HomePage_Banner
HomePage_Banner
HomePage_Banner
HomePage_Banner
HomePage_Banner

ಐತ್ತೂರು 3ನೇ‌ ವಾರ್ಡ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

Puttur_Advt_NewsUnder_1
Puttur_Advt_NewsUnder_1

ಕಡಬ: ಐತ್ತೂರು‌ ಗ್ರಾಮದ 3ನೇ ವಾರ್ಡ್ ಬೂತ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಅಂತಿಬೆಟ್ಟು ಬಾಲಕೃಷ್ಣ ಗೌಡ ರವರ ಮನೆಯಲ್ಲಿ ನಡೆಯಿತು.

ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಕೈಕುರೆ, ಜಿ.ಪಂ. ಸದಸ್ಯ ಪಿ.ಪಿ. ವರ್ಗಿಸ್, ಚುನಾವಣಾ ಉಸ್ತುವಾರಿ ಸೈಮನ್ ಕಡಬ, ಬೂತ್ ಅಧ್ಯಕ್ಷ ಬಾಲಕೃಷ್ಣ ಗೌಡ ಅಂತಿಬೆಟ್ಟು, ಟೋನಿ ಕೆರ್ಮಾಯಿ. ಕುರಿಯನ್ ಕೊಡೆಂಕಿರಿ, ಗ್ರಾ.ಪಂ. ಮಾಜಿ ಸದಸ್ಯರಾದ ಯೂಸುಫ್, ಇಸ್ಮಾಯಿಲ್ ಸುಂಕದಕಟ್ಟೆ, ಮನಮೋಹನ ಗೋಳ್ಯಾಡಿ, ರೋಹಿತ್, ಲೋಕೇಶ್, ರವಿ, ಯಶೋಧರ, ತೋಮಸ್, ಪ್ರಶಾಂತ್ ಕಲ್ಲಾಜೆ, ಈರೇಶ್ ಗೌಡ, ಅಜಯ್ ಗೌಡ, ಮೋನಪ್ಪ ಗೌಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಲ್ಲಾಜೆ, ಅಂತಿಬೆಟ್ಟು, ಐತೂರು ಬೈಲು, ಬೈದರಮೂಲೆ, ಕಂಪ, ಕಲ್ಲಾಜೆ ಸಂಪರ್ಕ ರಸ್ತೆ ಯನ್ನು ಊರವರ ಮನವಿಗೆ ಸ್ಪಂದಿಸಿ ಜಿ.ಪಂ. ವತಿಯಿಂದ ತುರ್ತು ದುರಸ್ಥಿಗೊಳಿಸಿದ ಜಿ.ಪಂ. ಸದಸ್ಯ ಪಿ. ಪಿ. ವರ್ಗಿಸ್ ರನ್ನು ಊರವರ ಪರವಾಗಿ ಹಾಗೂ ಸುಮಾರು 20 ವರ್ಷ ಗಳಿಂದ ಸುಧೀರ್ಘ ಬೂತ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಬಾಲಕೃಷ್ಣ ಗೌಡ ಅಂತಿಬೆಟ್ಟು ಅವರನ್ನು ಪಕ್ಷದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮತ್ಯಾಸ್ ಕೆರ್ಮಾಯಿ, ಕೇಶವ ಗೌಡ ಶೆಟ್ಟಿಪಾಲು, ರುಕ್ಮಯ್ಯ ಗೌಡ ಶೆಟ್ಟಿಪಾಲು, ಸುಜಯ್ ಕೆರ್ಪಡ ಸೇರಿದಂತೆ ಇತರರಿಗೆ ಪಕ್ಷದ ಧ್ವಜ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಲಾಯಿತು. 3ನೇ ವಾರ್ಡ್ ವ್ಯಾಪ್ತಿಯ 50 ಮಕ್ಕಳಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.