HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಎಡನೀರು ಮಠದ ನಿಯೋಜಿತ ಪೀಠಾಧಿಪತಿ ಮಜಲುಮಾರು ಉಮಾಮಹೇಶ್ವರ ದೇವಸ್ಥಾನಕ್ಕೆ ಭೇಟಿ

Puttur_Advt_NewsUnder_1
Puttur_Advt_NewsUnder_1


ಪುತ್ತೂರು:
ಇಲ್ಲಿನ ಬಳಿಯ ಮಜಲುಮಾರು ಉಮಾಮಹೇಶ್ವರ ದೇವಸ್ಥಾನಕ್ಕೆ ಎಡನೀರು ಮಠದ ನಿಯೋಜಿತ ಪೀಠಾಧಿಪತಿ ಜಯರಾಮ ಮಂಜತ್ತಾಯರು ಇಂದು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಅವರನ್ನು ಭಕ್ತಿಪೂರ್ವಕವಾಗಿ ದೇವಳದ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಬರಮಾಡಿಕೊಂಡರು.

ಎಡನೀರು ಮಠದ ಪೀಠಾಧಿಪತಿಗಳಾಗಿದ್ದ ಕೇಶವಾನಂದ ಭಾರತೀ ಸ್ವಾಮೀಜಿಯವರು ವಿಷ್ಣುಪಾದ ಸೇರಿದ ಬಳಿಕ ಅವರ ಆಪ್ತ ಸಹಾಯಕರಾಗಿದ್ದ ಜಯರಾಮ ಮಂಜತ್ತಾಯರನ್ನು ಮಠದ ನೂತನ ಪೀಠಾಧಿಪತಿಯನ್ನಾಗಿ ನಿಯೋಜಿಸಲಾಗಿತ್ತು.

ಜಯರಾಮ ಮಂಜತ್ತಾಯರು ಅಕ್ಟೋಬರ್ 26ರಂದು ಕಾಂಚಿ ಮಠದಲ್ಲಿ ಸನ್ಯಾಸ ದೀಕ್ಷೆಯನ್ನು ಪಡೆದುಕೊಳ್ಳಲಿದ್ದಾರೆ. ಬಳಿಕ ಅಕ್ಟೋಬರ್ 28ನೇ ತಾರೀಖಿನಂದು ಎಡನೀರು ಮಠದಲ್ಲಿ ಅಪಾರ ಭಕ್ತ ಸಮೂಹದ ಸಮ್ಮುಖದಲ್ಲಿ ನೂತನ ಪೀಠಾಧಿಪತಿಯಾಗಿ ಪೀಠಾರೋಹಣಗೈಯಲಿದ್ದಾರೆ.

ಇದಕ್ಕೆ ಪೂರ್ವಭಾವಿಯಾಗಿ ಮಂಜತ್ತಾಯರು ಇದೀಗ ನಾಡಿನ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದು, ಇದರ ಅಂಗವಾಗಿ ಇಂದು ಮಜಲುಮಾರು ದೇವಾಲಯಕ್ಕೆ ಭೇಟಿ ನಿಡಿದರು.
ನಿಯೋಜಿತ ಶ್ರೀಗಳ ತೀರ್ಥಕ್ಷೇತ್ರ ಪರ್ಯಟನೆ ಮತ್ತು ಭೇಟಿಯ ಉದ್ದೇಶವನ್ನು ಇದರ ಸಂಪೂರ್ಣ ಉಸ್ತುವಾರಿಯನ್ನು ವಹಿಸಿಕೊಂಡಿರುವ ಕುಂಟಾರು ರವೀಶ ತಂತ್ರಿಯವರು ಸಂಕ್ಷಿಪ್ತವಾಗಿ ವಿವರಿಸಿ, ಶ್ರೀಗಳ ಪೀಠಾರೋಹಣ ಕಾರ್ಯಕ್ರಮಕ್ಕೆ ಗ್ರಾಮಸ್ಥರಿಗೆ ಆಹ್ವಾನ ನೀಡಿದರು.

ಈ ಸಂದರ್ಭದಲ್ಲಿ, ರಾಜೇಂದ್ರ ಕಲ್ಲೂರಾಯ ಸೇರಿದಂತೆ ಉಮಾಮಹೇಶ್ವರ ಸೇವಾ ಟ್ರಸ್ಟ್ ನ ಅಧ್ಯಕ್ಷ ತಿರುಮಲೇಶ್ವರ ಭಟ್, ಗೌರವಾಧ್ಯಕ್ಷ ಜಯರಾಮ ಕೆದಿಲಾಯ, ಕೋಶಾಧಿಕಾರಿ ನವೀನ್ ರೈ, ಕಾರ್ಯದರ್ಶಿ ವಿಶ್ವನಾಥ ಗೌಡ ಸದಸ್ಯರಾದ ಸುಜಯ್ ತಂತ್ರಿ, ಲಕ್ಷ್ಮೀಶ ತಂತ್ರಿ, ಪದ್ಮನಾಭ ಬೆದ್ರಾಳ, ಕೇಶವ ಮುಕ್ವೆ, ಬೆಳಿಯಪ್ಪ ಗೌಡ, ಸುಧೀರ್ ಹೆಬ್ಬಾರ್, ಗಿರೀಶ್ ರೈ. ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಸಾದ್ ಅಡಿಗ, ಹರೀಶ್ ಕುಂಗ್ರಿಪುಳಿತ್ತಾಯ, ಗಂಗಾಧರ ಆಚಾರ್ಯ, ಸಂತೋಷ್ ಮುಕ್ವೆ ಸಹಿತ ಗ್ರಾಮಸ್ಥರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.