HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕೊರೋನಾರ್ಭಟದ ನಡುವೆ ನಾಯಿಗಳಿಗೆ ಮೆದುಳು ಜ್ವರ | ಬಲಿಯಾಗುತ್ತಿರುವ ಶ್ವಾನಗಳು- ಶ್ವಾನ ಪ್ರಿಯರಲ್ಲಿ ಹೆಚ್ಚಿದ ಆತಂಕ!

Puttur_Advt_NewsUnder_1
Puttur_Advt_NewsUnder_1
                                          ಸಾಂದರ್ಭಿಕ ಚಿತ್ರ

@ ಇಬ್ರಾಹಿಂ ಖಲೀಲ್‌ ಪುತ್ತೂರು

ಪುತ್ತೂರು: ಶ್ವಾನ ಪ್ರಿಯರಿಗೆ ಈ ಕೊರೋನಾದ ನಡುವೆ ಆಘಾತವೊಂದು ಎದುರಾಗಿದೆ. ಇದೀಗ ನಾಯಿಗಳಿಂದ ನಾಯಿಗಳಿಗೆ ಹರಡುವ ಮೆದುಳು ಜ್ವರದಿಂದಾಗಿ ಅತೀ ಹೆಚ್ಚಿನ ಪ್ರಮಾಣದಲ್ಲಿ ನಾಯಿಗಳು ಸಾವನ್ನಪ್ಪುವ ಘಟನೆ ಬೆಳಕಿಗೆ ಬರುತ್ತಿದೆ. ವರುಷದ ಯಾವುದೇ ಸಮಯದಲ್ಲೂ ನಾಯಿಗಳಿಗೆ ಬರಬಹುದಾದ ಈ ವೈರಸ್ ಇದೀಗ ಕೊರೋನಾದ ಮಧ್ಯೆ ಜನರಲ್ಲಿ ಮತ್ತಷ್ಟು ಆತಂಕಕ್ಕೆ ಎಡೆಮಾಡಿದೆ. ಬೀದಿನಾಯಿಗಳಿಗೆ ಈ ಕಾಯಿಲೆ ತಗುಲಿ ಬಲಿಯಾಗುತ್ತಿರುವುದರಿಂದ ಸಾಕು ನಾಯಿಗಳಿಗೂ ಈ ವೈರಸ್ ಹರಡುವ ಲಕ್ಷಣದಿಂದಾಗಿ ಶ್ವಾನ ಸಾಕುವವರಲ್ಲಿ ಭಯದ ವಾತಾವರಣ ಆವರಿಸಿದೆ. ಈ ರೋಗ ಮನುಷ್ಯನಿಗೂ ಅಂಟಬಹುದೇ ಎಂಬ ವಿಚಾರ ವೈಜ್ಞಾನಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ನಾಯಿಯಿಂದ ನಾಯಿಗೆ ವೈರಸ್ ಪಾಸ್!
ಈ ವೈರಸ್ ಒಂದು ವಿಚಿತ್ರವೇ ಸರಿ, ಯಾಕೆಂದರೆ ನಾಯಿಗಳಿಗೆ ಈ ಸೋಂಕು ಮೂರು ಮಾಸದ ಮೊದಲೇ ತಗುಲಿದರೂ ಪ್ರಾರಂಭದಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ, ಬಳಿಕ ಕೊನೆಯಲ್ಲಿ 10-15   ದಿನಗಳಾಗುವಾಗ ಈ ರೋಗದ ತೀವ್ರತೆಗೆ ಜೀವವನ್ನು ಕಳೆದುಕೊಂಡು ಬಿಡುತ್ತದೆ ಎಂದು ವರದಿಗಳಲ್ಲಿ ಕಾಣಬಹುದು. ನಾಯಿಗಳಿಗೆ ಈ ವೈರಸ್ ತಗುಲಿದರೆ ರೇಬಿಸ್ ರೋಗ ಪೀಡಿತ ನಾಯಿಗಳಂತೆ ವರ್ತಿಸಲು ಆರಂಭಿಸಿ ಅವುಗಳು ಇತರ ಶ್ವಾನಗಳ ಮೇಲೆ ಅಕ್ರಮಣ ನಡೆಸಲು ಮುಂದಾಗುತ್ತವೆ. ಈ ವೇಳೆ ಸಾಕು ಶ್ವಾನಗಳಿಗೂ ವೈರಸ್ ತಗುಲಿ ರೋಗಕ್ಕೆ ಕಾರಣವಾಗುತ್ತದೆ. ಇನ್ನೂ ಕೆಲವು ನಾಯಿಗಳಲ್ಲಿ ಮೂಗಿನಿಂದ ಕೀವು ಬರಲಾಂಭಿಸಿ, ಜ್ವರದ ಮಟ್ಟ ಹೆಚ್ಚಾದಂತೆ ಹುಚ್ಚು ನಾಯಿಗಳಂತೆ ವರ್ತಿಸಿ ಜನರಿಗೆ ತೊಂದರೆ ಕೊಡಲಾರಂಭಿಸಬಹುದು. ಇದಲ್ಲದೇ ಸೋಂಕಿತ ನಾಯಿಗಳು ಸಂಚರಿಸುವಾಗ ಬಾಯಿಯಿಂದ ಕೀವು ಮಿಶ್ರಿತ ನೀರು ದ್ರವಾಂಶ ಬೀಳುವುದರ ಕಾರಣದಿಂದಾಗಿ ಮತ್ತೊಂದು ನಾಯಿಗೂ ಕಾಯಿಲೆ ಸಲೀಸಾಗಿ ಅಂಟಬಹುದೆಂದು ಶ್ವಾನ ವೈದ್ಯರು ತಿಳಿಸಿದ್ದಾರೆ.

ಕಾಯಿಲೆಯ ಲಕ್ಷಣಗಳೇನು?
ಇದೊಂದು ಸಾಂಕ್ರಾಮಿಕ ರೋಗವಾಗಿರುವುದರಿಂದ, ರೋಗ ಪೀಡಿತ ಶ್ವಾನಗಳಲ್ಲಿ ವಿಪರೀತ ಜ್ವರದ ಪರಿಣಾಮದಿಂದ ತಲೆ ಎತ್ತಲಾಗುವುದಿಲ್ಲ, ಇದರಿಂದ ಆಹಾರ ಸೇವನೆ ತ್ಯಜಿಸಿ, ಕೇವಲ ನೀರನ್ನು ಮಾತ್ರ ಸೇವಿಸುವುದರಿಂದ ತೀರಾ ಕ್ಷೀಣಿಸಿ ಹೋಗುತ್ತದೆ. ನಾಯಿ ಕವುಚಿ ಮಲಗಿ ತನ್ನ ಎರಡು ಕೈಗಳ ಮಧ್ಯೆ ತಲೆಯನ್ನಿಟ್ಟು ಹೊರಳಾಡುತ್ತವೆ, ಇನ್ನೂ ಕೆಲವೊಂದು ನಾಯಿಗೆ ವಾಂತಿ ಭೇದಿಯಾಗುತ್ತವೆ. ಮಾತ್ರವಲ್ಲದೇ ನರ ದೌರ್ಬಲ್ಯವಾಗಿ ನಾಯಿಯ ಚಲನ ವಲನೆಗಳಿಗೆ ಅಸಾಧ್ಯವಾಗಿರುವುದರಿಂದ ಬಳಲಿ ಬೆಂಡಾಗಿಬಿಟ್ಟುತ್ತದೆ. ಕಣ್ಣಿನ ಪೊರೆ ಸಮಸ್ಯೆ ಎದುರಾಗಿ ಎದ್ದು ನಡೆಯಲಾಗದಷ್ಟು ದುಸ್ಥಿತಿ ಈ ಕಾಯಿಲೆಯ ಲಕ್ಷಣವಾಗಿವೆ. ಈ ರೋಗ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಉಲ್ಬಣಿಸುತ್ತದೆ ಎಂದು ವೈದ್ಯರು ಆಭಿಪ್ರಾಯಪಟ್ಟಿದ್ದಾರೆ. ನಾಯಿ ಮೆದುಳು ಜ್ವರದ ಬಗ್ಗೆ ಪ್ರತಿಕ್ರಿಯಿಸಿದ ಶ್ವಾನ ಪ್ರಿಯರೊಬ್ಬರು ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚಾಗಿ ನಾಯಿಗಳ ಜೀವ ಹಾನಿಯಾಗುತ್ತಿರುವುದು ಬೇಸರದ ಸಂಗತಿ. ಕೈಗೆಟುಕದ ಬೆಲೆಯನ್ನು ಹೊಂದಿರುವ ಲಸಿಕೆ, ಚುಚ್ಚುಮದ್ದುಗಳನ್ನು ಸರಕಾರ ಉಚಿತವಾಗಿ ನೀಡುವುದರೊಂದಿಗೆ ಸಾಕು ನಾಯಿಗಳನ್ನು ಸಂರಕ್ಷಿಸಬೇಕಾಗಿದೆ ಎನ್ನುತ್ತಾರೆ.

ಈ ವೈರಸ್‌ನಿಂದ ಮನುಷ್ಯರಿಗೆ ಅಪಾಯವಿಲ್ಲ
ರೋಗದ ಲಕ್ಷಣಕ್ಕೆ ತುತ್ತಾದ ನಾಯಿಗಳಿಗೆ ಶೀಘ್ರದಲ್ಲಿಯೇ ಸೂಕ್ತ ಚಿಕಿತ್ಸೆ ಕೊಡಿಸಿದ್ದರೆ ಶ್ವಾನಗಳನ್ನು ರಕ್ಷಿಸಬಹುದಾಗಿದೆ. ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ 90 ದಿನಗಳ ಶ್ವಾನ ಮರಿಗಳಿಗೆ ಡಿಸ್ಟೆಂಪರ್ ವ್ಯಾಕ್ಸಿನ್ ನೀಡಬೇಕಾಗುತ್ತದೆ. ಆದಾದ 90 ದಿನಗಳ ನಂತರ ಪ್ರತಿ ವರುಷವು ಚುಚ್ಚು ಮದ್ದು ನೀಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ನಾಯಿಗಳನ್ನು ರೋಗದಿಂದ ಮುಕ್ತಿಯಾಗಿಸಬಹುದು. ಈ ವೈರಸ್ ಕಾಯಿಲೆಯಿಂದ ಮನುಷ್ಯರಿಗೆ ಯಾವುದೇ ಆಪಾಯವಿರುವುದಿಲ್ಲ ಅಲ್ಲದೇ ಆಂಟಿ ಬಯೋಟಿಕ್ ಚಿಕಿತ್ಸೆಯ ಮುಖೇನ ರೋಗ ಬಾರದಂತೆ ತಡೆಗಟ್ಟಬಹುದಾಗಿದೆ. ಇಲಾಖೆಯಡಿಯಲ್ಲಿ ಯಾವುದೇ ಲಸಿಕೆಗಳು ಸರಬರಾಜು ಆಗುತ್ತಿಲ್ಲ, ಆದ್ದರಿಂದ ಶ್ವಾನ ಸಾಕುವವರು ಚುಚ್ಚು ಮದ್ದನ್ನು ಖರೀದಿ ಮಾಡಬೇಕಾಗುತ್ತದೆ. ಈಗಾಗಲೇ ಇಲಾಖೆಯಿಂದ ಈ ಕಾಯಿಲೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. -ಡಾ. ಧರ್ಮಪಾಲ ಕರಂದ್ಲಾಜೆ ಸಹಾಯಕ ನಿರ್ದೇಶಕರು, ಪಶು ವೈದ್ಯಕೀಯ ಆಸ್ಪತ್ರೆ ಪುತ್ತೂರು

ಕೊರೋನಾ ಕರಿಛಾಯೆಯಿಂದ ಲಸಿಕಾ ಶಿಬಿರಕ್ಕೆ ಬ್ರೇಕ್!
ಕೋವಿಡ್-19ರ ಅನ್ ಲಾಕ್ ಮಾರ್ಗಸೂಚಿಯನ್ವಯ ಹೆಚ್ಚು ಜನರನ್ನು ಸೇರಿಸಿ ಶಿಬಿರ ಏರ್ಪಡಿಸಲು ಅನುವು ಇಲ್ಲದಿರುವುದರಿಂದ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹುಚ್ಚು ನಾಯಿಗಳ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಾಧ್ಯವಾಗಲಿಲ್ಲ, ಮುಂದಿನ ದಿನಗಳಲ್ಲಿ ಶಿಬಿರ ನಡೆಸಲಿದ್ದೇವೆ ಎಂದು ಪಶು ವೈದ್ಯಾಧಿಕಾರಿ ತಿಳಿಸಿದರು. ಅ.2ರಿಂದ ಜಾನುವಾರುಗಳಿಗೆ ಕಾಲುಬಾಯಿ ಜ್ವರರೋಗ ನಿರೋಧಕ ಲಸಿಕೆ ನೀಡಬೇಕಾಗಿತ್ತು.ಕೊರೋನಾದ ಹಿನ್ನೆಲೆಯಿಂದಾಗಿ ಅ.12ರಿಂದ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.