HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಬೊಳುವಾರಿನಲ್ಲಿ ಭಾರೀ ಬೆಂಕಿ ಆಕಸ್ಮಿಕ ; ಸಮಯ ಪ್ರಜ್ಞೆ ಮೆರೆದು ಹೆಚ್ಚಿನ ಅವಘಡ ತಪ್ಪಿಸಿದ ಹೈವೇ ಪ್ಯಾಟ್ರೋಲ್

Puttur_Advt_NewsUnder_1
Puttur_Advt_NewsUnder_1
  • ಅಗ್ನಿ ಶಾಮಕದವರ ಸತತ ಮೂರೂವರೆ ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ಬೆಂಕಿ ನಿಯಂತ್ರಣಕ್ಕೆ…
ಪುತ್ತೂರು: ನಗರದ ಬೊಳುವಾರಿನಲ್ಲಿ ಇಂದು ಬೆಳ್ಳಂಬೆಳಿಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ.
ಇಲ್ಲಿನ ಹ್ಯಾರಿಂಗ್ ಸ್ಟುಡಿಯೊ ಸೆಲೂನ್, ಡಿ.ಕೆ.ಮೊಬೈಲ್ ಮತ್ತು ತರಕಾರಿ ಅಂಗಡಿಗಳಿಗೆ ಏಕಾ ಏಕಿ ಹತ್ತಿಕೊಂಡ ಬೆಂಕಿ ನೋಡನೋಡುತ್ತಿದ್ದಂತೆಯೇ ಪರಿಸರದ ಸುತ್ತ ವ್ಯಾಪಿಸತೊಡಗಿತು.
ಈ ಸಂದರ್ಭದಲ್ಲಿ ಗಸ್ತು ನಿರತರಾಗಿದ್ದ ಹೈವೇ ಪ್ಯಾಟ್ರೋಲ್ ನ ಪೊಲೀಸ್ ಸಿಬ್ಬಂದಿಗಳು ಈ ದುರ್ಘಟನೆಯನ್ನು ಗಮನಿಸಿ ಸಮಯಪ್ರಜ್ಞೆಯನ್ನು ಮೆರೆದು ಅಗ್ನಿ ಶಾಮಕ ದಳಕ್ಕೆ ತುರ್ತು ಮಾಹಿತಿಯನ್ನು ರವಾನಿಸಿದರು.

ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಮೂರೂವರೆ ಗಂಟೆಗಳ ಕಾಲ ಕಾರ್ಯಾಚರಣೆಯನ್ನು ನಡೆಸಿ ಬೆಂಕಿಯನ್ನು ನಿಯಂತ್ರಿಸುವ ಕೆಲಸವನ್ನು ಮಾಡಿದರು.

ಘಟನೆ ವಿವರ:

ಪುತ್ತೂರು- ಉಪ್ಪಿನಂಗಡಿ ರಸ್ತೆಯ ಬೊಳುವಾರು ಏಕಮುಖ ರಸ್ತೆಯ ಬಳಿಯಲ್ಲಿರುವ ಉಸ್ಮಾನ್ ಮಾಲಕತ್ವದ ಹ್ಯಾರಿಂಗ್ ಸ್ಟುಡಿಯೋ ಹೆಸರಿನ ಸೆಲೂನ್‌ ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಗಸ್ತು ನಿರತ ಹೈವೇ ಪಟ್ರೋಲ್ ಸಿಬ್ಬಂದಿಗಳು ತಕ್ಷಣ ಅಗ್ನಿಶಾಮಕದಳಕ್ಕೆ ಪೋನ್ ಮಾಡಿರು.

ಈ ನಡುವೆ ಸ್ಥಳೀಯರ ಮೂಲಕ ಸೆಲೂನ್ ಮಾಲಕರನ್ನು ಘಟನಾ ಸ್ಥಳಕ್ಕೆ ಕರೆಯಿಸಿ ಅಂಗಡಿಯ ಬಾಗಿಲನ್ನು ತೆರೆಯುವ ವೇಳೆ ಒಳಗೆ ಬೆಂಕಿ ಜ್ವಾಲೆ  ತೀವ್ರವಾಗಿ ವ್ಯಾಪಿಸತೊಡಗಿತ್ತು ಮಾತ್ರವಲ್ಲದೇ, ಪಕ್ಕದಲ್ಲಿರುವ ದಾರಂದಕುಕ್ಕು ನಿಶಾದ್ ಎಂಬವರ ಮಾಲಕತ್ವದ ಡಿ.ಕೆ.ಮೊಬೈಲ್ಸ್ ಅಂಗಡಿಗೂ ಬೆಂಕಿ ವ್ಯಾಪಿಸತೊಡಗಿತ್ತು.

ಅಗ್ನಿಶಾಮಕದಳದವರು ಬಂದು ಬೆಂಕಿ ನಿಯಂತ್ರಿಸಲು ಯತ್ನಿಸುತ್ತಿದ್ದ ವೇಳೆ ಬೆಂಕಿ ಜ್ವಾಲೆ ಅಂಗಡಿಯ ಮೇಲ್ಛಾವಣಿಯ ಮೂಲಕ ಪಕ್ಕದ ತರಕಾರಿ ಅಂಗಡಿ ಮತ್ತು ಅಕ್ಕಪಕ್ಕದಲ್ಲಿರುವ ಎರಡು ಹೊಟೇಲ್‌ಗಳಿಗೂ ಪಸರಿಸಿತ್ತು.

ಈ ಸಂದರ್ಭದಲ್ಲಿ ಅಗ್ನಿಶಾಮಕದಳದವ ನಿರಂತರ ಮೂರುವರೆ ಗಂಟೆ ಕಾರ್ಯಾಚರಣೆ ಹಾಗೂ ಸ್ಥಳೀಯರ ಪರಿಶ್ರಮದೊಂದಿಗೆ ಬೆಂಕಿಯನ್ನು ಶಮನಗೊಳಿಸಲಾಗಿದ್ದು ಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.