HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ನ್ಯೂ ಆರ್.ಹೆಚ್ ಸೆಂಟರ್ ನಲ್ಲಿ ವಿಶೇಷ ಕೊಡುಗೆಗಳ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
  • ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆ – ಕಾಸ್ಟ್‌ ಪ್ರೈಸ್‌ ಸೇಲ್‌

ಪುತ್ತೂರು: ಇಲ್ಲಿನ ನ್ಯೂ ಆರ್.ಎಚ್ ಸೆಂಟರ್ ಈ ವರ್ಷದ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳನ್ನು ಕಾಸ್ಟ್ ಪ್ರೈಸ್ ಸೇಲ್ ಮೂಲಕ ನೀಡುತ್ತಿದೆ. ಇದರ ಉದ್ಘಾಟನಾ ಕಾರ್ಯಕ್ರಮ ಅ.15ರಂದು ನ್ಯೂ ಆರ್.ಎಚ್ ಸೆಂಟರ್ ಮಳಿಗೆಯಲ್ಲಿ ನಡೆಯಿತು.  ಯುವ ಉದ್ಯಮಿ ಸಹಜ್ ರೈ ಬಳೆಜ್ಜ ದಂಪತಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆ ಬಳಿಕ ಮಾತನಾಡಿದ ಅವರು ಕೊರೊನಾ ಅಟ್ಟಹಾಸದ ಸಂದರ್ಭದಲ್ಲಿ ಗ್ರಾಹಕರಿಗಾಗಿ ವಿಶೇಷ ಆಫರ್ ನೀಡ್ತಾ ಇರುವ ನ್ಯೂ ಆರ್ ಎಚ್ ಸೆಂಟರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ಮಾಲಕರಾದ ಗೋಪಾಲ ಎಂ.ಯು ಮಾತನಾಡಿ ಕಳೆದ 25 ವರ್ಷಗಳ ಹಿಂದೆ ಸ್ಥಾಪನೆಯಾದ ನಮ್ಮ ಸಂಸ್ಥೆಯು ಮಹಾತ್ಮಾ ಗಾಂಧೀಜಿಯವರ ಸ್ವ ಉದ್ಯೋಗದ ಪರಿಕಲ್ಪನೆಯಲ್ಲಿ ಆರಂಭವಾಗಿದೆ. ಗ್ರಾಹಕರಿಗೆ ಅವಶ್ಯವಿರುವ ವಸ್ತುಗಳನ್ನು ಭಾರತದಾದ್ಯಂತ ಇರುವ ಮಾರ್ಕೆಟ್‍ಗಳಿಗೆ ಖುದ್ದು ಭೇಟಿಯಾಗಿ, ಖರೀದಿಸಿ ಬಳಿಕ ಅದನ್ನು ಕಡಿಮೆ ದರದಲ್ಲೇ ಗ್ರಾಹಕರಿಗೆ ನೀಡುವ ಮೂಲಕ ಈ ಸಂಸ್ಥೆ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡಿದೆ. ಅಷ್ಟೇ ಅಲ್ಲದೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಬಸ್ಟ್ಯಾಂಡ್ ಸಮೀಪ ಸಾರ್ವಜನಿಕ ಶುದ್ದ ನೀರಿನ ಘಟಕವನ್ನು ಪ್ರಪ್ರಥಮವಾಗಿ ಆರಂಭಿಸುವ ಮೂಲಕ ಈ ಸಂಸ್ಥೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದೆ ಎಂದು ಹೇಳಿದರು.

ಸಂಸ್ಥೆಯ ಮಾಲಕಿ ಶ್ರೀಮತಿ ಸೌಮ್ಯ ಗೋಪಾಲ ಮಾತನಾಡಿ, ವಿಶೇಷ ಆಫರ್‍ಗಳ ಬಗ್ಗೆ ಮಾಹಿತಿ ನೀಡಿದ್ರು. ಮಕ್ಕಳ ಉಡುಪುಗಳು, ಮಹಿಳೆಯರ ಉಡುಪುಗಳು, ಫ್ಯಾನ್ಸಿಸಿಲ್ಕ್, ಸಿಂಥೆಟಿಕ್, ಕಾಟನ್ ಸಾರೀಸ್‍ಗಳು, ಹಾಗೂ ಇತರ ಆಯ್ದ ಜವುಳಿಗಳ ಮೇಲೆ ಈ ವಿಶೇಷ ಯೋಜನೆ ಅನ್ವಯಿಸಲಿದೆ. ಇನ್ನು ಮಳಿಗೆಯಲ್ಲಿ ರೂ.30,000, ರೂ.50,000 ಹಾಗೂ ರೂ.70,000ದ ಮೇಲ್ಪಟ್ಟು ಮದುವೆಯ ಜವುಳಿ ಖರೀದಿಯ ಮೇಲೆ ವಿಶೆಷ ಕೊಡುಗೆ ಹಾಗೂ ರಿಯಾಯಿತಿಗಳನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಪಿಜಿ ಜಗನ್ನಿವಾಸ್ ರಾವ್, ಸಹಜ್ ರೈ ಬಳೆಜ್ಜ ಅವರ ಪತ್ನಿ ದೀಕ್ಷಾ ಸಹಜ್ ರೈ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿಗಳು ಇನ್ನಿತರ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.