HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬೆದ್ರಾಳದಲ್ಲಿ ಹೊರಗಿನ ಶಕ್ತಿಗಳಿಂದ ಸಾಮರಸ್ಯ ಕೆಡಿಸುವ ಷಡ್ಯಂತ್ರ : ಎಚ್.ಮಹಮ್ಮದ್ ಆಲಿ ಆರೋಪ

Puttur_Advt_NewsUnder_1
Puttur_Advt_NewsUnder_1
  • ಮೌಲಾನಾ ಆಜಾದ್ ಶಾಲೆ ವಿದ್ಯಾ ದೇಗುಲ ಹೊರತು ಧರ್ಮದ ಕೇಂದ್ರವಲ್ಲ

ಪುತ್ತೂರು: ಕೆಮ್ಮಿಂಜೆ ಗ್ರಾಮದ ಬೆದ್ರಾಳ ಎಂಬಲ್ಲಿ ಮೌಲಾನಾ ಆಜಾದ್ ಶಾಲೆ ನಿರ್ಮಾಣಕ್ಕೆ ಹೊರಗಿನ ಶಕ್ತಿಗಳು ಬಂದು ಕೋಮು ಭಾವನೆ ಸೃಷ್ಟಿಸಿ ಸಾಮರಸ್ಯದ ಭಾವನೆ ಕೆಡಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ನಗರಸಭೆ ಮಾಜಿ ವಿಪಕ್ಷ ನಾಯಕ ಎಚ್.ಮಹಮ್ಮದ್ ಆಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಪುತ್ತೂರಿಗೆ ಮಂಜೂರಾಗಿರುವ ಮೌಲಾನಾ ಆಜಾದ್ ಶಾಲೆಯು ನೆಹರುನಗರದ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿತ್ತು. ಬಾಡಿಗೆ ಕಟ್ಟಡದಲ್ಲಿದ್ದ ಈ ಶಾಲೆಗಾಗಿ ಸರಕಾರಿ ಸ್ಥಳ ಒದಗಿಸಲು ಕಂದಾಯ ಇಲಾಖೆಗೆ, ಸರಕಾರದ ಅಲ್ಪ ಸಂಖ್ಯಾತ ಇಲಾಖೆಯ ಅಧಿಕಾರಿಗಳು ಅರ್ಜಿಸಲ್ಲಿದ ವೇಳೆ ಹಲವು ವರ್ಷಗಳಿಂದ ಮುಚ್ಚಲ್ಪಟ್ಟ ಬೆದ್ರಾಳ ಶಾಲೆಯ ಜಾಗವನ್ನು ಮೌಲಾನಾ ಆಜಾದ್ ಶಾಲೆಗೆ ಕಂದಾಯ ಇಲಾಖೆ ಮಂಜೂರು ಮಾಡಿತ್ತು.

ಕೇಂದ್ರ ಮತ್ತು ರಾಜ್ಯ ಸರಕಾರದ ಅಧೀನದಲ್ಲಿರುವ ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯು ನಡೆಸುತ್ತಿರುವ ಈ ಶಾಲೆಗೆ, ಸರಕಾರದ ಯೋಜನೆಯಾಗಿ ಒಳ್ಳೆಯ ಸದುದ್ದೇಶದಿಂದ ಶಾಸಕ ಸಂಜೀವ ಮಠಂದೂರು ಅವರು ಇದರ ಮಂಜೂರಾತಿಗೆ ಪ್ರಯತ್ನಿಸಿರಬಹುದು. ಆದರೆ ಇದಕ್ಕೆ ಬಿಜೆಪಿ ಪಕ್ಷದವರೇ ವಿರೋಧಿಸುತ್ತಿರುವುದು ಆಶ್ಚರ್ಯವೆನಿಸಿದೆ ಎಂದ ಅವರು ಇಲ್ಲಿ ಶಾಸಕರ ಮೇಲಿನ ವಿರೋಧವೋ ಅಥವಾ ಶಾಲೆಯ ಮೇಲಿನ ವಿರೋಧವೋ ತಿಳಿಯುತ್ತಿಲ್ಲ.

ವಿದ್ಯೆ ಕಲಿಸುವ ಇಂತಹ ಶಾಲೆಗಳನ್ನು ಸಮಾಜವು ವಿದ್ಯಾ ದೇಗುಲವೆಂದು ಕರೆಯುತ್ತಿದೆ. ಈ ಜಾಗದಲ್ಲಿ ಸರಕಾರದ ವತಿಯಿಂದ ಶಾಲೆ ನಡೆಯುತ್ತದೆ ಹೊರತು ಯಾವುದೇ ಧರ್ಮದ ಕೇಂದ್ರವಲ್ಲ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸುವ ಹುನ್ನಾರ ನಡೆಯುತ್ತಿದೆ. ಶಾಸಕರ ವಿರೋಧಿ ಬಣದಲ್ಲಿ ಗುರುತಿಸಿಕೊಂಡ ವ್ಯಕ್ತಿ, ಹೊರಗಿನ ಶಕ್ತಿಗಳು ಬಂದು ಕೋಮು ಭಾವನೆ ಸೃಷ್ಟಿಸಿ, ಸಾಮರಸ್ಯದ ಭಾವನೆ ಕೆಡಿಸುವ ಷಡ್ಯಂತ್ರ ನಡೆಯುತ್ತಿದೆ. ಕೆಮ್ಮಿಂಜೆ ಗ್ರಾಮದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಬಹಳ ಅನ್ಯೋನ್ಯತೆಯಿಂದ, ಸೌಹಾರ್ದತೆಯಿಂದ ಅಣ್ಣ ತಮ್ಮಂದಿರಂತೆ ಜೀವನ ಸಾಗಿಸುತ್ತಿದ್ದಾರೆ. ಇದನ್ನು ಕೆಡಿಸುವ ದುರದ್ದೇಶ ಇಲ್ಲಿ ಕಾಣುತ್ತಿದೆ ಎಂದು ಹೇಳಿದರು.

ಶಾಲೆ ಮುಸಲ್ಮಾನರಿಗೆ ಮಾತ್ರ ಸೀಮಿತವಲ್ಲ:
ಮೌಲಾನಾ ಆಜಾದ್ ಆಂಗ್ಲ ಮಾದ್ಯಮ ಶಾಲೆಯು ಕೇವಲ ಮುಸಲ್ಮಾನರಿಗೆ ಸೀಮಿತವಾಗಿಲ್ಲ. ಮುಸ್ಮಿಂ, ಕ್ರಿಶ್ಚಯನ್, ಜೈನ ಧರ್ಮದವರಿಗಲ್ಲದೆ ಶೇ.25 ರಷ್ಟು ಹಿಂದೂ ಧರ್ಮದ ವಿದ್ಯಾರ್ಥಿಗಳಿಗೆ ಇದರಲ್ಲಿ ಅವಕಾಶವಿದೆ ಎಂದು ಮಹಮ್ಮದ್ ಆಲಿ ಹೇಳಿದರು.

ಖಾಸಾಗಿ ಶಾಲೆಯ ವಿರೋಧವೇ ?
ಮೌಲಾನಾ ಆಜಾದ್ ಶಾಲೆ ನಿರ್ಮಾಣವಾಗುವ ಸ್ಥಳದ ಹತ್ತಿರದಲ್ಲೇ ಮುಸಲ್ಮಾನರ ಹಾಗೂ ಕ್ರೈಸ್ತರ ಧಫನ ಭುಮಿ ಇದೆ. ಕ್ರೈಸ್ತ ಧರ್ಮದ ಚರ್ಚು ಇದೆ. ಹಾಗಿದ್ದೂ ಈ ವಿದ್ಯಾ ದೇಗುಲ ನಿರ್ಮಾಣಕ್ಕೆ ಯಾಕೆ ವಿರೋಧ? ಕೆಮ್ಮಿಂಜೆ, ಬದ್ರಾಳ, ಮುಕ್ವೆ, ಪುರುಷರಕಟ್ಟೆ, ನೆಕ್ಕರೆ ಮೊದಲಾದ ಪ್ರದೇಶದಿಂದ ಮಕ್ಕಳು ಖಾಸಗಿ ಆಂಗ್ಲ ಮಾದ್ಯಮ ಶಾಲೆಗೆ ಹೋಗುತ್ತಿದ್ದಾರೆ. ಬೆದ್ರಾಳದಲ್ಲಿ ಸರಕಾರಿ ಆಂಗ್ಲ ಮಾದ್ಯಮ ಶಾಲೆ ರಚನೆಯಾದರೆ ಖಾಸಗಿ ಶಾಲೆಗೆ ಹೊಡೆತ ಬೀಳುತ್ತದೆ ಎಂದು ಖಾಸಗಿ ಶಾಲೆಯವರ ವಿರೋಧವೇ ಎಂದು ಮಹಮ್ಮದ್ ಆಲಿ ಪ್ರಶ್ನಿಸಿದರು.

ಸೌರ್ಹಾದತೆಯಿಂದ ಬಾಳುವ ಮಂದಿ ಇಲ್ಲಿದ್ದಾರೆ:
ಶಾಲೆ ಬೇಡವೆಂದು ನಡೆಸಿರುವ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರೊಬ್ಬರು ಮುಸ್ಲಿಂ ಮನೆಗಳ ಮಧ್ಯೆಯೇ ಮನೆ ಮಾಡಿ ವಾಸ್ತವ್ಯ ಹೊಂದಿದ್ದಾರೆ. ಸಂಜಯನಗರ ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಮುಸ್ಲಿಂರ ಮಧ್ಯವೇ ಹಲವಾರು ಹಿಂದೂ ಬಂದುಗಳು ವಾಸಿಸುತ್ತಿದ್ದಾರೆ. ಕೆಮ್ಮಿಂಜೆ ದೇವಸ್ಥಾನದ ರಸ್ತೆ ಉದ್ದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂರೇ ವಾಸಿಸುತ್ತಿದ್ದಾರೆ. ಗಾಯತ್ರಿ ಮಂದಿರವೂ ನಿರ್ಮಾಣ ಆಗಿದೆ. ಮೊಟ್ಟೆತ್ತಡ್ಕದಲ್ಲಿ ದಿ.ಮಿಶನ್‌ಮೂಲೆ ಸಂಜೀವ ರೈ ಅವರು ಮಸೀದಿ ನಿರ್ಮಾಣಕ್ಕೆ ಉಚಿತ ಜಾಗ ಕೊಟ್ಟಿದ್ದಾರೆ. ಎಲರೂ ಸೌಹಾರ್ದತೆಯಿಂದಿದ್ದಾರೆ. ಇಂತಹ ಸಂದರ್ಭದಲ್ಲಿ ಹೊರಗಿನ ಶಕ್ತಿ ಬಂದು ಸಾಮರಸ್ಯ ಕೆಡಿಸುವ ಷಡ್ಯಂತ್ರ ಮಾಡುತ್ತಿದ್ದಾರೆ. ಇಂತಹ ಸಮಾಜ ಘಾತಕ ಶಕ್ತಿಗಳನ್ನು ಗುರುತಿಸಿ ಮಟ್ಟ ಹಾಕಬೇಕೆಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಾವು ಮನವಿ ಮಾಡಲಿದ್ದೇವೆ ಎಂದು ಹೆಚ್.ಮಹಮ್ಮದ್ ಆಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಜಯನಗರ ಶಾಲೆಯ ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಇಸುಬು ಕೆ, ಕೂರ್ನಡ್ಕ ದೀನಾರ್ ಫ್ರೆಂಡ್ಸ್‌ನ ಸಂಚಾಲಕ ಜಮಾಲು ಉಪಸ್ಥತಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.