HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕಲ್ಲುಗುಡ್ಡೆ: ವಿಶ್ವ ಕೈತೊಳೆಯುವ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1



ಕಡಬ: ನೂಜಿಬಾಳ್ತಿಲ ಗ್ರಾ ಪಂ ವ್ಯಾಪ್ತಿಯ ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರ ದಲ್ಲಿ ಅ. 15ರಂದು ವಿಶ್ವ ಕೈ ತೊಳೆಯುವ ದಿನಾಚರಣೆ ಆಚರಿಸಲಾಯಿತು.

ನೂಜಿಬಾಳ್ತಿಲ ಗ್ರಾ ಪಂ. ಅಭಿವೃದ್ಧಿ ಅಧಿಕಾರಿ ಆನಂದ ಎ. ಮಾತನಾಡಿ ಪ್ರತೀ ವರ್ಷ ಅಕ್ಟೋಬರ್ ನಲ್ಲಿ ‘ವಿಶ್ವ ಕೈ ತೊಳೆಯುವ ದಿನ’ವನ್ನಾಗಿ ಆಚರಿಸಲಾಗುತ್ತಿದ್ದು ಈ ವರ್ಷ ಕೊರೋನಾ ರೋಗಭಾದೆಯಿಂದ ಪ್ರತಿಯೊಬ್ಬ ರೂ ಕೈತೊಳೆಯುವುದು ಅತೀ ಅಗತ್ಯವಾಗಿದೆ ಎಂದರು.

‘ಸ್ವಚ್ಛೋತ್ಸವ ನಿತ್ಯೋತ್ಸವ ಮಾಸಾಚರಣೆ’ ಅ 2ರಿಂದ 31ರವರೆಗೆ ನಡೆಯುತ್ತಿದ್ದು ಸ್ವಚ್ಛತೆಗೆ ಆದ್ಯತೆ ನೀಡುವ ಉದ್ದೇಶದಿಂದ ಕೈತೊಳೆಯುವ ಪ್ರಾಕ್ಷಿತ್ಯತೆ ಮೂಲಕ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಾರ್ವಜನಿಕರು ನಿತ್ಯ ಕೈ ತೊಳೆಯುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದರು.

ನೂಜಿಬಾಳ್ತಿಲ ಕಿ ಆ ಸಹಾಯಕಿ ದಯಾಕಿರಣರವರು ಮಾಹಿತಿ ನೀಡಿ ವಿಶ್ವ ಕೈ ತೊಳೆಯುವ ದಿನಾಚರಣೆ ಮಾಹಿತಿ ನೀಡಿ ವಿಶ್ವ ವ್ಯಾಪಕವಾಗಿ ಹರಡಿರುವ ಕೊರೋನಾ‌ ವೈರಸ್ ಇನ್ನೂ ತನ್ನ ನಿಯಂತ್ರಣಕ್ಕೇ ಬರದೇ ಇರುವ ಕಾರಣ ಈ ವರ್ಷ ವಿಶ್ವ ಕೈ ತೊಳೆಯುವ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸುತ್ತದೆ ನೈರ್ಮಲ್ಯ ಮತ್ತು ಶುಚಿತ್ವಕ್ಕೆ ಪ್ರಮುಖ ಆದ್ಯತೆ ನೀಡುವುದರಿಂದ ಕೊರೋನಾ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದನ್ನುತಡೆಯಲು ಸಾದ್ಯವೆಂದ ಅವರು ಪ್ರತಿಯೊಬ್ಬರೂ ತನ್ನ ಕೈಗಳನ್ನು ಸೋಪು ಮತ್ತು ನೀರಿನಿಂದ ತೊಳೆಯಬೇಕೆಂದರು.


ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ರಜಿತ ಪದ್ಮನಾಭ, ಸ್ತ್ರೀಶಕ್ತಿ ಮಹಿಳೆಯರಾದ ವಾರಿಜ, ಹೇಮಾವತಿ, ಆಶಾ ಕಾರ್ಯಕರ್ತೆ ಶಿಲ್ಪಾ, ಅಂಗನವಾಡಿ ಸಹಾಯಕಿ ಗೀತಾ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಗುರುವಾ ಎಸ್ ಮೊದಲಾದವರು ಪ್ರಾತ್ಯಕ್ಷತೆ ನಡೆಸುವ ಮೂಲಕ ವಿಶ್ವ ಕೈ ತೊಳೆಯುವ ಆಚರಣೆಯನ್ನು ನಡೆಸಿದರು.

ಮಂಜುಳಾ, ರೇವತಿ, ಅಶೋಕ್ ಕುಮಾರ್ ಮಿತ್ತಂಡೇಲು, ಸತೀಶ್ ಬಳಕ್ಕ, ಕೇಶವ ಡೆಪ್ಪಾಜೆ, ಲಿಂಗಪ್ಪ ಗೌಡ ಬಾಂತಾಜೆ, ಕಮಲ ಮಂಜೋಳಿಮಲೆ, ಬೆನ್ನಿ ಮನೋಜ್ ನೂಜಿಬಾಳ್ತಿಲ, ಪುರಂದರ ರೈ ಕುಬುಲಾಡಿ, ಧನುಷ್ ಕಲ್ಲುಗುಡ್ಡೆ, ಗ್ರಾ.ಪಂ.ನ ತಮ್ಮಯ್ಯ ಗೌಡ, ಕುಶಾಲ, ಧನ್ ರಾಜ್, ಮೊದಲಾದವರು ಉಪಸ್ಥಿತರಿದ್ದರು. ನೂಜಿಬಾಳ್ತಿಲ ಗ್ರಾ.ಪಂ. ಕಾರ್ಯದರ್ಶಿ ಗುರುವ ಎಸ್. ಸ್ವಾಗತಿಸಿ, ಆಶಾ ಕಾರ್ಯಕರ್ತೆ ಶಿಲ್ಪಾ ವಂದಿಸಿದರು. ಅಂಗನವಾಡಿ ಸಹಾಯಕಿ ಗೀತಾ ಸಹಕರಿಸಿದರು.


ಪ್ರತಿಯೊಬ್ಬರೂ ತನ್ನ ಕೈಗಳನ್ನು 6 ಹಂತದಲ್ಲಿ ತೊಳೆಯಬೇಕು ಪ್ರಥಮವಾಗಿ ನಲ್ಲಿ ನೀರಿನಲ್ಲಿ ಕೈಗಳನ್ನು ಒದ್ದೆ ಮಾಡಿಕೊಂಡು ಉಪಯೋಗಿಸಿ ನಂತರ ಅಂಗೈಯನ್ನು ಬೆರಳುಗಳ ಸಂದು ಮಣಿಗಂಟು ಹಿಂಭಾಗ ಮುಂಭಾಗ ತೊಳೆದುಕೊಂಡು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.

– ದಯಾಕಿರಣ್  ಕಿ.ಆ.ಸಹಾಯಕಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.