HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ | ನಿವ್ವಳ ಲಾಭ ರೂ. 64243, ಬೋನಸ್ ರೂ.0.52 ಪೈಸೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆಯ್ಯೂರು ಗ್ರಾಮದ ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ 2019-20 ನೇ ಸಾಲಿನ ಸಾಮಾನ್ಯ ಸಭೆಯು ಅ.14ರಂದು ತೆಗ್ಗು ಶಾಲಾ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಶುಭಪ್ರಕಾಶ್ ಎ.ರವರು ಸಭಾಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಭಾಸ್ಕರ ರೈ ದೇರಾಜೆಯವರು ೨೦೧೯-೨೦ ನೇ ಸಾಲಿನ ವರದಿ ವಾಚಿಸಿದರು. ಸಂಘವು ತೆಗ್ಗು, ಎರಕ್ಕಳ, ಕಲ್ಲಗುಡ್ಡೆ, ಕೋಡಂಬು, ಬಲ್ಕಾಡು ಹಾಗೂ ಗ್ರಾಮದ ಕೆಳಗಿನ ಸೊರಕೆ ಪ್ರದೇಶಗಳ ವ್ಯಾಪ್ತಿಯನ್ನು ಒಳಗೊಂಡಿದ್ದು ಇಂದಿಗೆ ೧೫ ಸಹಕಾರಿ ವರ್ಷಗಳನ್ನು ಪೂರೈಸಿದ್ದು ಪ್ರಸ್ತುತ ೧೨೩ ಜನ ಸದಸ್ಯರಿದ್ದು ೪೭ ಮಂದಿ ಸದಸ್ಯರು ಹಾಲು ಹಾಕುತ್ತಿದ್ದಾರೆ. ಸಂಘದಲ್ಲಿ ದಿನ ಒಂದಕ್ಕೆ ಸರಾಸರಿ ೧೬೦ ಲೀ.ಹಾಲು ಸಂಗ್ರಹಣೆಯಾಗುತ್ತಿದೆ. ಸಂಘವು ವರದಿ ಸಾಲಿನಲ್ಲಿ ಒಟ್ಟು ರೂ.೨,೫೫,೮೪೧.೬೧ ಲಾಭ ಪಡೆದಿದ್ದು ಇದರಲ್ಲಿ ರೂ.೬೪೨೪೩ ನಿವ್ವಳ ಲಾಭ ಬಂದಿರುತ್ತದೆ. ನೆರೆ ಸಂತ್ರಸ್ತರಿಗೆ ರೂ.೧೦೦೦ ದೇಣಿಗೆ ನೀಡಲಾಗಿದ್ದು ವರದಿ ವರ್ಷದಲ್ಲಿ ರೈತರಿಗೆ ೦.೫೨ ಪೈಸೆ ಡಿವಿಡೆಂಟ್ ಘೋಷಣೆ ಮಾಡಲಾಗಿದೆ ಎಂದು ಕಾರ್ಯದರ್ಶಿ ಸಭೆಗೆ ತಿಳಿಸಿದರು.

ಸನ್ಮಾನ
೨೦೦೬ ರಲ್ಲಿ ೬೪ ಜನ ಸದಸ್ಯರಿಂದ ೨೨ ಸಾವಿರ ಷೇರು ಬಂಡವಾಳದೊಂದಿಗೆ ಆರಂಭಗೊಂಡ ತೆಗ್ಗು ಹಾಲು ಉತ್ಪಾದಕರ ಸಹಕಾರ ಸಂಘದ ಪ್ರಥಮ ಅಧ್ಯಕ್ಷರಾಗಿದ್ದುಕೊಂಡು ಸಂಘವನ್ನು ಮುನ್ನಡೆಸಿದ ಬಿ.ರಾಮಕೃಷ್ಣ ರೈಯವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶಾಲು ಹಾಕಿ, ಪೇಟಾ ತೊಡಿಸಿ ಫಲಪುಷ್ಪ, ಸ್ಮರಣಿಕೆ ಸನ್ಮಾನಿಸಲಾಯಿತು.

ಪಶು ಆಹಾರದ ಗೋಣಿ ಚೀಲದ ಕ್ವಾಲಿಟಿ ಹೆಚ್ಚಿಸಿ
ವಿವಿಧ ವಿಷಯಗಳಿಗೆ ಸಂಬಂಧಪಟ್ಟಂತೆ ಸದಸ್ಯರುಗಳು ಪ್ರಶ್ನೆಗಳನ್ನು ಕೇಳಿದರು. ಪಶು ಆಹಾರ ಬರುತ್ತಿರುವ ಚೀಲದ ಕ್ವಾಲಿಟಿ ಕಮ್ಮಿ ಇದ್ದು ಚೀಲವನ್ನು ಎತ್ತಿದಾಗ ಹರಿಯುತ್ತದೆ. ಒಳ್ಳೆಯ ಕ್ವಾಲಿಟಿಯ ಚೀಟವನ್ನು ಹಾಕುವಂತೆ ನಿರ್ದೇಶಕ ಪ್ರಸಾದ್ ಸೊರಕೆ ಸೂಚಿಸಿದರು. ಕುಂಬ್ರ ಬ್ಯಾಂಕ್ ಆಫ್ ಬರೋಡಾದಲ್ಲಿ ಕೆಸಿಸಿ ಸಾಲ ಕೊಡುತ್ತಿಲ್ಲ ಅ.೩೦ ನಂತರ ಕೊಡುತ್ತೇವೆ ಎಂದು ತಿಳಿಸಿದ್ದಾರೆ ಎಂದು ನಿರ್ದೇಶಕ ರಮಾನಾಥ ರೈ ಕೋಡಂಬು ತಿಳಿಸಿದರು. ಈ ಹಿಂದೆಯೂ ಇಲ್ಲಿ ಕೆಸಿಸಿ ಸಾಲ ಕೊಡುವಲ್ಲಿ ವಿಳಂಬ ಮಾಡಲಾಗಿದೆ ಎಂದು ಸದಸ್ಯರು ಆರೋಪಿಸಿದರು.

ಮುಖ್ಯ ಅತಿಥಿಯಾಗಿದ್ದ ದ.ಕ ಜಿಲ್ಲಾ ಹಾಲೂ ಒಕ್ಕೂಟದ ಉಪವ್ಯವಸ್ಥಾಪಕ ಡಾ| ರಾಮಕೃಷ್ಣ ಭಟ್‌ರವರು ಮಾಹಿತಿ ನೀಡುತ್ತಾ, ಪಶು ಆಹಾರದ ಚೀಲದ ಕ್ವಾಲಿಟಿ ಬಗ್ಗೆ ಈ ಹಿಂದೆಯೂ ದೂರು ಬಂದಿತ್ತು ಈ ಬಗ್ಗೆ ಕಂಪೆನಿಗೆ ತಿಳಿಸಲಾಗಿದೆ ಎಂದರು. ಕುಂಬ್ರ ಬ್ಯಾಂಕ್ ಆಫ್ ಬರೋಡಾದಲ್ಲಿ ಕೆಲವೊಂದು ತಾಂತ್ರಿಕ ಕಾರಣಗಳಿಂದ ಈ ಹಿಂದೆ ಕೆಸಿಸಿ (ಕಿಸಾನ್ ಕ್ರೆಡಿಟ್ ಕಾರ್ಡ್) ಸಾಲ ಕೊಡುವಲ್ಲಿ ವಿಳಂಬವಾಗಿದೆ ಎಂದು ಮ್ಯಾನೇಜರ್ ನನಗೆ ಮಾಹಿತಿ ಕೊಟ್ಟಿದ್ದರು ಮತ್ತು ಮುಂದಕ್ಕೆ ಕೊಡುತ್ತೇವೆ ಎಂದು ತಿಳಿಸಿದ್ದಾರೆ. ಈಗ ಮತ್ತೆ ಇಂತಹ ಸಮಸ್ಯೆ ಬಂದಿದ್ದರೆ ಮತ್ತೊಮ್ಮೆ ಮ್ಯಾನೇಜರ್‌ರವರಲ್ಲಿ ಮಾತನಾಡಲಾಗುವುದು ಎಂದು ತಿಳಿಸಿದರು. ಇದಲ್ಲದೆ ಹೈನುಗಾರಿಕೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ದ.ಕ ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಹರೀಶ್ ಕುಮಾರ್ ಎಂ.ಎಸ್.ರವರು ಸಭೆ ನಡೆಸಿಕೊಡುವ ಮೂಲಕ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಬಹುಮಾನ ವಿತರಣೆ
ಸಂಘಕ್ಕೆ ವರದಿ ವರ್ಷದಲ್ಲಿ ಅತೀ ಹೆಚ್ಚು ಹಾಲು ಹಾಕಿದದವರಲ್ಲಿ ಡೊಂಬಯ್ಯ ಗೌಡರವರು ಪ್ರಥಮ ಬಹುಮಾನ ಪಡೆದುಕೊಂಡರೆ, ಗಂಗಾಧರ ಗೌಡರವರು ದ್ವಿತೀಯ ಬಹುಮಾನ ಪಡೆದುಕೊಂಡರು. ಹಾಲು ಹಾಕುವ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.

ವೇದಿಕೆಯಲ್ಲಿ ಸಂಘದ ನಿರ್ದೇಶಕರುಗಳಾದ ತಾರಾನಾಥ ಎ, ಪ್ರಸಾದ್ ರೈ, ಬಾಳಪ್ಪ ಗೌಡ, ಸಂಜೀವ ಆಳ್ವ, ಹರಿಕೃಷ್ಣ ಜೆ, ಜಲಜಾಕ್ಷಿ ಎ.ರೈ, ಶೀಲಾವತಿ ಎ ಉಪಸ್ಥಿತರಿದ್ದರು. ಸಂಘದ ನಿರ್ದೇಶಕಿ ಲೀಲಾವತಿ ಪ್ರಾರ್ಥಿಸಿದರು. ನಿರ್ದೇಶಕ ತಾರಾನಾಥ ಗೌಡ ವಂದಿಸಿದರು.

ಎಲ್ಲಾ ಸದಸ್ಯರ ಸಹಕಾರದೊಂದಿಗೆ ಸಂಘವು ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಂಘದಿಂದ ಇನ್ನಷ್ಟು ಹೆಚ್ಚು ಹಾಲು ಸಂಗ್ರಹವಾಗುವ ರೀತಿಯಲ್ಲಿ ನಾವೆಲ್ಲರೂ ಪ್ರಯತ್ನಿಸೋಣ. ಮುಂದೆಯೂ ಸಂಘದ ಬೆಳವಣಿಗೆಗೆ ಎಲ್ಲಾ ಸದಸ್ಯರು ಸಹಕಾರವನ್ನು ಬಯಸುತ್ತೇವೆ – ಶುಭಪ್ರಕಾಶ್ ಎ. ಅಧ್ಯಕ್ಷರು ತೆಗ್ಗು ಹಾ.ಉ.ಸ.ಸಂಘ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.