಂದರ್‌ರವರು ಮಾತನಾಡಿ, ಪತ್ರಕರ್ತರಲ್ಲಿ ತಾರತಮ್ಯ ಮಾಡಿ ಡಿಜಿಟಲ್ ಮಾಧ್ಯಮ ಹಾಗೂ ವೆಬ್‌ಸೈಟ್‌ಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಯಾವುದೇ ಹಕ್ಕನ್ನು ನೀಡದಿರುವುದು ಖೇದಕರವಾಗಿದೆ. ಪುತ್ತೂರು ತಾಲೂಕಿನಲ್ಲಿ ಹಲವು ದಿನಗಳಿಂದ ಯೂನಿಯನ್ ರಚಿಸಬೇಕೆಂಬ ಕನಸು ಇತ್ತು. ಇದೀಗ ಆ ದಿನ ಕೂಡಿಬಂದಿದೆ ಎಂದರು. ಸುಳ್ಯ ತಾಲೂಕಿನಲ್ಲಿ ನೂತನ ಯೂನಿಯನ್ ರಚನೆಗೊಂಡಿದ್ದು, ಮುಂದಿನ ದಿನಗಳಲ್ಲಿ ಕಡಬ ತಾಲೂಕಿನಲ್ಲೂ ಸಮಿತಿ ರಚನೆಯಾಗಲಿದೆ ಎಂದರು.

ಯೂನಿಯನ್ ಜಿಲ್ಲಾ ಕೋಶಾಧಿಕಾರಿ, ಸುದ್ದಿ ಮೀಡಿಯಾ ಸೆಂಟರ್ ಪಿ.ಆರ್.ಓ. ಜ್ಯೋತಿಪ್ರಕಾಶ್ ಪುಣಚರವರು ಮಾತನಾಡಿ, ಪತ್ರಕರ್ತರಿಗೆ ಮತ್ತು ಮಾಧ್ಯಮ ಸಂಸ್ಥೆಯ ಸಿಬ್ಬಂದಿಗಳಿಗೆ ಕೂಡ ಸಂಘ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆಯಡಿಯಲ್ಲಿ ಸಂಯೋಜನೆಗೊಂಡಿರುವ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪತ್ರಕರ್ತರ ಭದ್ರತೆ, ಆರೋಗ್ಯ ಸುರಕ್ಷತೆ, ಅರ್ಥಿಕ ನೆರವುಗಳಂತಹ ವಿಶೇಷ ಯೋಜನೆಯನ್ನು ರೂಪಿಸಿಕೊಂಡು ತಾಲೂಕಿನಲ್ಲಿ ಕಾರ್ಯಾಚರಿಸಲಿದೆ ಎಂದರು.

ನೂತನ ಸಮಿತಿ ಅಸ್ವಿತ್ವಕ್ಕೆ
ಅಧ್ಯಕ್ಷ: ಸಂತೋಷ್ ಕುಮಾರ್, ಕಾರ್ಯದರ್ಶಿ ಗಣೇಶ್ ಕೆ.,
ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಸಮಿತಿಯ ಪ್ರಥಮ ಅಧ್ಯಕ್ಷರಾಗಿ ಸುದ್ದಿ ಬಿಡುಗಡೆ ದಿನ ಪತ್ರಿಕೆಯ ಮುಖ್ಯ ವರದಿಗಾರ ಸಂತೋಷ್ ಕುಮಾರ್ ಶಾಂತಿನಗರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕಹಳೆ ನ್ಯೂಸ್‌ನ ವ್ಯವಸ್ಥಾಪಕ ಗಣೇಶ್ ಕೆ. ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಕಹಳೆ ನ್ಯೂಸ್‌ನ ವರದಿಗಾರ ನಿಶಾಂತ್ ಬನ್ನೂರು, ವಿ. ಟಿವಿಯ ಮುಖ್ಯಸ್ಥ ರಾಮ್‌ದಾಸ್ ವಿಟ್ಲ ಮತ್ತು ಸುದ್ದಿ ಚಾನೆಲ್‌ನ ಹೇಮಾ ಜಯರಾಮ ರೈ, ಕೋಶಾಧಿಕಾರಿಯಾಗಿ ಸೊಬಗು ವೆಬ್‌ಸೈಟ್‌ನ ಅನೀಶ್ ಕಡಬ, ಜೊತೆ ಕಾರ್ಯದರ್ಶಿಗಳಾಗಿ ಸುದ್ದಿ ವೆಬ್‌ಸೈಟ್‌ನ ಚೈತ್ರಾ ಬಂಗೇರ ಅನಂತಿಮಾರ್, ವಿಟಿವಿ ನ್ಯೂಸ್‌ನ ರಾಮ್ ಶೇಖರ್‌ರವನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸುದ್ದಿ ಬಿಡುಗಡೆಯ ಆದಿತ್ಯ ಈಶ್ವರಮಂಗಲ, ಕವಿತಾ, ದೇವಿಕಾ, ಚಂದ್ರಕಾಂತ್ ಉರ್ಲಾಂಡಿ, ಪ್ರಭಾಕರ್, ಶಿವಪ್ರಸಾದ್ ರೈ, ಅಶ್ವಿನಿ,  ಕಹಳೆ ನ್ಯೂಸ್‌ನ ಭರತ್, ಕಾವ್ಯ, ಸುಮಿತ್ರಾ, ‌ರವರನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಸಮಿತಿ ಸದಸ್ಯ, ಸಂಜೆವಾಣಿ ವರದಿಗಾರ ಹಮೀದ್ ವಿಟ್ಲರವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಉಮೇಶ್ ಮಿತ್ತಡ್ಕ, ಸಂತೋಷ್ ಮೊಟ್ಟೆತ್ತಡ್ಕ, ಫಾರೂಕ್ ಶೇಖ್, ವಸಂತ ಸಾಮೆತ್ತಡ್ಕ, ಪ್ರಶಾಂತ್ ಮಿತ್ತಡ್ಕ, ಕುಶಾಲಪ್ಪ ಅಗಲಿ, ರಂಜಿತ್ ತಲೆಪ್ಪಾಡಿ ಮತ್ತಿತರರು ಸಲಹೆ ಸೂಚನೆ ನೀಡಿದರು. ಹೇಮಾ ಜಯರಾಮ ರೈ ಕಾರ್ಯಕ್ರಮ ನಿರೂಪಿಸಿದರು.

ಅಧ್ಯಕ್ಷರ ಪರಿಚಯ:
ಕೋಡಿಂಬಾಡಿ ಗ್ರಾಮದ ಶಾಂತಿನಗರ ನಿವಾಸಿಯಾಗಿರುವ ಸಂತೋಷ್ ಕುಮಾರ್‌ರವರು ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ವರದಿಗಾರರಾಗಿದ್ದಾರೆ. ಈ ಹಿಂದೆ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದ್ದ ಇವರು ಶಾಂತಿನಗರ ತ್ರಿವೇಣಿ ಯುವಕ ಮಂಡಲದ ಅಧ್ಯಕ್ಷರಾಗಿ, ಶಾಂತಿನಗರ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷರಾಗಿ, ಪೂಜಾ ಸಮಿತಿಯ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾಗಿ, ಶಾಂತಿನಗರ ಸರಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಶಾಂತಿನಗರ ಅಂಗನವಾಡಿ ಕೇಂದ್ರದ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾಗಿ, ಬಾಲ ವಿಕಾಸ ಸಮಿತಿಯ ಸದಸ್ಯರಾಗಿ, ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿಹಬ್ಬ ಸಮಿತಿಯ ಉಪಾಧ್ಯಕ್ಷರಾಗಿ, ಪುತ್ತೂರು ಯುವವಾಹಿನಿ ಘಟಕದ ನಿರ್ದೇಶಕರಾಗಿ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಮಾಧ್ಯಮ ಸಮಿತಿಯ ಸಹ ಸಂಚಾಲಕರಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.