ಕೋವಿಡ್ ಹಿನ್ನಲೆ ಬೊಳುವಾರು ಆಂಜನೇಯ ಮಂತ್ರಾಲಯದಲ್ಲಿ ಸರಳ ನವರಾತ್ರಿ ಆಚರಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೊಳುವಾರು ಓಂ ಶ್ರೀ ಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಉತ್ಸವವು ಈ ಬಾರಿ ಕೋವಿಡ್ -19 ಮಾರ್ಗಸೂಚಿಯಂತೆ ಸರಳ ರೀತಿಯಲ್ಲಿ ಆಚರಿಸಲಾಗುವುದು ಎಂದು ಆಂಜನೇಯ ಮಂತ್ರಾಲಯದ ಧರ್ಮದರ್ಶಿ ತಿಳಿಸಿದ್ದಾರೆ.

ಪ್ರತಿ ವರ್ಷ ಸಾಂಸ್ಕ್ರತಿಕ ಕಾರ್ಯಕ್ರಮ, ಶೋಭಾಯಾತ್ರೆಗಳಿದ್ದು ಈ ಭಾರಿ ಅವೆಲ್ಲವನ್ನು ರದ್ದುಗೊಳಿಸಿದ್ದು, ಕೇವಲ ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗಿ ಕಾರ್ಯಕ್ರಮ ನಡೆಯಲಿದೆ.

ಅ.17 ರಂದು ಕಲಶ ಪ್ರತಿಷ್ಠೆ , 25 ರ ತನಕ ಪ್ರತಿ ನಿತ್ಯ ರಾತ್ರಿಭಜನೆ, ಮಹಾಪೂಜೆ ಜರುಗಲಿದ್ದು, ಅ.26ರಂದು ಬೆಳಗ್ಗೆ ಕಲಶ ವಿಸರ್ಜನೆ ನಡೆಯಲಿದೆ. ಭಕ್ತರಿಗೆ ನವರಾತ್ರಿ ಪೂಜಾ ಸೇವೆಗೆ ಅವಕಾಶ ಇದೆ ಎಂದು ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.