ಅವ್ಯವಹಾರ ಆರೋಪ : ಕುಂಡಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಅಮಾನತು

Puttur_Advt_NewsUnder_1
Puttur_Advt_NewsUnder_1

ವಿಟ್ಲ: ಹಾಲು ಉತ್ಪಾದಕರ ಸಹಕಾರ ಸಂಘದ ದಾಖಲೆ ತಿದ್ದುಪಡಿ ಮಾಡಿದ ಹಾಗೂ ಲೆಕ್ಕಪತ್ರವನ್ನು ತಿರುಚಿದ ಆರೋಪದಲ್ಲಿ ವಿಟ್ಲ ಕುಂಡಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಕುಂಡಡ್ಕ ಸಮೀಪದ ಬದಿಗುಡ್ಡೆ ನಿವಾಸಿ ಗೋವಿಂದ ನಾಯ್ಕ್ ಅವರನ್ನು ಆಡಳಿತ ಮಂಡಳಿಯವರು ಅಮಾನತು ಮಾಡಿರುವುದಾಗಿ ವರದಿಯಾಗಿದೆ.

ಕಳೆದ ಕೆಲ ವರುಷಗಳಿಂದ ಕುಂಡಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕಾರ್ಯದರ್ಶಿಯಾಗಿದ್ದ ಗೋವಿಂದ ನಾಯ್ಕರವರು ಸಂಘದ ದಾಖಲೆ ತಿದ್ದುಪಡಿ ಮಾಡಿದ ಹಾಗೂ ಲೆಕ್ಕಪತ್ರವನ್ನು ತಿರುಚಿದ ಬಗ್ಗೆ ಆಡಳಿತ ಮಂಡಳಿಯ ಗಮನಕ್ಕೆ ಬಂದಿತ್ತು.

ಬಳಿಕ, ಆಡಳಿತ ಮಂಡಳಿಯು ಆಂತರಿಕ ತನಿಖೆ ನಡೆಸಿದಾಗ ಅವ್ಯವಹಾರ ನಡೆದಿರುವುದು ಬಯಲಾಗಿತ್ತು. ಬಳಿಕ ಈ ಬಗ್ಗೆ ಇಲಾಖಾ ಮಟ್ಟದ ತನಿಖೆಗಾಗಿ ಮನವಿ ಮಾಡಲಾಗಿತ್ತು.

ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಿದ ಅಧಿಕಾರಿಗಳು ನಮಗೆ ನೀಡಿದ ರೀಪೋರ್ಟ್‌ನ ಆಧಾರದಲ್ಲಿ ಇದೀಗ ಕಾರ್ಯದರ್ಶಿಯವರನ್ನು ಅಮಾನತು ಮಾಡಿದ್ದೇವೆ ಎಂದು ಕುಂಡಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ತೀರ್ಥರಾಮರವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.