HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪುಣಚ: ಮ್ಯಾನೇಜರ್ ಇಲ್ಲದೆ ಖಾತೆದಾರರಿಗೆ ಸಂಕಷ್ಟ: ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಕೆನರಾ ಬ್ಯಾಂಕ್ ಮಹಾ ಪ್ರಬಂಧಕರಿಗೆ ದೂರು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಂಟ್ವಾಳ ತಾಲೂಕಿನ ಪುಣಚದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆನರಾ ಬ್ಯಾಂಕ್ ನಲ್ಲಿ (ಸಿಂಡಿಕೇಟ್ ಬ್ಯಾಂಕ್ ಅಜ್ಜಿನಡ್ಕ ಶಾಖೆ) ಮ್ಯಾನೇಜರ್ ಇಲ್ಲದೆ ಖಾತೆದಾರರಿಗೆ ಸಂಕಷ್ಟವಾಗಿದ್ದು ತಕ್ಷಣವೆ ಬ್ಯಾಂಕ್‌ಗೆ ಮ್ಯಾನೇಜರ್ ನೇಮಿಸುವಂತೆ ಪುಣಚ ನಾಗರೀಕ ಹಿತರಕ್ಷಣಾ ವೇದಿಕೆಯಿಂದ ಕೆನರಾ ಬ್ಯಾಂಕ್‌ನ ಮಹಾ ಪ್ರಬಂಧಕರಿಗೆ ಮನವಿ ಮಾಡಿದ್ದಾರೆ.

ಬ್ಯಾಂಕ್‌ನ ಮೆನೇಜರ್ ಸುಮಾರು 20 ದಿನಗಳಿಂದ ವರ್ಗಾವಣೆಗೊಂಡಿದ್ದು ಇವರ ಬದಲಿಗೆ ಬೇರೆ ಮೆನೇಜರ್ ನೇಮಕವಾಗಿರುವುದಿಲ್ಲ ಇದರಿಂದ ಬ್ಯಾಂಕ್‌ನ ಖಾತೆದಾರರಿಗೆ ಸಾಲ ಫಲಾನುಭವಿಗಳಿಗೆ ಸಂಕಷ್ಟ ಎದುರಾಗಿದೆ.

ಶಾಖೆಯಲ್ಲಿ ಎರಡು ಕ್ಲರ್ಕ್ ಕ್ಯಾಷಿಯರ್ ಮತ್ತು ಇಬ್ಬರು ಆಫೀಸರ್ ಇರಬೇಕಾಗಿದ್ದು ಆದರೆ ಪುಣಚ ಬ್ರ್ಯಾಂಚ್‌ನಲ್ಲಿ ಕೇವಲ ಕ್ಯಾಷಿಯರ್ ಮತ್ತು ಓರ್ವ ಆಫೀಸರ್ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಗ್ರಾಹರಿಕರಿಗೆ ತೀವ್ರ ತೊಂದರೆ ಉಂಟಾಗಿದೆ, ಮಾತ್ರವಲ್ಲದೆ ಬ್ರ್ಯಾಂಚ್‌ನ ಎಟಿಎಂನಲ್ಲಿ ವಾರದಲ್ಲಿ ಎರಡು ದಿನ ಮಾತ್ರ ಹಣ ಡ್ರಾ ಮಾಡಲು ಸಾಧ್ಯವಾಗುತ್ತಿದೆ.

ಇದರಿಂದಾಗಿ ಬ್ಯಾಂಕ್‌ಗೆ ಬರುವ ಅನಕ್ಷರಸ್ಥ ಖಾತೆದಾರರಿಗೆ ಯಾವುದೇ ಸಹಾಯ ಮತ್ತು ಸೇವೆ ನೀಡಲಾಗುತ್ತಿಲ್ಲ. ಈ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ ಖಾತೆದಾರರಿಗೆ ಅನುಕೂಲ ಮಾಡಿಕೊಡುವಂತೆ ಹಿತರಕ್ಷಣ ವೇದಿಕೆಯ ಅಧ್ಯಕ್ಷ ಖಲಂದರ್ ಶಾಫಿ ಮಾಳಿಗೆ, ಕಾರ್ಯದರ್ಶಿ ವೆಂಕಟರಮಣ ಪುಣಚ ಮನವಿ ಮಾಡಿದ್ದಾರೆ. ಈ ಬಗ್ಗೆ ಬ್ಯಾಂಕ್‌ನಲ್ಲಿ ಮಾಹಿತಿ ಕೇಳಿದಾಗ ಸಮಸ್ಯೆ ಆಗಿರುವುದು ನಿಜ ಈ ಬಗ್ಗೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.