HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಾಟೆಕಲ್ ಶಾಖೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಮಂಗಳೂರು ಇದರ ನಾಟೆಕಲ್ ಶಾಖೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಮಂಜನಾಡಿ ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷ ಮಹಮ್ಮದ್ ಹನೀಫ್, ಪಂಚಾಯತ್ ಪಿ.ಡಿ.ಒ ಮಂಜಪ್ಪ ,ಸದಸ್ಯರಾದ  ಅಬ್ಬಾಸ್ ಎಮ್,  ಭಾಸ್ಕರ್ ಪಿ. ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಘದ ಸದಸ್ಯರಾದ ಅಬ್ಬಾಸ್ ಎಮ್ ಇವರು ಈ ಸಂಘವು ಮಹಾಮಾರಿ ಕೋವಿಡ್-೧೯ ನ ಸಮಯದಲ್ಲಿ ಕೇವಲ ೪% ಬಡ್ಡಿದರದಲ್ಲಿ ಕೋವಿಡ್-೧೯ ವಿಶೇಷ ಚಿನ್ನಾಭರಣ ಸಾ ನೀಡಿದ್ಡು, ಇದರಿಂದ ಹೆಚ್ಚಿನ ಗ್ರಾಹಕರಿಗೆ ಸಹಾಯವಾಗಿದ್ದು ಇನ್ನು ಮುಂದೆಯು ಇಂತಹ ಸಾಲ ಸೌಲಭ್ಯಗಳನ್ನು ನೀಡಲಿ ಎಂದು ಹಾರೈಸಿದರು. ಪಂಚಾಯತ್ ಪಿ.ಡಿ.ಒ  ಮಂಜಪ್ಪ ಇವರು ನಾಟೆಕಲ್ ಪ್ರದೇಶದಲ್ಲಿ ಜನರಿಗೆ ಬ್ಯಾಂಕಿಂಗ್ ಸೇವೆಯ ಅವಶ್ಯಕತೆಯನ್ನು ಮನಗಂಡ ಪಂಚಾಯತ್ ತನ್ನ ಕಟ್ಟಡದಲ್ಲಿ ಬ್ಯಾಂಕಿಂಗ್ ಸೇವೆ ತರಲು ಟೆಂಡರ್ ಕರೆದಾಗ ಆತ್ಮಶಕ್ತಿ ಎನ್ನುವ ಒಂದು ಒಳ್ಳೆಯ ಸಹಕಾರಿ ಸಂಘವು ತಮ್ಮ ಕಟ್ಟಡದಲ್ಲಿ ಶಾಖೆ ತೆರೆದಿರುವುದರಿಂದ ಜನರಿಗೆ ಅನುಕೂಲಕರವಾಗಿದೆ ಎನ್ನುವುದು ಒಂದು ಸಂತಸದ ವಿಚಾರ ಎಂದರು. ಮತ್ತೋರ್ವ ಗ್ರಾಹಕರಾದ ಶ್ರೀ ಭಾಸ್ಕರ್ ಇವರು ಸಂಘವು ಸಾಲ ಸೌಲಭ್ಯಗಳನ್ನು ನೀಡಿರುವುದಕ್ಕೆ ನಾವು ಈ ಸಂಸ್ಥೆಗೆ ಋಣಿಯಾಗಿದ್ದು ಸಾಲವನ್ನು ಮರುಪಾವತಿಸುವುದು ನಮ್ಮ ಕರ್ತವ್ಯ ಅಂತೆಯೇ ಈ ಜಾಗದಲ್ಲಿ ಈ ಸಂಸ್ಥೆಯು ರಾಷ್ಟ್ರೀಯ ಬ್ಯಾಂಕಿಗಳಿಗಿಂತ ಉತ್ತಮವಾಗಿ ಸೇವೆ ನೀಡುತ್ತಿದ್ದು ಮುಂದೆಯೂ ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಹಾರೈಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ  ಚಿತ್ತರಂಜನ್ ಬೋಳಾರ್‌ರವರು ಮಾತನಾಡಿ ಎಲ್ಲಾ ಸದಸ್ಯರ ಸಹಕಾರದಿಂದ ಠೇವಣಿಗಳ ಸಂಗ್ರಹಣೆಯಲ್ಲಿ, ಸಾಲ ನೀಡುವಿಕೆಯಲ್ಲಿ ಹಾಗೂ ವಸೂಲಾತಿಯಲ್ಲಿ ಹೆಚ್ಚಿನ ಪ್ರಗತಿಯನ್ನು ಈ ಶಾಖೆ ಸಾಧಿಸಿದೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆಯನ್ನು ಗ್ರಾಹಕರಿಗೆ ತಲುಪಿಸಲು ನಾವು ಪ್ರಯತ್ನಿಸುತ್ತೇವೆ ಎಂದರು. ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ನಿರ್ದೇಶಕರಾದ ಶ್ರೀಯುತ ಚಂದ್ರಹಾಸ್ ಮರೋಳಿ ಇವರು ಉಪಸ್ಥಿತರಿದ್ದರು.

ನಾಟೆಕಲ್ ಶಾಖೆಯ ಶಾಖಾಧಿಕಾರಿ  ಪ್ರವೀಣ್ ಸ್ವಾಗತಿಸಿದರು, ಮುಖ್ಯಕಾರ್ಯನಿರ್ವಹಾಣಾಧಿಕಾರಿ  ಸೌಮ್ಯ ವಿಜಯ್ ಧನ್ಯವಾದ ಸಮರ್ಪಿಸಿದರು, ಯಶವಂತಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.