HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪುತ್ತೂರು: ಪೊಲೀಸರಿಂದ ಕಾರ್ಮಿಕನಿಗೆ ಹಲ್ಲೆ ಆರೋಪ – ಗಾಯಾಳು ಆಸ್ಪತ್ರೆಯಲ್ಲಿ ದಾಖಲು

Puttur_Advt_NewsUnder_1
Puttur_Advt_NewsUnder_1

ಪುತ್ತೂರು

ಪುತ್ತೂರು: ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಟೈಲ್ಸ್ ಹಾಕುವ ಕೆಲಸ ನಿರ್ವಹಿಸುವ ಕಾರ್ಮಿಕರೋರ್ವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುಣಚದ ಕಿಟ್ಟು ಎಂಬವರ ಪುತ್ರ ಜಯಂತ್ (38 ವ) ಎಂಬವರು ಆಸ್ಪತ್ರೆಯಲ್ಲಿ ದಾಖಲಾದ ಕಾರ್ಮಿಕ.

‘ಅ.13ರಂದು ರಾತ್ರಿ ಸ್ನೇಹಿತ ಬ್ರಹ್ಮನಗರದ ಪ್ರಶಾಂತ್ ಎಂಬವರು ಪೆಟ್ರೋಲ್ ತರಲೆಂದು ನನ್ನ ಸ್ಕೂಟರ್‌ನಲ್ಲಿ ಹೋಗಿದ್ದರು. ಅವರ ಬರುವಿಕೆಗಾಗಿ ಕಾಯುತ್ತಿದ್ದ ನಾನು, ಬ್ರಹ್ಮನಗರ ಸಮೀಪ ನಿಲ್ಲಿಸಿದ್ದ ಹಳೆಯ ಆಟೋ ರಿಕ್ಷಾವೊಂದರಲ್ಲಿ ಮಲಗಿದ್ದೆ. ಈ ವೇಳೆ ಅಲ್ಲಿಗೆ ಬಂದ ಪೊಲೀಸರು ನನ್ನನ್ನು ವಿಚಾರಿಸಿ ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ, ಹಿಂದಿರುಗಿ ಬಂದ ನನ್ನ ಸ್ನೇಹಿತನ ಮೇಲೂ ಪೊಲೀಸರು ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಪರಿಣಾಮ ನನ್ನ ಎಡ ಕೈ ಮುರಿತಕ್ಕೊಳಗಾಗಿದೆ.’, ಎಂದು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಜಯಂತ್‌ರವರು ಆರೋಪಿಸಿದ್ದಾರೆ.

‘ಸ್ಕೂಟರ್ ನಿಲ್ಲಿಸಿ ದಾಖಲೆ ಕೇಳಿದ ಪೊಲೀಸರು, ಹಿಂಬಾಲಿಸಿ ಬಂದು ಹಲ್ಲೆ ನಡೆಸಿದರು’

ಸ್ನೇಹಿತ ಜಯಂತ್ ಅವರ ಸ್ಕೂಟರ್‌ನಲ್ಲಿ ಪೆಟ್ರೋಲ್ ತರಲೆಂದು ನೆಹರುನಗರಕ್ಕೆ ಹೋಗಿ ಬರುವ ವೇಳೆ ನಾನು ಮೂತ್ರಶಂಕೆ ಮಾಡಲೆಂದು ಕಲ್ಲೇಗದಲ್ಲಿ ಸ್ಕೂಟರ್ ನಿಲ್ಲಿಸಿದ್ದ ವೇಳೆ ಬಂದ ಹೈವೇ ಪೆಟ್ರೋಲ್ ಪೊಲೀಸರು ನನ್ನಲ್ಲಿ ವಾಹನದ ದಾಖಲೆ ಪತ್ರ ಚಾಲನಾ ಪರವಾನಿಗೆ ಬಗ್ಗೆ ವಿಚಾರಿಸಿದರು. ಈ ಸಂದರ್ಭ ಇದು ನನ್ನ ಸ್ನೇಹಿತನ ವಾಹನ ಅವರಲ್ಲಿ ದಾಖಲೆ ಇರಬಹುದು ಎಂದಿದ್ದೆ. ಹಾಗಾದರೆ ನೀನು ಮುಂದೆ ಹೋಗು ನಾವು ಹಿಂದಿನಿಂದ ಬರುತ್ತೇವೆ ಎಂದು ಹೇಳಿದ್ದರು. ಅದರಂತೆ ನಾನು ಮುಂದೆ ಸ್ಕೂಟರ್‌ನಲ್ಲಿ ಬ್ರಹ್ಮನಗರಕ್ಕೆ ಬಂದು ಮನೆಗೆ ಹೋದೆ. ಬಳಿಕ ಪೊಲೀಸರು ನನ್ನ ಮನೆಗೆ ಬಂದು ನನಗೆ ಹಲ್ಲೆ ನಡೆಸಿದ್ದಲ್ಲದೆ ಆಟೋ ರಿಕ್ಷಾದಲ್ಲಿದ್ದ ಸ್ನೇಹಿತನಿಗೂ ಹಲ್ಲೆ ನಡೆಸಿದ್ದಾರೆ ಎಂದು ಪ್ರಶಾಂತ್‌ರವರು ಆರೋಪಿಸಿದ್ದಾರೆ.

ಹಲ್ಲೆ ಆರೋಪ ಸುಳ್ಳು: ಪೊಲೀಸರ ಸ್ಪಷ್ಟನೆ
ಹೆಲ್ಮೆಟ್ ಹಾಕದೆ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಸವಾರನನ್ನು ನಿಲ್ಲಿಸಿ ತಪಾಸಣೆ ನಡೆಸಿದ ವೇಳೆ ಆತನಲ್ಲಿ ಯಾವುದೇ ದಾಖಲೆ ಪತ್ರ ಇಲ್ಲದೇ ಇರುವುದು ಬೆಳಕಿಗೆ ಬಂದಿದೆ. ಈ ಕುರಿತು ವಾಹನದ ಮಾಲಕನನ್ನು ವಿಚಾರಿಸಲಾಗಿದೆ. ದ್ವಿಚಕ್ರ ವಾಹನವನ್ನು ಠಾಣೆಗೆ ಕೊಂಡೊಯ್ಯಲಾಗಿದೆ ಹೊರತು ಯಾರಿಗೂ ಹಲ್ಲೆ ನಡೆಸಿಲ್ಲ. ಹಲ್ಲೆ ಆರೋಪ ಸುಳ್ಳು ಎಂದು ಪುತ್ತೂರು ನಗರ ಪೊಲೀಸ್ ಠಾಣೆ ನಿರೀಕ್ಷಕ ಗೋಪಾಲ್ ನಾಯ್ಕ್‌ರವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.