ಆರೋಗ್ಯವಂತ ವ್ಯಕ್ತಿಗಳಿಗೆ 2022ವರೆಗೆ ಕೊರೊನಾ ಲಸಿಕೆ ಲಭಿಸದು! ; ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆ

Puttur_Advt_NewsUnder_1
Puttur_Advt_NewsUnder_1

ಜಿನೇವಾ: ಭಾರತಕ್ಕೆ ಕೊರೊನಾ ಸೊಂಕು ಕಾಲಿಟ್ಟು ವರ್ಷ ಸಮೀಪಿಸುತ್ತಾ ಬರುತ್ತಿದೆ.

ವಿಶ್ವಾದ್ಯಂತ ಜನರು ಈ ಮಹಾಮಾರಿಗೆ ಲಸಿಕೆಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಹಲವಾರು ದೇಶಗಳಲ್ಲಿ ಕೊರೊನಾ ಲಸಿಕೆಯ ಪ್ರಾಯೋಗಿಕ ಪರೀಕ್ಷೆಯೂ ಪ್ರಗತಿಯಲ್ಲಿದೆ.

ಈ ನಡುವೆಯೇ, ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ವಿಶ್ವ ರೋಗ್ಯ ಸಂಸ್ಥೆಯು ಮಹತ್ವದ ಹೇಳಿಕೆಯೊಂದನ್ನು ನೀಡಿದೆ.

ಒಂದು ವೇಳೆ ಕೊರೊನಾ ಲಸಿಕೆ ಪ್ರಯೋಗ ಯಶಸ್ವಿಯಾಗಿ ಅದು ಜನರ ಬಳಕೆಗೆ ಲಭ್ಯವಾದರೂ, ಆರೋಗ್ಯವಂತ ವ್ಯಕ್ತಿಗಳಿಗೆ ಹಾಗೂ ಯುವ ಸಮುದಾಯಕ್ಕೆ ಈ ಲಸಿಕೆ ಸಿಗಬೇಕಾದರೆ ಇನ್ನೆರಡು ವರ್ಷ ಕಾಯಲೇಬೇಕಂತೆ. ಅಂದರೆ ಇವರೆಲ್ಲರಿಗೆ ಕೊರೊನಾ ಲಸಿಕೆ ಲಭ್ಯವಾಗುವುದು 2022ರ ಬಳಿಕವಷ್ಟೇ!

ವಿಶ್ವ ಆರೋಗ್ಯ ಸಂಸ್ಥೆಯ ಸಾಮಾಜಿಕ ಜಾಲತಾಣ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಡಬ್ಲ್ಯು.ಹೆಚ್.ಒ.ನ ಪ್ರಧಾನ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಅವರು ತಿಳಿಸಿದ್ದಾರೆ.

‘ಕೊರೊನಾ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಆರೋಗ್ಯ ಯೋಧರು, ಸೋಂಕಿಗೆ ಶೀಘ್ರ ಒಳಗಾಗುವ ಅಪಾಯವನ್ನು ಹೊಂದಿರುವ ವ್ಯಕ್ತಿಗಳು ಹಾಗೂ ಪ್ರಾಯದ ವ್ಯಕ್ತಿಗಳಿಗೆ ಮೊದಲಿಗೆ ಕೊರೊನಾ ಲಸಿಕೆಯನ್ನು ನೀಡಬೇಕೆಂಬ ವಿಚಾರವನ್ನು ಎಲ್ಲರೂ ಒಪ್ಪುತ್ತಾರೆಂಬುದು ನನ್ನ ಭಾವನೆ’ ಎಂದು ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಅವರು ಅಭಿಪ್ರಾಯಪಟ್ಟರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.