HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ವೀರಮಂಗಲ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ | ರೂ.46,252 ಲಾಭ, ಪ್ರತಿ ಲೀ.ಹಾಲಿಗೆ 20 ಪೈಸೆ ಬೋನಸ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು; ವೀರಮಂಗಲ ಹಾಲು ಉತ್ಪಾದಕರ ಸಹಕಾರಿ ಸಂಘವು 2019-20ನೇ ಸಾಲಿನಲ್ಲಿ ರೂ.46,252.75 ಲಾಭ ಗಳಿಸಿದೆ. ಹಾಲು ಉತ್ಪಾದಕರಿಗೆಪ್ರತಿ ಲೀಟರ್ ಹಾಲಿಗೆ 20ಪೈಸೆ ಬೋನಸ್ ನೀಡಲಾಗುವುದು ಎಂದು ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಲಾಗಿದೆ.

ಸಭೆಯು ಅ.14ರಂದು ಸಂಘದ ನಿರ್ದೇಶಕ ಕೆ.ಮಾರಪ್ಪ ಗೌಡ ರವರ ಅಧ್ಯಕ್ಷತೆಯಲ್ಲಿ ಸಂಘದ ಆವರಣದಲ್ಲಿ ನಡೆಯಿತು. ಸಂಘವು ವರದಿ ವರ್ಷದಲ್ಲಿ 1,06, 114.87 ಲೀ.ಹಾಲು ಖರೀದಿಸಿದೆ. ಈ ಪೈಕಿ 9415.4 ಲೀ.ಹಾಲನ್ನು ಸ್ಥಳೀಯ ವಾಗಿ ಮಾರಾಟ ಮಾಡಲಾಗಿದ್ದು ರೂ.3,79,237 ಆದಾಯ ಬಂದಿರುತ್ತದೆ. ಪಶು ಆಹಾರ, ಮಿಶ್ರಣ. ಮಾರಾಟ ಸೇರಿದಂತೆ ಸಂಘಕ್ಕೆ ವರದಿ ವರ್ಷದಲ್ಲಿ ರೂ.3,71,194.41 ಆದಾಯ ಬಂದಿರುತ್ತದೆ. ವರದಿ ಸಾಲಿನ ಎಲ್ಲಾ ಖರ್ಚು ವೆಚ್ಚ ಗಳನ್ನು ಕಳೆದ ಸಂಘವು ರೂ.46,252-75 ಲಾಭಗಳಿಸಿದೆ ಎಂದು ಕಾರ್ಯದರ್ಶಿ ಸವಿತಾ ತಿಳಿಸಿದರು.

ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ.ರಾಮಕೃಷ್ಣ ಭಟ್ ಹಾಗೂ ಡಾ.ಸತೀಶ್ ರಾವ್ ಹೈನುಗಾರಿಕೆಗೆ ಒಕ್ಕೂಟ ಹಾಗೂ ಸರಕಾರದಿಂದ ದೊರೆಯುವ ಸವಲತ್ತುಗಳ ಮಾಹಿತಿ ನೀಡಿದರು.

ನಿರ್ದೇಶಕರಾದ ವಿಶ್ವನಾಥ ನಾಯ್ಕ ಪುಡಿಂಕಲಡ್ಕ, ಲಕ್ಷ್ಮಣ ಗೌಡ, ಜಯಂತಿ ಗಂಡಿ, ಬಾಲಕ್ಕ ಕಕ್ಕುತ್ತಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಾರತಿ ಕಾಡುಮನೆ ಪ್ರಾರ್ಥಿಸಿದರು. ನಿರ್ದೇಶಕರಾದ ಸುಂದರ ಗೌಡ ಕಾಡಮನೆ ಸ್ವಾಗತಿಸಿ, ಹರ್ಷ ಗುತ್ತು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸವಿತಾ ವಂದಿಸಿದರು. ಹಾಲು ಪರೀಕ್ಷಕ ಈಶ್ವರ ಮೂಲ್ಯ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.