ಐತ್ತೂರು: ಕಾಂಗ್ರೆಸ್ ಕಾರ್‍ಯಕರ್ತರ ಸಭೆ-ಜಿ.ಪಂ.ಸದಸ್ಯರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1

ಕಡಬ: ಐತ್ತೂರು ಗ್ರಾಮದ ೩ನೇ ವಾರ್ಡ್ ಬೂತ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯು ಅಂತಿಬೆಟ್ಟು ಬಾಲಕೃಷ್ಣ ಗೌಡರವರ ಮನೆಯಲ್ಲಿ ಅ.13ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಕೈಕುರೆ, ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗಿಸ್, ಚುನಾವಣಾ ಉಸ್ತುವಾರಿ ಸೈಮನ್ ಕಡಬ. ಬೂತ್ ಅಧ್ಯಕ್ಷ ಬಾಲಕೃಷ್ಣ ಗೌಡ ಅಂತಿಬೆಟ್ಟು, ಟೋನಿ ಕೆರ್ಮಾಯಿ. ಕುರಿಯನ್ ಕೊಡೆಂಕಿರಿ ಗ್ರಾ.ಪಂ. ಮಾಜಿ ಸದಸ್ಯ ಯೂಸುಫ್, ಇಸ್ಮಾಯಿಲ್ ಸುಂಕದಕಟ್ಟೆ, ಮನಮೋಹನ ಗೋಳ್ಯಾಡಿ, ರೋಹಿತ್, ಲೋಕೇಶ್, ರವಿ, ಯಶೋಧ, ತೋಮಸ್ ಇಡೆಯಾಳ, ಪ್ರಶಾಂತ್ ಕಲ್ಲಾಜೆ. ಈರೇಶ್ ಗೌಡ, ಅಜಯ್ ಗೌಡ, ಮೋನಪ್ಪ ಗೌಡ ಉಪಸ್ಥಿತರಿದ್ದರು.

ಜಿ.ಪಂ.ಸದಸ್ಯ ಪಿ.ಪಿ. ವರ್ಗೀಸ್‌ರಿಗೆ ಸನ್ಮಾನ
ಕಲ್ಲಾಜೆ-ಅಂತಿಬೆಟ್ಟು-ಐತೂರು ಬೈಲು-ಬೈದರಮೂಲೆ-ಕಂಪ-ಕಲ್ಲಾಜೆ ಸಂಪರ್ಕ ರಸ್ತೆಯನ್ನು ಊರವರ ಮನವಿಗೆ ಸ್ಪಂದಿಸಿ ಗ್ರಾಮ ಪಂಚಾಯತ್ ಮತ್ತು ಜಿ.ಪಂ. ವತಿಯಿಂದ ಅನುದಾನ ನೀಡಿ ತುರ್ತು ದುರಸ್ಥಿಗೊಳಿಸಲು ಕಾರಣಕರ್ತರಾದ ಜಿ.ಪಂ. ಸದಸ್ಯ ಪಿ.ಪಿ. ವರ್ಗಿಸ್‌ರವರಿಗೆ ನಾಗರಿಕರ ಪರವಾಗಿ ಸನ್ಮಾನಿಸಲಾಯಿತು. ಹಾಗೂ ಸುಮಾರು ೨೦ ವರ್ಷಗಳ ಸುಧೀರ್ಘ ಬೂತ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಾಲಕೃಷ್ಣ ಗೌಡ ಅಂತಿಬೆಟ್ಟು ಅವರನ್ನೂ ಪಕ್ಷದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮತ್ಯಾಸ್ ಕೆರ್ಮಾಯಿ, ಕೇಶವ ಗೌಡ ಶೆಟ್ಟಿಪಾಲು, ರುಕ್ಮಯ್ಯ ಗೌಡ ಶೆಟ್ಟಿಪಾಲು, ಸುಜಯ್ ಕೆರ್ಪಡ, ಹಾಗೂ ಇತರರಿಗೆ ಪಕ್ಷದ ಧ್ವಜ ನೀಡಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಲಾಯಿತು ಮತ್ತು ಚುನಾವಣಾ ಎದುರಿಸುವ ಬಗ್ಗೆ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಯಿತು. ೩ನೇ ವಾರ್ಡ್ ವ್ಯಾಪ್ತಿಯ ೫೦ ಮಕ್ಕಳಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಪುಸ್ತಕ ವಿತರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.