HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕಾಣಿಯೂರು ಗ್ರಾ.ಪಂ ವಿಶೇಷ ಗ್ರಾಮ ಸಭೆ- ಸಾಮಾಜಿಕ ಪರಿಶೋಧನಾ ಸಭೆ

Puttur_Advt_NewsUnder_1
Puttur_Advt_NewsUnder_1

ಚಿತ್ರ: ಸುಧಾಕರ್ ಕಾಣಿಯೂರು

ಕಾಣಿಯೂರು: ಕಾಣಿಯೂರು ಗ್ರಾಮ ಪಂಚಾಯತ್ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕ್ರೀಯಾ ಯೋಜನೆಯ ಪ್ರಥಮ ಹಂತದ ಸಾಮಾಜಿಕ ಪರಿಶೋಧನಾ ವಿಶೇಷ ಗ್ರಾಮ ಸಭೆಯು ಕಾಣಿಯೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಅ ೧೪ರಂದು ನಡೆಯಿತು. ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಸರಕಾರದಿಂದ ಸಿಗುವ ವಿವಿಧ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಜೊತೆಗೆ ಯೋಜನೆಯ ಮಾಹಿತಿಯನ್ನು ನಾಮಫಲಕ ಅಳವಡಿಸುವ ಮೂಲಕ ಇನ್ನಷ್ಟು ಪ್ರಚಾರಗೊಳಿಸಬೇಕು. ಯಾವುದೇ ಯೋಜನೆಯು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕಾದರೆ ಜನತೆಯ ಸಹಕಾರವು ಅತೀ ಅಗತ್ಯ ಎಂದವರು, ಉದ್ಯೋಗ ಖಾತರಿ ಯೋಜನೆಯ ಮುಖಾಂತರ ಗ್ರಾಮಗಳು, ಅದೆಷ್ಟೊ ಶಾಲೆಗಳು ಅಭಿವೃದ್ಧಿಗೊಳ್ಳುತ್ತಾ ಇದೆ ಎಂದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕ್ರೀಯಾ ಯೋಜನೆಯ ಪುತ್ತೂರು ತಾಲೂಕು ಸಂಯೋಜಕ ಚಂದ್ರಶೇಖರ್‌ರವರು ಮಾಹಿತಿ ನೀಡಿ, ಉದ್ಯೋಗ ಖಾತರಿ ಯೋಜನೆಯಲ್ಲಿ ನಾವು ಕೆಲಸವನ್ನು ಪ್ರಾರಂಭಿಸುವ ಮೊದಲು ಸಂಬಂಧಪಟ್ಟವರನ್ನು ಸಂಪರ್ಕಿಸಿಕೊಳ್ಳಬೇಕು, ಜೊತೆಗೆ ಇಂಜೀನಿಯರ್‌ರವರ ಮುಖಾಂತರ ಸ್ಪಷ್ಟ ಮಾಹಿತಿಯನ್ನು ಪಡೆದುಕೊಳ್ಳಬೇಕು. ನಾವು ಯಾವ ಉದ್ಧೇಶದ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದೇವಾ ಆ ಉದ್ದೇಶಕ್ಕಾಗಿಯೇ ಕೆಲಸವನ್ನು ಉದ್ಯೋಗ ಖಾತರಿ ಯೋಜನೆಯಲ್ಲಿ ನಿರ್ವಹಿಸಬೇಕು ಎಂದರು. ಉದ್ಯೋಗ ಖಾತರಿ ಯೋಜನೆಯ ಇಂಜಿನಿಯರ್ ವಿನೋದ್ ಮಾಹಿತಿ ನೀಡಿದರು. ಗ್ರಾ.ಪಂ, ಕಾರ್ಯದರ್ಶಿ ಯೋಗಿನಿ ಎಸ್ ಶೆಟ್ಟಿ ವೇದಿಕೆಯುಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ, ಮಾಜಿ ಸದಸ್ಯರಾದ ಗಣೇಶ್ ಉದನಡ್ಕ, ರಾಮಣ್ಣ ಗೌಡ ಮುಗರಂಜ, ಪುರುಷೋತ್ತಮ ಗೌಡ ಇಡ್ಯಡ್ಕ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಸ್ವಾಗತದೊಂದಿಗೆ ಪ್ರಾಸ್ತವಿಕವಾಗಿ ಮಾತನಾಡಿ, ಸಭೆಯಲ್ಲಿ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಮಾತ್ರ ಚರ್ಚಿಸಲು ಅವಕಾಶವಿದ್ದು, ಯೋಜನೆಯ ಮಾರ್ಗಸೂಚಿಯಂತೆ ಸೌಲಭ್ಯ ಅಪೇಕ್ಷಿಸುವವರು ಅವಶ್ಯ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದರು. ಗ್ರಾ.ಪಂ ಸಿಬ್ಬಂದಿ ತಿಮ್ಮಪ್ಪ ಗೌಡ ಬೀರುಕುಡಿಕೆ, ಕುಮಾರ್, ಕೀರ್ತಿ ಎಳುವೆ, ಚಿತ್ರಾ, ಶಶಿಕಲಾ, ಪಾರ್ವತಿ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.