ನೆಹರು ನಗರ: 9 ವರ್ಷದ ಬಾಲಕ ನಾಪತ್ತೆ ಪ್ರಕರಣ | ವಿಚಾರಣೆ ನೆಪದಲ್ಲಿ ಪೊಲೀಸರ ದೌರ್ಜನ್ಯ ಆರೋಪ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೆಹರುನಗರ ಕಾರೆಕ್ಕಾಡು ಸಮೀಪದ 9 ವರ್ಷದ ಬಾಲಕನೋರ್ವ ನಾಪತ್ತೆ ಪ್ರಕರಣದ ವಿಚಾರಣೆ ನೆಪದಲ್ಲಿ ನನಗೆ ಮತ್ತು ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಪೊಲೀಸರು ಒತ್ತಡ ಹೇರಿ ದೌರ್ಜನ್ಯ ನಡೆಸಿದ್ದಾರೆ ಎಂದು ಕಾರೆಕ್ಕಾಡು ನಿವಾಸಿ ಕಿರಣ್‌ರಾಜ್ ಎಂಬವರು ಎ.ಎಸ್ಪಿಯವರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ನೆಹರು ನಗರ ಸಮೀಪದ 9 ವರ್ಷದ ಬಾಲಕ ಪೈರೋಜ್ ಆಲಿ ಎಂಬವರು ಅ.9ರಂದು ನಾಪತ್ತೆಯಾಗಿದ್ದ ವಿಚಾರಕ್ಕೆ ಸಂಬಂಧಿಸಿ ಅ.11ರಂದು ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕುಸುಮಾಧರ್‌ರವರು ಕಾರೆಕ್ಕಾಡಿಗೆ ಬಂದು, ‘ನಿಮ್ಮ ಮನೆಯ ಸಮೀಪದ ಮುಸ್ಲಿಂ ಯುವಕನೋರ್ವ ಕಾಣೆಯಾಗಿರುವ ಸಂಗತಿ ನಿನಗೆ ಗೊತ್ತಿದೆ. ಆತನನ್ನು ನೀನು ಎಲ್ಲಿಗೆ ಕರೆದುಕೊಂಡು ಹೋಗಿದ್ದೀ…’ ಎಂದು ವಿಚಾರಿಸಿದಾಗ ನಮಗೆ ಏನು ಗೊತ್ತಿಲ್ಲ ಎಂದಿದ್ದೆ.

ಆದರೆ ಇನ್‌ಸ್ಪೆಕ್ಟರ್ ಜೊತೆಗಿದ್ದ ಪೊಲೀಸರು ನನ್ನ ಶರ್ಟ್‌ನ ಕಾಲರ್ ಹಿಡಿದು ದಲಿತ ಸಮುದಾಯಕ್ಕೆ ಸೇರಿದವನಾಗಿರುವ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇದಲ್ಲದೆ ನನ್ನ ಮೊಬೈಲ್ ಫೋನನ್ನೂ ಸಹ ನನ್ನ ಕೈಯಿಂದ ಕಿತ್ತುಕೊಂಡು ಹೋಗಿದ್ದಲ್ಲದೆ ನನ್ನ ಜೊತೆಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನಿಗೆ ಅವಾಚ್ಯವಾಗಿ ನಿಂದಿಸಿ ಮರುದಿನ ಠಾಣೆಗೆ ಕರೆಸಿ ಆತನಿಂದ ಬಲತ್ಕಾರವಾಗಿ ಹೇಳಿಕೆ ಪಡೆದುಕೊಂಡಿದ್ದಾರೆ.

ಪೊಲೀಸರ ಈ ಎಲ್ಲಾ ದರ್ಪದ ಚಟುವಟಿಕೆಗಳಿಂದ ನಾನು ಮಾನಸಿಕವಾಗಿ ನೊಂದಿರುತ್ತೇನೆ. ಮಾತ್ರವಲ್ಲದೇ ನನ್ನ ಪರಿಸರದಲ್ಲಿ ಸಾರ್ವಜನಿಕರು ನನ್ನನ್ನು ಅನುಮಾನದಿಂದ ನೋಡುವಂತೆ ಆಗಿದೆ. ನನಗೆ ಮಾನಸಿಕವಾಗಿ ಹಿಂಸೆ ನೀಡಿದ ಮಹಿಳಾ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಕಿರಣ್‌ರಾಜ್ ದೂರಿನಲ್ಲಿ ತಿಳಿಸಿದ್ದಾರೆ.

ನೆಹರು ನಗರದಲ್ಲಿ ಬಾಲಕನೊಬ್ಬನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ, ಆತ ಮಧ್ಯಾಹ್ನ ಮನೆಯಿಂದ ಹೋಗಿರುವುದನ್ನು ಬಾಲಕನ ತಾಯಿ ತಿಳಿಸಿದಂತೆ ಸ್ಥಳೀಯ ಹುಡುಗರು ನೋಡಿದ್ದರೂ ನಮ್ಮಲ್ಲಿ ನೋಡಿಲ್ಲ ಎಂದು ಸುಳ್ಳು ಹೇಳಿದ್ದರು, ಬಳಿಕ ಮತ್ತೆ ನೋಡಿದ್ದೇವೆ ಎಂದು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೇ, ನಾಪತ್ತೆಯಾಗಿರುವ ಬಾಲಕ ಸ್ಥಳೀಯ ಮನೆಯೊಂದರಲ್ಲಿ ಇದ್ದು ಅಲ್ಲಿಂದ ಮಕ್ಕಳ ಜೊತೆ ರೈಲ್ವೇ ಟ್ರ್ಯಾಕ್‌ನಲ್ಲಿ ಆಟವಾಡುತ್ತಿದ್ದ ಕುರಿತು ಮಾಹಿತಿ ನೀಡಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ ನಾವು ಯಾರನ್ನೂ ಬೆದರಿಸಿಲ್ಲ ಎಂದು ಮಹಿಳಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕುಸುಮಾಧರ್ ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.